ಹಸು, ಕುರಿ, ಕೋಳಿ ಸೇರಿದಂತೆ ಹೈನುಗಾರಿಕೆಗೆ ಸಿಗಲಿದೆ ₹57,000 ಸಾಲ! ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

Story Highlights

ಜಾನುವಾರು ಸಾಕಾಣಿಕೆ ಮಾಡುವವರು ಅವುಗಳಿಗಾಗಿ ಶೆಡ್ ನಿರ್ಮಾಣ ಮಾಡುವುದಕ್ಕೆ, ಸರ್ಕಾರದ ಈ ಒಂದು ಯೋಜನೆಯ ಮೂಲಕ ಆರ್ಥಿಕ ಸಹಾಯ ಸಿಗುತ್ತದೆ.

ರೈತರು ಕೃಷಿ ಕೆಲಸಗಳನ್ನು (Agriculture) ಮಾತ್ರ ನಂಬಿಕೊಂಡಿದ್ದರೆ ಬದುಕು ಸಾಗಿಸುವುದು ಕಷ್ಟ. ಹಾಗಾಗಿ ಸರ್ಕಾರವು ಕೃಷಿಯ ಜೊತೆಗೆ ಸ್ವಂತ ಉದ್ಯಮ (Own Business) ಶುರು ಮಾಡಿ ಎಂದು ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಹಳ್ಳಿ ಕಡೆ ಜಾನುವಾರುಗಳ ಸಾಕಾಣಿಕೆ ಮಾಡಬಹುದು.

ಕುರಿ, ಕೋಳಿ, ಹಂದಿ ಸಾಕಾಣಿಕೆ ಮಾಡುವವರು ಒಳ್ಳೆಯ ಲಾಭವನ್ನು ಸಹ ಪಡೆಯುತ್ತಿದ್ದಾರೆ. ಜಾನುವಾರು ಸಾಕಾಣಿಕೆ ಮಾಡುವವರು ಅವುಗಳಿಗಾಗಿ ಶೆಡ್ ನಿರ್ಮಾಣ ಮಾಡುವುದಕ್ಕೆ, ಸರ್ಕಾರದ ಈ ಒಂದು ಯೋಜನೆಯ ಮೂಲಕ ಆರ್ಥಿಕ ಸಹಾಯ ಸಿಗುತ್ತದೆ.

ಹೊಸ ಯೋಜನೆ! ಕರೆಂಟ್ ಬಿಲ್ ಕಟ್ಟೋ ತಪತ್ರಯ ಬೇಡ ಅಂದ್ರೆ ನೀವು ಕೂಡ ಅರ್ಜಿ ಸಲ್ಲಿಸಿ

ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

ಜಾನುವಾರು ಸಾಕಾಣಿಕೆಗೆ ಸಹಾಯ ಮಾಡುತ್ತಿರುವುದು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಆಗಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಜಾನುವಾರು ಸಾಕಾಣಿಕೆಗಾಗಿ ಶೆಡ್ ನಿರ್ಮಾಣ ಮಾಡುವುದಕ್ಕಾಗಿ ಸಹಾಯ ಮಾಡಲಾಗುತ್ತಿದ್ದು, ಶೆಡ್ ನಿರ್ಮಾಣಕ್ಕಾಗಿ ₹57,000 ರೂಪಾಯಿಗಳ ಸಹಾಯಧನ (Subsidy Loan) ನೀಡಲಾಗುತ್ತದೆ.

ಈ ಮೊದಲು ಶೆಡ್ ನಿರ್ಮಾಣಕ್ಕಾಗಿ ₹43,000 ರೂಪಾಯಿ ಸಹಾಯಧನ ನೀಡಲಾಗುತ್ತಿತ್ತು, ಆದರೆ ಈಗ ಮೊತ್ತವನ್ನು ಏರಿಸಲಾಗಿದ್ದು, ₹57,000 ರೂಪಾಯಿ ಕೊಡಲಾಗುತ್ತದೆ.

ಮಹಿಳೆಯರಿಗೆ 2000 ರೂಪಾಯಿ ಜೊತೆಗೆ ಇನ್ನೂ 1200 ರೂ. ಸಿಗುವ ಮತ್ತೊಂದು ಹೊಸ ಯೋಜನೆ

dairy farmingಯಾರಿಗೆಲ್ಲಾ ಸಿಗಲಿದೆ ಈ ಯೋಜನೆಯ ಸೌಲಭ್ಯ?

ಸರ್ಕಾರದಿಂದ ಸಿಕ್ಕಿರುವ ಮಾಹಿತಿಯ ಅನುಸಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗ ಹೀಗೆ ಎಲ್ಲಾ ಜಾತಿಯವರಿಗೂ ಈ ಸೌಲಭ್ಯ ಸಿಗಲಿದೆ. 4 ಅಥವಾ ಅದಕ್ಕಿಂತ ಹೆಚ್ಚಿನ ಜಾನುವಾರುಗಳನ್ನು ಸಾಕುತ್ತಿರುವವರು ಅವುಗಳನ್ನು ನೋಡಿಕೊಳ್ಳಲು ಶೆಡ್ ನಿರ್ಮಾಣ ಮಾಡುವುದಕ್ಕೆ ಸರ್ಕಾರದ ಸಹಾಯ ಪಡೆಯಬಹುದು. ಈ ಯೋಜನೆಯಲ್ಲಿ ₹57,000 ರೂಪಾಯಿ ಸಾಲ ಸೌಲಭ್ಯ (Loan Facility) ನೀಡಲಾಗುತ್ತದೆ.

ಪಿಯುಸಿ ಓದುತ್ತಿರುವವರಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ವಿದ್ಯಾರ್ಥಿಗಳೆ ಇಂದೇ ಅರ್ಜಿ ಸಲ್ಲಿಸಿ

ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

ನಿಮ್ಮ ಬಳಿ ಜಾನುವಾರುಗಳು ಇದೆ ನಿಮ್ಮ ಗ್ರಾಮದ ಪಶು ವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ ತೆಗೆದುಕೊಂಡ ನಂತರ, ಆ ಎಲ್ಲಾ ದಾಖಲೆಗಳನ್ನು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಸಲ್ಲಿಸಬೇಕು. ಬಳಿಕ ನಿಮಗೆ ಸ್ವೀಕೃತಿ ಅರ್ಜಿ ಕೊಡಲಾಗುತ್ತದೆ. ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಅರ್ಜಿಯನ್ನು ಪರಿಶೀಲಿಸಿ, ಎಲ್ಲವೂ ಸರಿ ಇದ್ದರೆ, ವಾರ್ಷಿಕ ಕ್ರಿಯಾ ಯೋಜನೆಯ ಜೊತೆಗೆ ಸೇರಿಸಿ, ಮೇಲಧಿಕಾರಿಗಳಿಗೆ ನೀಡಲಾಗುತ್ತದೆ. ಅವರಿಂದ ಒಪ್ಪಿಗೆ ಸಿಕ್ಕ ನಂತರ, ನಿಮಗೆ ಶೆಡ್ ನಿರ್ಮಾಣಕ್ಕಾಗಿ ಹಣ ನೀಡಲಾಗುತ್ತದೆ.

Cow Farmingನರೇಗಾ ಯೋಜನೆಯಲ್ಲಿ ಶೆಡ್ ಹೇಗಿರಬೇಕು?

ನರೇಗಾ ಯೋಜನೆ ಮೂಲಕ ನಿರ್ಮಾಣ ಮಾಡುವ ಶೆಡ್ 10 ಅಡಿ ಅಗಲ ಇರಬೇಕು, 18 ಅಡಿಗಳ ಗೋಡೆ ಹೊಂದಿರಬೇಕು. 5 ಅಡಿ ಎತ್ತರ ಇರುವ ಗೋಡೆ ಜೊತೆಗೆ ಗೋದಲಿ/ಮೇವು ತೊಟ್ಟಿ ಇದೆಲ್ಲವೂ ಇರಬೇಕು. ಒಳಗೆ ಇರುವ ಜಾನುವಾರುಗಳ ಉಸಿರಾಟಕ್ಕೆ ಗಾಳಿ, ಬೆಳಕು ಬರುವ ಹಾಗೆ ಶೀಟ್ ಗಳನ್ನು ಸಹ ಹಾಕಿಸಬೇಕು.

ಒಂದೇ ಫೋನ್ ನಂಬರ್ ಎಷ್ಟು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬಹುದು? ಇನ್ಮುಂದೆ ಹೊಸ ರೂಲ್ಸ್

ಯೋಜನೆಯ ಮೂಲಕ ನಿಮಗೆ ಸಿಗುವ 57,000 ಹಣದಲ್ಲಿ, 10,556 ರೂಪಾಯಿಗಳನ್ನು ಕೂಲಿಗಾಗಿ, 46,444 ರೂಪಾಯಿಗಳನ್ನು ಅಗತ್ಯವಿರುವ ವಸ್ತುಗಳನ್ನು ಪಡೆಯಲು ಬಳಸಬಹುದು.

Get 57,000 loan for dairy farming including cow, sheep, Poultry Farming

Related Stories