Bank Balance : ಒಂದು ಬಾರಿ ತೆರಿಗೆ ಮಿತಿಯೊಳಗೆ ನಾವು ಬಂದ ಮೇಲೆ ನಮ್ಮ ಎಲ್ಲಾ ಹಣಕಾಸಿನ ವಹಿವಾಟುಗಳು ಕೂಡ ಮಾನಿಟರ್ ಆಗುತ್ತವೆ. ನಾವು ಮಾಡಿದ ಎಲ್ಲಾ ಹೂಡಿಕೆಗಳು, ನಾವು ಪಡೆದುಕೊಂಡ ಹಣ, ನಮಗೆ ಸಿಕ್ಕಿದ ಬಡ್ಡಿ ದರಗಳು ಎಲ್ಲವೂ ಕೂಡ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಗಮನಕ್ಕೆ ಬಂದಿರುತ್ತದೆ.

ಒಂದು ವೇಳೆ ಯಾವುದೋ ಒಂದು ವಿಷಯದಲ್ಲಿ ಅಸಮರ್ಪಕತೆ ಇದೆ ಎಂದಾಗ ನಮಗೆ ತಕ್ಷಣ ನೋಟಿಸ್ ಬರುತ್ತದೆ. ಈಗ ನಮ್ಮ ಮೂಲ ದಾಖಲೆಗಳಾದ ಆಧಾರ್ ಕಾರ್ಡ್ (Aadhaar Card), ಪಾನ್ ಕಾರ್ಡ್ ಎಲ್ಲಾ ಕಡೆ ಲಿಂಕ್ ಆಗಿರುವುದರಿಂದ ಯಾವುದೇ ಹಣಕಾಸಿನ ಸಂಸ್ಥೆಯ ಜೊತೆಗೆ ನಮ್ಮ ಹಣಕಾಸಿನ ವಹಿವಾಟುಗಳನ್ನು ನಾವು ಮುಚ್ಚಿಡಲು ಸಾಧ್ಯವಿಲ್ಲ.

Big update for those who are taking loan in bank and paying EMI

ಇದೇ ರೀತಿ ಬ್ಯಾಂಕ್ ಆಗಲಿ ಅಥವಾ ಇತರ ಹಣಕಾಸಿನ ಸಂಸ್ಥೆಗಳೇ ಆಗಲಿ ನಮ್ಮ ಪಾನ್ ಕಾರ್ಡ್ (Pan Card) ಇಲ್ಲದೆ ದೊಡ್ಡ ಮೊತ್ತದ ಹಣಕಾಸಿನ ವಹಿವಾಟುಗಳನ್ನು ಮಾಡಲು ಅನುವು ಮಾಡಿಕೊಡುವುದಿಲ್ಲ.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಈ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತೆ! ಲೋನ್ ಅಪ್ಲೈ ಮಾಡಿ

ಸೇವಿಂಗ್ಸ್ ಬ್ಯಾಂಕ್ ಅಥವಾ ಎಸ್ ಬಿ ಯಲ್ಲಿ ಎಷ್ಟು ಹಣ ಡೆಪಾಸಿಟ್ ಮಾಡಬಹುದು ?

ಇದೇ ರೀತಿ ನಮ್ಮ ಸೇವಿಂಗ್ಸ್ ಅಕೌಂಟ್ ಅಥವಾ ಎಸ್ ಬಿ ಅಕೌಂಟ್ ನಲ್ಲಿ (Savings Account) ಕೂಡ ತುಂಬಾ ಹೆಚ್ಚಿನ ಹಣಕಾಸಿನ ವಹಿವಾಟುಗಳು ಕಂಡು ಬಂದಲ್ಲಿ ತೆರಿಗೆ ಇಲಾಖೆ ನಮಗೆ ನೋಟಿಸ್ ನೀಡಬಹುದು.

ನಾವು ಎಷ್ಟು ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಗಳನ್ನು (Bank Account) ಹೊಂದಿರಬೇಕು ಹಾಗೂ ಪ್ರತಿ ಸೇವಿಂಗ್ಸ್ ಅಕೌಂಟ್ ನಲ್ಲಿ ಎಷ್ಟು ಹಣವನ್ನು ಡೆಪಾಸಿಟ್ ಮಾಡಬಹುದು ಎನ್ನುವ ಬಗ್ಗೆ ಯಾವುದೇ ಮಿತಿಯನ್ನು ಆರ್ ಬಿ ಐ ಹೇರದೆ ಇದ್ದರೂ ತೆರಿಗೆ ಇಲಾಖೆಯ ಗಮನಕ್ಕೆ ಈ ಎಲ್ಲ ವಿಷಯಗಳು ಬಂದಿರುತ್ತವೆ.

ಒಂದು ಆರ್ಥಿಕ ವರ್ಷದಲ್ಲಿ ಸಂಬಳದ ಹೊರತಾಗಿ ನಾವೇನಾದರೂ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ಅಥವಾ ಡೆಪಾಸಿಟ್ ಮಾಡಿದ್ದಲ್ಲಿ ಇದರ ಬಗ್ಗೆ ಸೂಕ್ತ ಕಾರಣಗಳನ್ನು ನಾವು ಕೊಡಬೇಕಾಗಿ ಬರಬಹುದು. ಇದೇ ರೀತಿ ನಾವು ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಇಂದ ಮಾಡುವ ನಮ್ಮ ಎಲ್ಲಾ ಎಫ್ ಡಿ (Fixed Deposit) ಹಾಗೂ ಆರ್ ಡಿ ಸೇವಿಂಗ್ಸ್ ಗಳು ಕೂಡ ತೆರಿಗೆಯ ವ್ಯಾಪ್ತಿಗೆ ಬರುತ್ತವೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಹೊಸ ಅಪ್ಡೇಟ್! ಹೊಸ ನಿಯಮ

Bank Accountಎಸ್.ಬಿ ಯಲ್ಲಿ ಈ ಮೊತ್ತದ ಹಣ ಇದ್ದರೆ ಸಿಗಲಿದೆ ತೆರಿಗೆ ವಿನಾಯಿತಿ

ಎಸ್ ಬಿ ಅಥವಾ ಸೇವಿಂಗ್ಸ್ ಬ್ಯಾಂಕ್ ನ ಮೂಲಕ ನಾವು ಪಡೆದುಕೊಂಡ ಬಡ್ಡಿಯೂ ಕೂಡ ತೆರಿಗೆ ವ್ಯಾಪ್ತಿಗೆ ಈಗ ಬರುತ್ತದೆ. ಸಾಮಾನ್ಯ ಜನರಿಗೆ ಒಂದು ಆರ್ಥಿಕ ವರ್ಷದಲ್ಲಿ 10,000 ರೂ. ಗಳನ್ನು ಎಸ್‌ ಬಿ ಯಲ್ಲಿ ಇಟ್ಟಾಗ ಅದಕ್ಕೆ ತೆರಿಗೆ ವಿನಾಯಿತಿ ಇದೆ. ಇದೇ ರೀತಿ ಹಿರಿಯ ನಾಗರಿಕರಿಗೆ ಈ ಮಿತಿ 50,000 ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಬಿಟ್ಟು ಎಸ್‌ ಬಿ ಯಲ್ಲಿರುವ ಬೇರೆ ಮೊತ್ತಕ್ಕೆ ತೆರಿಗೆ ಅನ್ವಯಿಸುತ್ತದೆ.

ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುವ ಟಾಪ್ 5 ಬ್ಯಾಂಕುಗಳು ಇವು! ಬಂಪರ್ ಕೊಡುಗೆ

ಪ್ರಸ್ತುತ ಬ್ಯಾಂಕಿನ ಬಡ್ಡಿ ದರಗಳ ಬಗ್ಗೆ ಮಾತನಾಡುವುದಾದರೆ ಈಗ ಸಾರ್ವಜನಿಕ ವಲಯದ ಪ್ರಮುಖ ಹಾಗೂ ಖಾಸಗಿ ಬ್ಯಾಂಕುಗಳು ಎಸ್ ಬಿ ಸೇವಿಂಗ್ಸ್ ನ ಮೇಲೆ 2.7 ರಿಂದ 4 ಶೇಕಡಾದಷ್ಟು ಬಡ್ಡಿಯನ್ನು ನೀಡುತ್ತವೆ. ಹೀಗಾಗಿ ಸೇವಿಂಗ್ಸ್ ಅಕೌಂಟ್ ನಲ್ಲಿ ಕೂಡ ದೊಡ್ಡ ಮೊತ್ತದ ಹಣ ಇಟ್ಟಾಗ ಅಲ್ಲಿಯೂ ಕೂಡ ನಮ್ಮ ಆದಾಯ ಬಹಳ ಹೆಚ್ಚಾಗುತ್ತದೆ.

ನಮ್ಮ ಸೇವಿಂಗ್ಸ್ ಅಕೌಂಟ್ ನಲ್ಲಿ ಸುಮಾರು 10 ಕೋಟಿ ಹಣ ಇದೆ ಎಂದಾದಲ್ಲಿ ಇದು ಕೂಡ ತೆರಿಗೆ ಇಲಾಖೆಯ ಗಮನಕ್ಕೆ ಬಂದು ನಮ್ಮಿಂದ ಇದಕ್ಕೆ ಸರಿಯಾದ ಉತ್ತರಗಳನ್ನು ಕೇಳಬಹುದು.

ಅನ್ನದಾತ ರೈತರಿಗೆ ಸಂತಸದ ಸುದ್ದಿ! ನಿಮ್ಮ ಕೈ ಸೇರಲಿದೆ ₹25,000 ರೂಪಾಯಿ ಸಹಾಯಧನ

You can’t keep more money in the bank account, know the Reason