ನೀವು ಅತಿಯಾಗಿ ನಿದ್ರೆ ಮಾಡ್ತೀರಾ? ಹಾಗಾದ್ರೆ ಈ ವಿಚಾರ ತಿಳಿಯಲೇ ಬೇಕು
Oversleeping : ಹೆಚ್ಚು ಗಂಟೆಗಳ ನಿದ್ರೆ ಆರೋಗ್ಯಕ್ಕೆ ಹಾನಿಕಾರಕ. ದೇಹದ ಶಕ್ತಿಯನ್ನು ಕುಗ್ಗಿಸಿ, ಮೆದುಳಿನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಈ ಹಾನಿಕಾರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಮತೋಲಿತ ನಿದ್ರೆ ಪದ್ದತಿಯನ್ನು ಅಳವಡಿಸಿಕೊಳ್ಳಿ.
- ಹೆಚ್ಚು ನಿದ್ರೆ ಮೆಟಬಾಲಿಸಂ ತಗ್ಗಿಸುತ್ತದೆ
- ದೀರ್ಘ ಕಾಲ ನಿದ್ರೆ ದೇಹದ ನೋವುಂಟು ಮಾಡಬಹುದು
- ಅಧಿಕ ನಿದ್ರೆ ಮನೋಸ್ವಸ್ಥತೆಗೆ ಹಾನಿ ಮಾಡುತ್ತದೆ
Oversleeping: ನಮಗೆ ಸ್ವಲ್ಪ ಸಮಯ ಸಿಕ್ಕರೆ ಸಾಕು, ಹಾಸಿಗೆ ಹಿಡಿದು ನಿದ್ರೆಗೆ ಜಾರುವುದು ಅಭ್ಯಾಸ ಯಾರಿಗಿಲ್ಲ ಹೇಳಿ! ಆದರೆ ಈ ಹೆಚ್ಚು ಹೊತ್ತು ನಿದ್ರೆ ಆರೋಗ್ಯಕ್ಕೆ ಸಮಸ್ಯೆಯಾಗಬಹುದು ಎಂಬುದು ನಿಮಗೆ ಗೊತ್ತಾ?
ಆರೋಗ್ಯ ತಜ್ಞರ ಪ್ರಕಾರ, ದಿನಕ್ಕೆ 7-9 ಗಂಟೆಗಳಿಗಿಂತ ಹೆಚ್ಚು ನಿದ್ರೆ (Too Much Sleep) ನಮ್ಮ ದೇಹದ ಮೇಲೆ ಹಲವಾರು ಪ್ರತಿಕೂಲ ಪರಿಣಾಮ ಬೀರಬಹುದು.
ನಿದ್ರೆಯ ಅವಧಿ ನಿಯಂತ್ರಣದಲ್ಲಿರಬೇಕು. ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ದೇಹ ಸಂಪೂರ್ಣವಾಗಿ ವಿಶ್ರಾಂತಿ ಪಡೆಯುತ್ತದೆ. ಆದರೆ ಇದರಿಂದ ಮೆಟಬಾಲಿಸಂ (Metabolism) ಕುಗ್ಗುತ್ತದೆ. ಇದು ದೇಹದ ಶಕ್ತಿಯನ್ನು ಕಡಿಮೆ ಮಾಡುತ್ತಿದ್ದು, ದಿನಪೂರ್ತಿ ದೈಹಿಕ ಚಟುವಟಿಕೆ ತಗ್ಗಿಸಿ, ನಿರಾಸಕ್ತಿ ಮೂಡಿಸುತ್ತದೆ.
ಇದನ್ನೂ ಓದಿ: ನಿಮಗೆ ಪದೇ ಪದೇ ತಲೆನೋವು ಬರುತ್ತಾ? ಹಾಗಾದ್ರೆ ಅದು ಗಂಭೀರ ಸಮಸ್ಯೆಯ ಸೂಚನೆ!
ಹೆಚ್ಚು ನಿದ್ರೆ ಹೃದಯದ ಆರೋಗ್ಯಕ್ಕೂ ಹಾನಿ ತರುತ್ತದೆ. ದಿನಪೂರ್ತಿ ಹಾಸಿಗೆಯಲ್ಲಿ ಸುಮ್ಮನೆ ಮಲಗುವ ಕಾರಣದಿಂದ ಮೈಕೈ ನೋವು (Muscle pain) ಉಂಟಾಗಬಹುದು. ಸರಿಯಾದ ನಿದ್ರಾ ಬಂಗಿ (Sleeping posture) ಇಲ್ಲದೆ ಇದ್ದರೆ, ಬೆನ್ನು ನೋವು ಮತ್ತು ಹೊಟ್ಟೆ ಅಸಹನೆಯಂತಹ ಸಮಸ್ಯೆಗಳು ಎದುರಾಗಬಹುದು.
ಆತಿಯಾಗಿ ನಿದ್ರೆ ಮಾಡುವುದು ದೀರ್ಘಕಾಲಿಕವಾಗಿ ಮೆದುಳಿನ ಕಾರ್ಯಕ್ಷಮತೆ (Cognitive function) ಕುಗ್ಗಿಸುವ ಸಾಧ್ಯತೆ ಇದೆ. ಹೆಚ್ಚಿನ ಜನರು ವಾರಾಂತ್ಯದಲ್ಲಿ ಹೆಚ್ಚು ನಿದ್ರೆ ಮಾಡುವುದರಿಂದ ಶನಿವಾರ-ಭಾನುವಾರದ ನಂತರ ದೇಹ ಮತ್ತೆ ಯಥಾಸ್ಥಿತಿ ತಲುಪಲು ಕಷ್ಟವಾಗಬಹುದು. ಇದು ಕೆಲಸದ ಸಾಮರ್ಥ್ಯ ಹಾಗೂ ಚಿಂತನೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಹೆಚ್ಚಿನ ನಿದ್ರೆ ಡಿಪ್ರೆಶನ್ (Depression) ಹಾಗೂ ಮನೋಸ್ವಸ್ಥತೆಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಜಾಗತಿಕ ಅಧ್ಯಯನಗಳ ಪ್ರಕಾರ, ಸುಮಾರು 15% ಜನರಿಗೆ ಹೆಚ್ಚಿದ ನಿದ್ರೆ ತೀವ್ರ ಮಾನಸಿಕ ಒತ್ತಡದ ಸಮಸ್ಯೆಯನ್ನುಂಟು ಮಾಡುತ್ತದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ, ದೈನಂದಿನ ಚಟುವಟಿಕೆಗಳು ತೊಂದರೆಗೆ ಸಿಲುಕಬಹುದು.
ಇದನ್ನೂ ಓದಿ: ತೂಕ ಇಳಿಸಲು ಖಾಲಿ ಹೊಟ್ಟೆಯಲ್ಲಿ ಟೊಮೇಟೋ ಜ್ಯೂಸ್ ಟ್ರೈ ಮಾಡಿ! 7 ದಿನಕ್ಕೆ ರಿಸಲ್ಟ್
ಹೆಚ್ಚು ನಿದ್ರೆ ರಕ್ತದ ಸಕ್ಕರೆ ಮಟ್ಟ (Blood sugar levels) ನಿಯಂತ್ರಣಕ್ಕೂ ಸಮಸ್ಯೆ ತರಬಹುದು. ನಿಯಂತ್ರಣವಿಲ್ಲದ ನಿದ್ರೆ ದೇಹದ ಚಟುವಟಿಕೆಯನ್ನು ನಿಷ್ಕ್ರಿಯಗೊಳಿಸಿ, ಜೀರ್ಣ ಕ್ರಿಯೆಯನ್ನು ಕೂಡಾ ಕಡಿಮೆ ಮಾಡಬಹುದು.
ಆದ್ದರಿಂದ, ನಿಯಂತ್ರಿತ ನಿದ್ರೆ ಅಭ್ಯಾಸ ಮಾಡುವುದು ಅವಶ್ಯಕ. ಒಮ್ಮೆಲೇ ಬದಲಾವಣೆ ತರುವ ಬದಲು, ದಿನಕ್ಕೆ 30 ನಿಮಿಷಗಳಷ್ಟು ನಿದ್ರೆ ಕಡಿಮೆ ಮಾಡುವ ಅಭ್ಯಾಸವನ್ನು ಪ್ರಾರಂಭಿಸಿ.
ಹೆಚ್ಚು ಹೊತ್ತು ಮಲಗುವ ಹವ್ಯಾಸವಿದ್ದರೆ, ಬೆಳಿಗ್ಗೆ ವಾಕ್ (Walk) ಹೋಗುವುದು, ಪ್ರೀತಿಪಾತ್ರರೊಂದಿಗೆ ಮಾತನಾಡುವುದು ಅಥವಾ ಸಣ್ಣ ಸಣ್ಣ ಕೆಲಸಗಳನ್ನು ಕೈಗೊಳ್ಳುವುದು ಉತ್ತಮ.
ಸಮತೋಲಿತ ನಿದ್ರೆಯಿಂದಲೇ ಆರೋಗ್ಯಕರ ಜೀವನ ಸಾಧ್ಯ!
Oversleeping Health Risks You Should Know
Our Whatsapp Channel is Live Now 👇