ಬ್ರಷ್ ಮಾಡಿದ ತಕ್ಷಣ ನೀರು, ಕಾಫಿ ಕುಡಿತೀರಾ? ಹಾಗಾದ್ರೆ ನಿಲ್ಲಿಸಿ! ಯಾಕೆ ಗೊತ್ತಾ

ಪ್ರತಿದಿನ ಬೆಳಿಗ್ಗೆ ಅಥವಾ ರಾತ್ರಿ ಬ್ರಷ್ ಮಾಡಿದ ತಕ್ಷಣ ನೀರು ತಾಗ್ಬಾರ್ದು ಅನ್ನೋದು ಹಿರಿಯರ ಮಾತು ಅಂತ ಅನ್ಕೋತೀವಿ. ಆದರೆ ಇದರ ಹಿಂದೆ ಸೈನ್ಸ್ ಸೀಕ್ರೆಟ್ ಇದೆ. ದಂತ ವೈದ್ಯರು ಹೇಳೋದು ಕೂಡ ನಿಮಗೆ ಶಾಕ್ ಅನಿಸಬಹುದು.

  • ಫ್ಲೂರೈಡ್ ಹಲ್ಲುಗಳನ್ನ ಕ್ಯಾವಿಟಿಯಿಂದ ರಕ್ಷಿಸುತ್ತದೆ
  • ಬ್ರಷ್ ಮಾಡಿದ ತಕ್ಷಣ ನೀರು ಕುಡಿದರೆ ಪರಿಣಾಮ ಕಡಿಮೆಯಾಗುತ್ತದೆ
  • ಕನಿಷ್ಠ 15 ನಿಮಿಷ ಕಾದ್ಮೇಲೆ ನೀರು ಕುಡಿಯುವುದು ಒಳ್ಳೆಯದು

ಹಲ್ಲು ಆರೋಗ್ಯ (Dental Care) ಎಂದರೆ ಕೇವಲ ಕ್ಲೀನಿಂಗ್ ಅಲ್ಲ, ಅದರ ಹಿಂದಿರುವ ಸೈನ್ಸ್‌ ಕೂಡ ಇದೆ. ಟೂತ್‌ಪೇಸ್ಟ್‌ನಲ್ಲಿರುವ (toothpaste) ಫ್ಲೂರೈಡ್ ಹಲ್ಲಿನ ಮೇಲಿನ ಎನಾಮೆಲ್‌ಗೆ ಕವಚದಂತೆ ಕೆಲಸ ಮಾಡ್ತದೆ. ಇದು ಬ್ಯಾಕ್ಟೀರಿಯಾ ವಿರುದ್ಧ ಹೋರಾಡಿ, ಕ್ಯಾವಿಟಿ ತಡೆಯುತ್ತೆ. ಆದರೆ ಈ ಫ್ಲೂರೈಡ್ ತನ್ನ ಕೆಲಸ ಸರಿಯಾಗಿ ಮಾಡ್ಬೇಕಂದ್ರೆ ಅದು ಹಲ್ಲಿನ ಮೇಲೆ ಸ್ವಲ್ಪ ಹೊತ್ತು ಉಳಿಯಬೇಕು.

ಆದ್ರೆ ಬ್ರಷ್ ಮಾಡಿದ ತಕ್ಷಣ ನೀರು ಕುಡಿದರೆ, ಆ ಫ್ಲೂರೈಡ್ ಲೇಯರ್ ಕೂಡಲೇ ತೊಳೆದು ಹೋಗುತ್ತೆ. ಹೀಗೆ ಮಾಡಿದ್ರೆ ಬ್ರಷ್ ಮಾಡಿದ ಪ್ರಯೋಜನ ಅರ್ಧದಲ್ಲೇ ನಿಲ್ಲುತ್ತೆ. ಅದಕ್ಕಾಗಿಯೇ ದೊಡ್ಡವರು “ಬ್ರಷ್ ಮಾಡಿದ ತಕ್ಷಣ ನೀರು ಕುಡಿಯ ಬೇಡ” ಅಂತ ಹೇಳ್ತಿದ್ದರು.

ದಂತ ವೈದ್ಯರ ಪ್ರಕಾರ, ಫ್ಲೂರೈಡ್ ತನ್ನ ಪರಿಣಾಮ ತೋರಿಸಲು ಕನಿಷ್ಠ 10-15 ನಿಮಿಷ ಬೇಕು. ಅಷ್ಟರಲ್ಲಿ ಅದು ಎನಾಮೆಲ್ ಬಲಪಡಿಸಿ ಹಲ್ಲುಗಳನ್ನು ಗಟ್ಟಿಯಾಗಿ ಇಡುತ್ತೆ. ನೀವು ತಕ್ಷಣ ನೀರು, ಟೀ, ಕಾಫಿ ಏನಾದ್ರೂ ಕುಡಿದರೆ, ಆ ರಕ್ಷಣೆ ನಷ್ಟವಾಗುತ್ತೆ.

ಹಲ್ಲುಗಳ ಆರೋಗ್ಯ ಕಾಪಾಡ್ಬೇಕಂದ್ರೆ, ಬೆಳಿಗ್ಗೆ ಎದ್ದು ನೀರು ಕುಡಿಯೋ ಅಭ್ಯಾಸ ಒಳ್ಳೆಯದಾಗಿರಬಹುದು, ಆದರೆ ಬ್ರಷ್ ಮಾಡಿದ ತಕ್ಷಣ ಬೇಡ. 15 ನಿಮಿಷ ಕಾಯ್ದಮೇಲೆ ಕುಡಿದ್ರೆ ನಿಮ್ಮ ಹಲ್ಲುಗಳು ದೀರ್ಘಕಾಲ ಬಲವಾಗಿ ಇರುತ್ತವೆ.

ಡಾಕ್ಟರ್‌ಗಳು ಇನ್ನೂ ಒಂದು ಸಲಹೆ ಕೊಡ್ತಾರೆ – ದಿನಕ್ಕೆ ಕನಿಷ್ಠ ಎರಡು ಬಾರಿ ಬ್ರಷ್ ಮಾಡ್ಬೇಕು. ಇದರಿಂದ ಫ್ಲೂರೈಡ್ ಹಲ್ಲುಗಳ ಮೇಲೆ ನಿಯಮಿತವಾಗಿ ಕೆಲಸ ಮಾಡಿ, ಕ್ಯಾವಿಟಿ ರಹಿತ ಹಲ್ಲುಗಳ ಸೌಂದರ್ಯ ಹೆಚ್ಚಿಸುತ್ತದೆ. ಹೀಗಾಗಿ ಸಣ್ಣ ಅಭ್ಯಾಸ ಬದಲಾವಣೆ, ದೊಡ್ಡ ದಂತ ಆರೋಗ್ಯ!

English Summary▼

Ramya

Sub Editor, Cinema, Health & Lifestyle : 👤 Ramya is a journalist with five years of experience in… More »

Related Stories