ರೇಷನ್ ಕಾರ್ಡ್ ಇದ್ದವರಿಗೆ ಬೆಳ್ಳಂಬೆಳ್ಳಗೆ ಸಿಹಿ ಸುದ್ದಿ! ಇನ್ಮುಂದೆ ಸಿಗಲಿದೆ ಇನ್ನಷ್ಟು ಬೆನಿಫಿಟ್

ಹಣ ಸಹಾಯ, ಬಡ್ಡಿರಹಿತ ಸಾಲಗಳು (Loan), ಇಂಥ ಅನೇಕ ಸೌಲಭ್ಯಗಳು ರೇಷನ್ ಕಾರ್ಡ್ ಇದ್ದವರಿಗೆ ಸಿಗಲಿದೆ.

Ration Card : ನಮ್ಮ ದೇಶದಲ್ಲಿರುವ ಬಡವರ್ಗದ ಜನರಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಜನರು ಸಹ ಸರ್ಕಾರದ ಅನುಕೂಲಗಳನ್ನು ಪಡೆಯುತ್ತಿದ್ದಾರೆ.

ಜನರಿಗಾಗಿ ಸರ್ಕಾರ ತಂದಿರುವ ಪ್ರಮುಖವಾದ ಸೌಲಭ್ಯ ಎಂದರೆ ರೇಶನ್ ಕಾರ್ಡ್ ಎಂದು ಹೇಳಬಹುದು. ಇದರಿಂದ ನಾನಾ ತರಹರ ಉಪಯೋಗಗಳು ಜನರಿಗೆ ಸಿಗುತ್ತಿದೆ. ಬಹಳಷ್ಟು ಜನರು ಉಚಿತವಾಗಿ ಅಥವಾ ಬಹಳ ಕಡಿಮೆ ಬೆಲೆಯಲ್ಲಿ ಆಹಾರ ಪದಾರ್ಥಗಳನ್ನು ಪಡೆಯುತ್ತಿದ್ದಾರೆ..

ಸ್ವಂತ ಕೃಷಿ ಭೂಮಿ ಇರೋರಿಗೆ ಉಚಿತ ಬೋರ್ ವೆಲ್! ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ

ಇನ್ನು ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಗೆ ಬರುತ್ತಲೇ ಇದ್ದು, ಅವೆಲ್ಲವೂ ಸಹ ರೇಷನ್ ಕಾರ್ಡ್ ಇರುವವರಿಗೆ ಸುಲಭವಾಗಿ ಸಿಗುತ್ತದೆ. ಹಣ ಸಹಾಯ, ಬಡ್ಡಿರಹಿತ ಸಾಲಗಳು (Loan), ಇಂಥ ಅನೇಕ ಸೌಲಭ್ಯಗಳು ರೇಷನ್ ಕಾರ್ಡ್ ಇದ್ದವರಿಗೆ ಸಿಗಲಿದೆ.

ಇದೀಗ ಸರ್ಕಾರವು ರೇಶನ್ ಕಾರ್ಡ್ ಹಾಗು ಅಂತ್ಯೋದಯ ಕಾರ್ಡ್ ಇರುವವರಿಗೆ ಮತ್ತೊಂದು ಹೊಸ ಸೌಲಭ್ಯ ನೀಡುವುದಕ್ಕೆ ಮುಂದಾಗಿದ್ದು, ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ನೋಡಿ..

Ration Cardಜೂನ್ ತಿಂಗಳಿನಿಂದ ಹೊಸ ಸೌಲಭ್ಯ!

ಹೌದು ಜೂನ್ ತಿಂಗಳಿನಿಂದ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಈ ಹೊಸ ಸೌಲಭ್ಯ ಒದಗಿಸಿ ಕೊಡಲಾಗುತ್ತಿದ್ದು, ಅಂತ್ಯೋದಯ ಕಾರ್ಡ್ ಇರುವವರಿಗೆ 21ಕೆಜಿ ಅಕ್ಕಿ, 14ಕೆಜಿ ರಾಗಿ, ಆದ್ಯತಾ ಕಾರ್ಡ್ ಇರುವವರಿಗೆ 14 ಕೆಜಿ ಅಕ್ಕಿ, 3 ಕೆಜಿ ರಾಗಿ. ಬಿಪಿಎಲ್ ಕಾರ್ಡ್ ಇರುವವರಿಗೆ 3ಕೆಜಿ ಅಕ್ಕಿ, 2 ಕೆಜಿ ರಾಗಿಯನ್ನು ಜೂನ್ ತಿಂಗಳಿನಿಂದ ವಿತರಣೆ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಇದಷ್ಟೇ ಅಲ್ಲದೇ ಹೆಚ್ಚುವಾಗಿ ಕೊಡುವ ಅಕ್ಕಿ ಹಣವನ್ನು ಇನ್ನುಮುಂದೆ ನಿಮ್ಮ ಕೈಗೆ ಕೊಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ.

ಮನೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಇದ್ರೂ ರೇಷನ್ ಕಾರ್ಡ್ ಬಂದ್ ಆಗುತ್ತಾ? ಸರ್ಕಾರದ ಹೊಸ ರೂಲ್ಸ್

ಇಂಥವರಿಗೆ ರೇಷನ್ ಕಾರ್ಡ್ ಬೇಗ ಸಿಗಲಿದೆ

BPL Ration Cardನಮಗೆಲ್ಲ ಗೊತ್ತಿರುವ ಹಾಗೆ ಕಳೆದ ವರ್ಷ ಎಲೆಕ್ಷನ್ ನಡೆಯುವುದಕ್ಕಿಂತ ಮೊದಲೇ ಸುಮಾರು 2.95 ಲಕ್ಷ ಜನರು ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದರು, ಆದರೆ ಎಲೆಕ್ಷನ್ ಹಾಗೂ ಇನ್ನಿತರ ಪ್ರಮುಖ ಕಾರಣಗಳಿಂದ ರೇಷನ್ ಕಾರ್ಡ್ (New Ration Card) ವಿತರಿಸಲು ಸಾಧ್ಯ ಆಗಿರಲಿಲ್ಲ. ಆದರೆ ಈಗ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಇಂಥ ಕ್ಯಾಟಗರಿಗೆ ಬರುವ ಜನರಿಗೆ ಶೀಘ್ರದಲ್ಲೇ ರೇಷನ್ ಕಾರ್ಡ್ ಸಿಗಲಿದೆ.

ಸ್ವಂತ ಆಸ್ತಿ, ಸೈಟ್, ಮನೆ, ಜಮೀನು ಇರುವವರಿಗೆ ಸರ್ಕಾರದಿಂದ ಹೊಸ ಆದೇಶ! ಖಡಕ್ ನಿರ್ಧಾರ

ಯಾರಿಗೆಲ್ಲಾ ಗಂಭೀರವಾದ ಆರೋಗ್ಯ ಸಮಸ್ಯೆ ಇದೆಯೋ, ಕ್ಯಾನ್ಸರ್ , ಕಿಡ್ನಿ ಸಮಸ್ಯೆ, ಹೃದಯ ರೋಗ ಇದೆಲ್ಲವೂ ಇರುವಂಥವರಿಗೆ ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಹಾಗೆಯೇ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಯಾವಾಗಿನಿಂದ ಅವಕಾಶ ಸಿಗುತ್ತದೆ ಎಂದು ಸರ್ಕಾರ ಇನ್ನು ತಿಳಿಸಿಲ್ಲ. ಆದರೆ ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಪರಿಶೀಲನೆ ಕೆಲಸ ನಡೆಯುತ್ತಿದ್ದು, ಆದಷ್ಟು ಬೇಗ ರೇಷನ್ ಕಾರ್ಡ್ ಗಳ ವಿತರಣೆ ಆಗಲಿದೆ.

More benefits for those who have ration card

Follow us On

FaceBook Google News