ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸೋಕೆ ಅವಕಾಶ! ಆದ್ರೆ ಈ ದಾಖಲೆ ಇರಬೇಕಷ್ಟೆ

ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಹಾಗೂ ರೇಷನ್ ಕಾರ್ಡ್ ಅಪ್ಡೇಟ್ ಕೂಡ ಶುರು ಆಗುತ್ತದೆ ಎಂದು ತಿಳಿಸಿದ್ದಾರೆ.

New Ration Card : ನಮಗೆಲ್ಲ ಗೊತ್ತಿರುವ ಹಾಗೆ ಪ್ರಸ್ತುತ ನಮ್ಮ ರಾಜ್ಯದಲ್ಲಿ ಬಹಳ ಬೇಡಿಕೆ ಇರುವುದು ಬಿಪಿಎಲ್ ರೇಷನ್ ಕಾರ್ಡ್. ಏಕೆಂದರೆ ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರೆ ಬಿಪಿಎಲ್ ಕಾರ್ಡ್ ಇರಲೇಬೇಕು.

ಆದರೆ ಹಲವು ಜನರ ಬಳಿ ಬಿಪಿಎಲ್ ಕಾರ್ಡ್ (BPL Card) ಇಲ್ಲ, ಇನ್ನಷ್ಟು ಜನರು ತಿದ್ದುಪಡಿ ಮಾಡಿಸಬೇಕಿದೆ. ಎಲೆಕ್ಷನ್ ಗಿಂತ ಮೊದಲೇ ಲಕ್ಷಾಂತರ ಜನರು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದರು.

ಅನ್ನಭಾಗ್ಯ ಯೋಜನೆಯ ಹಣ ಅಕೌಂಟ್ ಗೆ ಇನ್ನೂ ಬರ್ತಿಲ್ವಾ? ಈ ಒಂದು ಕೆಲಸ ತಪ್ಪದೇ ಮಾಡಿ

ಇನ್ನು ಹಲವರು ತಿದ್ದುಪಡಿಗೆ (Ration Card Update) ಅರ್ಜಿ ನೀಡಿದ್ದರು, ಆದರೆ ಎಲೆಕ್ಷನ್ ಇದ್ದ ಕಾರಣ ಅಪ್ಲಿಕೇಶನ್ ಹಾಕಿದ್ದ ಎಲ್ಲರ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಪರಿಶೀಲನೆಯ ಕೆಲಸ ಇನ್ನೇನು ಕೊನೆಯ ಹಂತದಲ್ಲಿದೆ, ಈಗಾಗಲೇ ತುರ್ತು ಪರಿಸ್ಥಿತಿ ಇರುವಂತಹ 700 ಜನರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ಸರ್ಕಾರದ ಕಡೆಯಿಂದಲೇ ಮಾಹಿತಿ ಸಿಕ್ಕಿದೆ. ಈ ಮಾಹಿತಿಗಳನ್ನು ಆಹಾರ ಇಲಾಖೆಯ ಸಚಿವರೇ ನೀಡಿದ್ದಾರೆ.

Ration Cardಹೊಸ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯ ಶುರು ಆಗೋದು ಯಾವಾಗ?

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಶುರುವಾಗಿ ಈಗಾಗಲೇ 10 ತಿಂಗಳು ಕಳೆದು ಹೋಗಿದೆ ಆದರೆ ಇನ್ನೂ ಕೂಡ ಹಲವರ ಹತ್ತಿರ ಈ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಇಲ್ಲ. ಅವರೆಲ್ಲರೂ ಹೊಸದಾಗಿ ರೇಷನ್ ಕಾರ್ಡ್ ಗೆ ಅಪ್ಲಿಕೇಶನ್ ಹಾಕುವ ಪ್ರಕ್ರಿಯೆ ಮತ್ತು ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸುವ ಪ್ರಕ್ರಿಯೆ ಯಾವಾಗ ಶುರುವಾಗುತ್ತದೆ ಎಂದು ಕಾಯುತ್ತಿದ್ದು, ಅಂಥವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ದಿನ ಬಿಡುಗಡೆ! ಮಹಿಳೆಯರೇ ಖಾತೆ ಚೆಕ್ ಮಾಡಿಕೊಳ್ಳಿ

ಹಳೆಯ ಅಪ್ಲಿಕೇಶನ್ ಗಳ ಪರಿಶೀಲನೆ ಪ್ರಕ್ರಿಯೆ ಶೀಘ್ರದಲ್ಲೇ ಮುಗಿಯಲಿದ್ದು, ಅದು ಮುಗಿಯುತ್ತಿದ್ದ ಹಾಗೆ ವಿತರಣೆ ಕೆಲಸ ಶುರು ಆಗುತ್ತದೆ. ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಹಾಗೂ ರೇಷನ್ ಕಾರ್ಡ್ ಅಪ್ಡೇಟ್ ಕೂಡ ಶುರು ಆಗುತ್ತದೆ ಎಂದು ತಿಳಿಸಿದ್ದಾರೆ.

BPL Ration Cardರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ನೀವು ಈಗಲೇ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡರೆ ಒಳ್ಳೆಯದು..

*ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
*ಫೋನ್ ನಂಬರ್
*ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
*ಆರು ವರ್ಷದ ಒಳಗಿನ ಮಕ್ಕಳಿಗೆ ಬರ್ತ್ ಸರ್ಟಿಫಿಕೇಟ್

ಇನ್ಮುಂದೆ ಇವರಿಗೆ ಮಾತ್ರ ಸಿಗೋದು ಹೊಸ ರೇಷನ್ ಕಾರ್ಡ್! ಸರ್ಕಾರದಿಂದ ಹೊಸ ರೂಲ್ಸ್

ಸರ್ಕಾರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಬಗ್ಗೆ ಪ್ರಕಟಣೆ ನೀಡಿ, ದಿನಾಂಕ ತಿಳಿಸಿದ ನಂತರ ನಿಮಗೆ ಹತ್ತಿರ ಇರುವ ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಜೊತೆಗೆ ರೇಶನ್ ಕಾರ್ಡ್ ಅಪ್ಡೇಟ್ ಮಾಡಿಸುವುದಕ್ಕೂ ಅರ್ಜಿ ಸಲ್ಲಿಸಬಹುದು.

Opportunity to apply for new BPL ration card, Here is the details