ಬಾಡಿಗೆ ಕಟ್ಟುವವರಿಗೆ ಸಿಹಿ ಸುದ್ದಿ, ಬೆಂಗಳೂರಿನ ಈ ಏರಿಯಾಗಳಲ್ಲಿ ಕಡಿಮೆಯಾಗಿದೆ ಬಾಡಿಗೆ ದರ!

ಬೆಂಗಳೂರಿನ ಪೂರ್ವ ಮತ್ತು ಮಧ್ಯಭಾಗದಲ್ಲಿ ಮೊದಲಿನ ಹಾಗಿಲ್ಲ ಈಗ ನಿಶ್ಚಲತೆ ಬಂದಿದೆ. ಈ ಪ್ರದೇಶಗಳಲ್ಲಿ ಬಾಡಿಗೆ ಬೆಲೆ ಕಡಿಮೆ

ನಮ್ಮ ದೇಶದ ಅತ್ಯಂತ ದೊಡ್ಡ ಐಟಿ ಹಬ್ ಎಂದರೆ ಬೆಂಗಳೂರು (Bengaluru). ದೇಶದ ಎಲ್ಲಾ ಮೂಲೆಗಳಿಂದ ಜನರು ಬಂದು ಇಲ್ಲಿ ಕೆಲಸ ಮಾಡುತ್ತಾರೆ, ಹಾಗೆ ಕೆಲಸ ಮಾಡುವವರು ಬಾಡಿಗೆ ಮನೆಗಳಲ್ಲಿ (Rent House), ಅಪಾರ್ಟ್ಮೆಂಟ್ ಗಳಲ್ಲಿ ಉಳಿದುಕೊಳ್ಳುತ್ತಾರೆ.

ಬೆಂಗಳೂರಿನ ಪ್ರಮುಖ ಏರಿಯಗಳಾದ ವೈಟ್ ಫೀಲ್ಡ್ (Whitefield), ಬಿಟಿಎಂ ಲೇಔಟ್ (BTM Layout), ಕೋರಮಂಗಲ (Koramangala) ಇಲ್ಲೆಲ್ಲಾ 2BHK ಮತ್ತು 3BHK ಅಪಾರ್ಟ್ಮೆಂಟ್ ಗಳ ಬಾಡಿಗೆ ₹20,000 ಇಂದ ₹30,000 ವರೆಗೂ ಇರುತ್ತದೆ.

ಆದರೆ ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ ಕಳೆದ ವರ್ಷಕ್ಕಿಂತ ಇಲ್ಲಿ ಬಾಡಿಗೆ ಹೆಚ್ಚಾಗಿದ್ದು, ಇತ್ತೀಚೆಗೆ ನಡೆದ ಎಲೆಕ್ಷನ್ ಮತ್ತು ಇನ್ನಿತರ ಬದಲಾವಣೆಗಳು ಈ ರೀತಿಯ ಬೆಳವಣಿಗೆ ಆಗುವ ಹಾಗೆ ಮಾಡಿದೆ..

10, 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಹಣ ಒಮ್ಮೆಲೇ ಬಿಡುಗಡೆ ಆಗಲಿದೆ! ಇಲ್ಲಿದೆ ಬಿಗ್ ಅಪ್ಡೇಟ್

ರಿಯಾಲ್ಟಿ ಉಪಾಧ್ಯಕ್ಷ ಕಿರಣ್ ಕುಮಾರ್ ಅವರು ಈ ಬಗ್ಗೆ ತಿಳಿಸಿದ್ದು, ‘ಪ್ರಸ್ತುತ ಬಿಟಿಎಂ ಲೇಔಟ್ ಮತ್ತು ಸರ್ಜಾಪುರದಲ್ಲಿ 2BHK ಅಪಾರ್ಟ್ಮೆಂಟ್ ಬಾಡಿಗೆದರ ₹30,000 ಇಂದ ₹40,000 ಇದೆ. ಪ್ರೀಮಿಯಂ ಮೊತ್ತದಲ್ಲಿ ಸ್ವಲ್ಪ ಏರಿಕೆ ಆಗಿದೆ, ಆದರೆ 2023ರಲ್ಲಿ ಇದ್ದ ಬೆಳವಣಿಗೆ ಈ ವರ್ಷ ಮಾರುಕಟ್ಟೆಯಲ್ಲಿಲ್ಲ..” ಎಂದು ಹೇಳಿದ್ದಾರೆ.

ಕುಶಮನ್ ಇಂದ ಹೊರಬಂದಿರುವ ವರದಿಯ ಅನುಸಾರ 2024ರ ಮೊದಲ ಮೂರು ತಿಂಗಳುಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 8,850 ಮನೆಗಳು ನಿರ್ಮಾಣವಾಗಿದೆ. ಇದು ಕಳೆದ ವರ್ಷಕ್ಕಿಂತ 14% ಜಾಸ್ತಿ ಆಗಿದೆ ಎಂದು ಹೇಳಲಾಗುತ್ತಿದೆ.

ಈ ಮನೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವೈಟ್ ಫೀಲ್ಡ್ ನಲ್ಲಿ ಆಗಿದ್ದು, ಈ ವರ್ಷ ಬೆಂಗಳೂರಿನಲ್ಲಿ 51,685 ಯೂನಿಟ್ ಗಳು ಹೆಚ್ಚಾಗಬಹುದು ಎಂದು ತಿಳಿಸಲಾಗಿದೆ. ಕಳೆದ ವರ್ಷಕ್ಕಿಂತ ಇದು ಕಡಿಮೆ ಎನ್ನಲಾಗಿದೆ.

ಹೊಸ ಬಿಪಿಎಲ್ ರೇಷನ್ ಕಾರ್ಡಿಗಾಗಿ ಕಾಯುತ್ತಿರುವವರಿಗೆ ಬಿಗ್ ಅಪ್ಡೇಟ್! ಸರ್ಕಾರದಿಂದ ಗುಡ್ ನ್ಯೂಸ್

Rent Houseಈ ಬಗ್ಗೆ ಕಿರಣ್ ಕುಮಾರ್ ಅವರು ಇನ್ನಷ್ಟು ಮಾತನಾಡಿದ್ದು, “ಬಾಡಿಗೆ ವಿಚಾರಕ್ಕೆ ಬಂದರೆ ಬೆಂಗಳೂರಿನ ಪೂರ್ವ ಮತ್ತು ಮಧ್ಯಭಾಗದಲ್ಲಿ ಮೊದಲಿನ ಹಾಗಿಲ್ಲ ಈಗ ನಿಶ್ಚಲತೆ ಬಂದಿದೆ. ಈ ಪ್ರದೇಶಗಳಲ್ಲಿ ಬಾಡಿಗೆ ಬೆಲೆ ಕಡಿಮೆ ಆಗಬಹುದು..” ಎಂದು ಹೇಳಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಮುಂಬೈ ನಲ್ಲಿ ಕೂಡ ಪ್ರೀಮಿಯಂ ಬಾಡಿಗೆ ಮೊತ್ತದಲ್ಲಿ ಕುಸಿತ ಕಂಡುಬಂದಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ..

ಈ ರೂಲ್ಸ್ ಪಾಲಿಸಿದರೆ ಮಾತ್ರ ಜೂನ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಸಿಗೋದು! ಹೊಸ ಅಪ್ಡೇಟ್

2021 ರಿಂದ 2023ರವರೆಗು ಮುಂಬೈನಲ್ಲಿ ಬೆಳವಣಿಗೆ ಆಗಿತ್ತು, ಆದರೆ ಈ ವರ್ಷ ಇಳಿಕೆ ಕಂಡಿದೆ. ಇನ್ನು ಬೆಂಗಳೂರು ಸಹ ಇದೇ ಥರ ಆಗಿದ್ದು, ಬೆಂಗಳೂರಿನ ಕೆಲವು ಭಾಗಗಳಲ್ಲಿ ವಾಸ ಮಾಡುವ ಜನರಿಗೆ ಇದು ಒಳ್ಳೆಯ ವಿಚಾರ. ಆಗಿದೆ. ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕು ಎಂದುಕೊಂಡಿರುವವರಿಗೆ ಇದು ಗುಡ್ ನ್ಯೂಸ್ ಆಗಿದೆ ಎಂದರೆ ಖಂಡಿತ ತಪ್ಪಲ್ಲ.

the rental rates are reduced in these areas of Bangalore

Follow us On

FaceBook Google News