ಪೆಟ್ರೋಲ್ ಇಲ್ಲದೆ 130 ಕಿಲೋ ಮೀಟರ್‌ ಮೈಲೇಜ್ ಕೊಡುವ ಹೊಸ ಬೈಕ್ ಬಿಡುಗಡೆ! ಇಲ್ಲಿದೆ ಮಾಹಿತಿ

ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಇದೀಗ ಪ್ರಖ್ಯಾತ ಜಿಟಿ ಫೋರ್ಸ್ ಕಂಪನಿಯ GT Texa Electric Bike ಲಾಂಚ್ ಆಗಿದೆ.

Electric Bike : ಆಟೋಮೊಬೈಲ್ಸ್ ಕ್ಷೇತ್ರದ ಬಗ್ಗೆ ಹೇಳುವುದಾದರೆ ಇಲ್ಲಿ ದಿನಕ್ಕೊಂದು ಹೊಸ ಮಾಡೆಲ್ ನ ವಾಹನಗಳು ಲಾಂಚ್ ಆಗುತ್ತಲೇ ಇರುತ್ತದೆ. ಅದರಲ್ಲೂ ಈಗ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅವುಗಳನ್ನು ಖರೀದಿ ಮಾಡುವ ಜನರ ಸಂಖ್ಯೆ ಸಹ ಹೆಚ್ಚಾಗುತ್ತಿದೆ.

ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಇದೀಗ ಪ್ರಖ್ಯಾತ ಜಿಟಿ ಫೋರ್ಸ್ ಕಂಪನಿಯ GT Texa Electric Bike ಲಾಂಚ್ ಆಗಿದೆ. ಇದರ ಫೀಚರ್ಸ್ ಹೇಗಿದೆ ಗೊತ್ತಾ?

ಹೆಚ್ಚಿನ ಬೇಡಿಕೆ ಹೊಂದಿರುವ ಆಟೋಮೊಬೈಲ್ಸ್ ಕಂಪನಿಗಳಲ್ಲಿ ಜಿಟಿ ಫೋರ್ಸ್ ಕೂಡ ಒಂದು. ಇದೀಗ ಈ ಕಂಪನಿ ಹೊಸದಾಗಿ ಜಿಟಿ ಫೋರ್ಸ್ ಟೆಕ್ಸಾ ಎಲೆಕ್ಟ್ರಿಕ್ ಬೈಕ್ ಲಾಂಚ್ ಮಾಡಿದ್ದು, ಈ ಬೈಕ್ ನ ಎಕ್ಸ್ ಶೋರೂಮ್ ಬೆಲೆ ₹1,19,555 ರೂಪಾಯಿ. ಸಿಟಿಯಲ್ಲಿರೋ ಯೂತ್ಸ್ ಗಳಿಗೆ ಇಷ್ಟ ಆಗುವ ಹಾಗೆ ಈ ಬೈಕ್ ಡಿಸೈನ್ ಮಾಡಲಾಗಿದ್ದು, ಫೀಚರ್ಸ್ ಹೇಗಿದೆ ಗೊತ್ತಾ?

ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಎಷ್ಟು ಹಣ ಇಡಬಹುದು? ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ?

ಈ ಬೈಕ್ ನಲ್ಲಿ Insulated BLDC motor ಅನ್ನು ಅಳವಡಿಸಲಾಗಿದ್ದು, ಒಳ್ಳೆಯ ಪರ್ಫಾರ್ಮೆನ್ಸ್ ಜೊತೆಗೆ 80km ಸ್ಪೀಡ್ ಗೆ ಬಹಳ ಬೇಗ ತಲುಪುವ ಜಾಣ್ಮೆ ಹೊಂದಿದೆ. ಹಾಗೆಯೇ ಈ ಬೈಕ್ ನಲ್ಲಿ 3.5 kWh Lithium Ion battery ಸಹ ಹೊಂದಿದೆ. ಈ ಬೈಕ್ ನಲ್ಲಿ ಮೈಕ್ರೋ ಚಾರ್ಜರ್ ಅಳವಡಿಸಲಾಗಿದೆ, 4 ರಿಂದ 5 ಗಂಟೆಗಳಲ್ಲಿ ಫುಲ್ ಚಾರ್ಜ್ ಮಾಡಬಹುದು, ಒಮ್ಮೆ ಚಾರ್ಜ್ ಮಾಡಿದರೆ 120-130 ಕಿಮೀ ಮೈಲೇಜ್ ಕೊಡುತ್ತದೆ ಈ ಬೈಕ್.

ಈ ಬೈಕ್ ಬ್ಲ್ಯಾಕ್ ಮತ್ತು ರೆಡ್ ಎರಡು ಕಲರ್ ಗಳಲ್ಲಿ ಲಭ್ಯವಿದೆ. ಜಿಟಿ ಟೆಕ್ಸಾ ಬೈಕ್ ನಲ್ಲಿ 180ಕೆಜಿ ಲೋಡ್ ಹೊಂದುವ ಶಕ್ತಿ ಇದೆ, ಹಾಗೆಯೇ ಇದರಲ್ಲಿ 18 ಡಿಗ್ರಿ ಗ್ರೇಡಬಿಲಿಟಿ ಇದ್ದು, ಸಿಟಿಗಳಲ್ಲಿ ಆರಾಮಾಗಿ ಬೈಕ್ ಓಡಿಸಬಹುದು.

ಈ ಬೈಕ್ ನಲ್ಲಿ ಟ್ಯೂಟ್ ಲೆಸ್ ಟೈರ್ ಗಳನ್ನು ಅಳವಡಿಸಲಾಗಿದೆ. ಮುಂಭಾಗದ ಟೈರ್ ಸೈಜ್ 80-110/18 ಆಗಿದ್ದು, ಹಿಂಭಾಗದ ಟೈರ್ ಸೈಜ್ 120-80/117 ಆಗಿರುತ್ತದೆ. ಮುಂದಿನ ಟೈರ್ ಸೈಜ್ 457.2mm, ಹಿಂಭಾಗದ ಟೈರ್ 431.8 mm ಅಲಾಯ್ ವೀಲ್ ಗಳಿಂದ ಮಾಡಲ್ಪಟ್ಟಿದೆ. ಈ ಎರಡು ಚಕ್ರಗಳಿಗೆ ABS ಅಳವಡಿಕೆ ಮಾಡಲಾಗಿದ್ದು, ಎರಡರಲ್ಲೂ ಡಿಸ್ಕ್ ಬ್ರೇಕ್ ಹೊಂದಿದೆ.

ಈ ತಳಿ ಎಮ್ಮೆ ಸಾಕಾಣಿಕೆ ಮಾಡಿದ್ರೆ ಪ್ರತಿ ತಿಂಗಳು ₹30,000 ಆದಾಯ! ವರ್ಷಕ್ಕೆ ₹3,24 ಲಕ್ಷ ರೂ. ಗಳಿಕೆ

GT Texa Electric Bikeಎರಡು ಚಕ್ರಗಳಿಗೆ ಡ್ಯುಯೆಲ್ ಸಸ್ಪೆನ್ಷನ್ ನೀಡಲಾಗಿದೆ. ಹಾಗಾಗಿ ರೋಡ್ ಚೆನ್ನಾಗಿಲ್ಲ ಎಂದರು ನೀವು ಚೆನ್ನಾಗಿ ಬೈಕ್ ಓಡಿಸಬಹುದು. ಈ ಬೈಕ್ ಅನ್ನು ರಿಮೋಟ್ ಸ್ಟಾರ್ಟ್ ಮಾಡಬಹುದು ಅಥವಾ ಕೀ ಬಳಸಿ ಸ್ಟಾರ್ಟ್ ಮಾಡಬಹುದು, ಬೈಕ್ ನಲ್ಲಿ 17.8cm LED display ಹೊಂದಿದೆ. ಅದರ ಜೊತೆಗೆ ಡಿಜಿಟಲ್ ಸ್ಪೀಡೋಮೀಟರ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, LED ಹೆಡ್ಲೈಟ್, ಟೈಲ್‌ಲೈಟ್ ಮತ್ತು ಟರ್ನ್ ಸಿಗ್ನಲ್ ಇದನ್ನೆಲ್ಲ ಅಳವಡಿಸಲಾಗಿದೆ.

ಸ್ಟೇಟ್ ಬ್ಯಾಂಕ್ ನಿಂದ ಮಹಿಳೆಯರಿಗೆ ಬಂಪರ್ ಕೊಡುಗೆ! ಬ್ಯುಸಿನೆಸ್ ಮಾಡಲು ಸಿಗಲಿದೆ 20 ಲಕ್ಷ ಲೋನ್

ಇದಷ್ಟೇ ಅಲ್ಲದೇ ಜಿಟಿ ಸಂಸ್ಥೆಯು ಕಡಿಮೆ ಬೆಲೆಗೆ ಕೂಡ ಬೈಕ್ ಗಳನ್ನು ಮಾರುಕಟ್ಟೆಗೆ ತಂದಿದ್ದು, GT ವೇಗಾಸ್, GT Ryd Plus, GT One Plus Pro ಮತ್ತು GT ಡ್ರೈವ್ ಪ್ರೊ ಈ ಬೈಕ್ ಗಳು ಸಹ ಮಾರುಕಟ್ಟೆಯಲ್ಲಿದೆ. ಇವುಗಳನ್ನು ಸಹ ನೀವು ಖರೀದಿ ಮಾಡಬಹುದು.

A new bike that gives a mileage of 130 km without petrol is launched

Follow us On

FaceBook Google News