ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅನ್ನು ಗೂಗಲ್ ಪೇ ಗೆ ಲಿಂಕ್ ಮಾಡೋದು ಹೇಗೆ? ಸುಲಭ ವಿಧಾನ

Credit Card / Debit Card : ನೀವು ನಿಮ್ಮ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಸಹ ಗೂಗಲ್ ಪೇ ಗೆ ಲಿಂಕ್ ಮಾಡಿಕೊಳ್ಳಬಹುದು. ಹಾಗಿದ್ದಲ್ಲಿ ಸುಲಭವಾಗಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಗೂಗಲ್ ಪೇ ಗೆ ಲಿಂಕ್ ಮಾಡೋದು ಹೇಗೆ ಎಂದು ತಿಳಿಯೋಣ.

Credit Card / Debit Card : ಈಗ ಭಾರತ ದೇಶ ಡಿಜಿಟಲ್ ಇಂಡಿಯಾ ಆಗುತ್ತಿದೆ. ಕ್ಯಾಶ್ ವ್ಯವಹಾರಕ್ಕಿಂತ ಬಹುತೇಕ ಜನರು ಡಿಜಿಟಲ್ ವ್ಯವಹಾರವನ್ನು ಪ್ರಿಫರ್ ಮಾಡುತ್ತಿದ್ದಾರೆ. ಹೌದು, ಅಂಗಡಿಗೆ ಹೋಗಿ ಸಣ್ಣ ಪುಟ್ಟ ವಸ್ತುಗಳನ್ನು ಖರೀದಿ ಮಾಡುವುದರಿಂದ ಹಿಡಿದು, ಫ್ಲೈಟ್ ಟಿಕೆಟ್ ಬುಕ್ (Book Flight Ticket) ಮಾಡುವವರೆಗೂ ಎಲ್ಲರೂ ಸಹ ಡಿಜಿಟಲ್ ಪಾವತಿ ವಿಧಾನಗಳನ್ನೇ ಬಳಸುತ್ತಿದ್ದಾರೆ. ಡಿಜಿಟಲ್ ಪಾವತಿಗಾಗಿ (Digital Payment) ಎಲ್ಲರೂ ಹೆಚ್ಚಾಗಿ ಬಳಸುವ App Google Pay ಎಂದರೆ ತಪ್ಪಲ್ಲ.

ಹೌದು, ಬಹುತೇಕ ಜನರು ಡಿಜಿಟಲ್ ಹಣಕಾಸು ವಹಿವಾಟು ನಡೆಸಲು ಗೂಗಲ್ ಪೇ (Google Pay) ಬಳಸುತ್ತಾರೆ. ಇದರಿಂದ ನೀವು ಹಣ ವರ್ಗಾವಣೆ ಮಾಡುವುದಕ್ಕೆ, ನಿಮ್ಮ ಬ್ಯಾಂಕ್ ಅಕೌಂಟ್ ಗೂಗಲ್ ಪೇ ಜೊತೆಗೆ ಲಿಂಕ್ ಆಗಿರಬೇಕು.

ಜೊತೆಗೆ ನೀವು ನಿಮ್ಮ ಡೆಬಿಟ್ ಕಾರ್ಡ್ (Debit Card) ಮತ್ತು ಕ್ರೆಡಿಟ್ ಕಾರ್ಡ್ (Credit Card) ಅನ್ನು ಸಹ ಗೂಗಲ್ ಪೇ ಗೆ ಲಿಂಕ್ ಮಾಡಿಕೊಳ್ಳಬಹುದು. ಹಾಗಿದ್ದಲ್ಲಿ ಸುಲಭವಾಗಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಗೂಗಲ್ ಪೇ ಗೆ ಲಿಂಕ್ ಮಾಡೋದು ಹೇಗೆ ಎಂದು ತಿಳಿಯೋಣ..

ಸ್ಟೇಟ್ ಬ್ಯಾಂಕ್ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ 20 ಲಕ್ಷದವರೆಗೂ ಸಾಲ, ಕಡಿಮೆ ಬಡ್ಡಿಯಲ್ಲಿ!

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅನ್ನು ಗೂಗಲ್ ಪೇ ಗೆ ಲಿಂಕ್ ಮಾಡುವ ವಿಧಾನ:

*ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ಇಂದ ಗೂಗಲ್ ಪೇ ಆಪ್ ಅನ್ನು ಡೌನ್ಲೋಡ್ ಮಾಡಿ

*ಅಥವಾ ನಿಮ್ಮ ಫೋನ್ ನಲ್ಲಿ ಗೂಗಲ್ ಪೇ ಆಪ್ ಪ್ರಿ ಇನ್ಸ್ಟಾಲ್ ಆಗಿರುತ್ತದೆ.

*ಗೂಗಲ್ ಪೇ ಲಾಗಿನ್ ಆಗುವಾಗ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ಇಮೇಲ್ ಐಡಿ ಮತ್ತು ಗೂಗಲ್ ಪೇ ಗೆ ಲಿಂಕ್ ಆಗಿರುವ ಇಮೇಲ್ ಐಡಿ ಒಂದೇ ಆಗಿರಬೇಕು.

*ಇಲ್ಲಿ ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ

*ಬಳಿಕ ಪಾವತಿ ಮಾಡುವ ವಿಧಾನಗಳನ್ನು ಆಯ್ಕೆ ಮಾಡಿ.

ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ರೆ ಸಿಗುತ್ತೆ 2 ರಿಂದ 3 ಲಕ್ಷದವರೆಗು ಸಾಲ! ಇಂದೇ ಅರ್ಜಿ ಸಲ್ಲಿಸಿ

Google Payಹಣ ಪಾವತಿಗೆ ಬೇರೆ ಮಾರ್ಗಗಳು:

*ಇಲ್ಲಿ ನೀವು ಇದೇ ರೀತಿ ಕಾಣುವ ಆಪ್ಶನ್ ಗೆ ಹೋಗಿ, ಪಾವತಿ ಮಾಡುವುದಕ್ಕೆ ಬೇರೆ ಮಾರ್ಗಗಳು ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ, ಇಲ್ಲಿ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಸೇರಿಸಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

*ಗೂಗಲ್ ಪೇ ನಲ್ಲಿ Visa Card, Master Card, ಆಕ್ಟಿವ್ ಇರುವ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಅನ್ನು ಮಾತ್ರ ಲಿಂಕ್ ಮಾಡಬಹುದು. American Express, Maestro ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಅನ್ನು ಲಿಂಕ್ ಮಾಡಲು ಆಗುವುದಿಲ್ಲ.

*ಆಡ್ ಆನ್ ಕಾರ್ಡ್ ಅನ್ನು ಕ್ಲಿಕ್ ಮಾಡಿದಾಗ, ನಿಮಗೆ ಗೂಗಲ್ ಪೇ ನಲ್ಲಿ ಕ್ಯಾಮೆರಾ ಓಪನ್ ಆಗುತ್ತದೆ, ಇಲ್ಲಿ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ನ ಫೋಟೋ ತೆರೆಯಬಹುದು.

ಇಂದು ಚಿನ್ನದ ಬೆಲೆ ಹೇಗಿದೆ ಗೊತ್ತಾ? ಭಾನುವಾರ (ಜೂನ್ 30, 2024) ಚಿನ್ನ ಮತ್ತು ಬೆಳ್ಳಿ ಬೆಲೆ ಡೀಟೇಲ್ಸ್

*ನಂತರ ಆಟೊಮ್ಯಾಟಿಕ್ ಆಗಿ ನಿಮ್ಮ ಡೆಬಿಟ್ ಕಾರ್ಡ್ ನ ಮಾಹಿತಿಗಳನ್ನು ಸ್ಕ್ಯಾನ್ ಮಾಡಿ ಪಡೆದುಕೊಳ್ಳುತ್ತದೆ.

*ಇದೆಲ್ಲವೂ ಆದ ನಂತರ ನಿಮ್ಮ ಫೋನ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ.

*ಓಟಿಪಿಯನ್ನು ಗೂಗಲ್ ಪೇ ಗೆ ಹಾಕಿದ ನಂತರ, ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗೂಗಲ್ ಪೇ ಗೆ ಲಿಂಕ್ ಆಗುತ್ತದೆ.

*ಈ ರೀತಿಯಾಗಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡಿ, ನಿಮ್ಮ ಗೂಗಲ್ ಪೇ ಮೂಲಕ ಇದನ್ನು ಬಳಸಬಹುದು.

How to Link Credit Card, Debit Card to Google Pay

Follow us On

FaceBook Google News