ರತನ್ ಟಾಟಾ ಕನಸಿನ ಕಾರು ಟಾಟಾ ನ್ಯಾನೋ ಎಲೆಕ್ಟ್ರಿಕ್ ಮಾದರಿ ಎಂಟ್ರಿ, ಎಷ್ಟಿರಲಿದೆ ಬೆಲೆ ಗೊತ್ತಾ?

Electric Car : ಕಂಪನಿಯು ನ್ಯಾನೋವನ್ನು ಎಲೆಕ್ಟ್ರಿಕ್ ರೂಪವನ್ನು ನೀಡಲು ಮತ್ತು ನ್ಯಾನೋ ಇವಿ ಎಂದು ಬಿಡುಗಡೆ ಮಾಡಲು ಎಲ್ಲ ರೀತಿಯಲ್ಲಿ ತಯಾರಿ ಮಾಡಿಕೊಂಡು ಸಿದ್ಧವಾಗಿದೆ ಎನ್ನಲಾಗಿದೆ.

Electric Car : ಟಾಟಾ ನ್ಯಾನೋ (Tata Nano EV) ಎನ್ನುವ ಹೆಸರು ಯಾವ ಭಾರತೀಯನಿಗೆ ತಿಳಿದಿಲ್ಲ ಹೇಳಿ. ಒಂದು ಕಾಲದಲ್ಲಿ ಇದು ಭಾರತದ ಸಾಮಾನ್ಯ ಕುಟುಂಬಕ್ಕೆ ಅತ್ಯಂತ ಸುಲಭವಾದ ಮತ್ತು ಅತ್ಯಂತ ಸುಲಭವಾಗಿ ಖರೀದಿ ಮಾಡಬಹುದಾದ ದೇಶದ ಏಕೈಕ ಕಾರ್ ಆಗಿತ್ತು.

ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಈ Car ಜನರ ಮೊದಲ ಆಯ್ಕೆಯಾಗಿತ್ತು. ಆದರೆ ಏಪ್ರಿಲ್ 2020 ರಲ್ಲಿ, ಯಾವಾಗ BS6 ಜಾರಿಗೆ ಬಂತೋ ಆ ಸಮಯದಲ್ಲಿ ಈ ಕಾರನ್ನು ನಿಲ್ಲಿಸಬೇಕಾಯಿತು.

ಒಂದು ಕಾಲದಲ್ಲಿ ಕಂಪನಿಯ ಅಧ್ಯಕ್ಷ ರತನ್ ಟಾಟಾ ಅವರ ಕನಸಿನ ಕಾರು ಎಂದು ಕರೆಯಲಾಗುತ್ತಿತ್ತು. ಈ ಕಾರು ರತನ್ ಟಾಟಾ ಅವರ ನೆಚ್ಚಿನ ಕಾರಾಗಿತ್ತು ಮತ್ತು ಭಾರತದ ಪ್ರತಿಯೊಬ್ಬರೂ ಕೂಡ ಅದರಲ್ಲೂ ಬಡವರು ಕೂಡ ಖರೀದಿ ಮಾಡಲಿ ಎಂದು ರತನ್ ಟಾಟಾ ಈ ಕಾರು ತಯಾರಿಸಿದ್ದರು. ಸಂಪೂರ್ಣ ಸ್ವದೇಶೀ ನಿರ್ಮಿತ ಕಾರು ಇದಾಗಿತ್ತು.

2025ಕ್ಕೆ ವರ್ಷಾರಂಭದಲ್ಲಿ ಅಬ್ಬರಿಸಲು ಬರಲಿವೆ 9 ಲಕ್ಷ ಬೆಲೆಬಾಳುವ ಈ 3 ಹೊಸ ಕಾರುಗಳು

ಇದೀಗ ಬದಲಾದ ಕಾಲಘಟ್ಟದಲ್ಲಿ ಈ ಕಾರಿನ ಎಲೆಕ್ಟ್ರಿಕ್ ಮಾದರಿ (Electric Model) ಶೀಘ್ರದಲ್ಲೇ ರಸ್ತೆಗಿಳಿಯಲಿದೆ. ಇತ್ತೀಚೆಗೆ ಬಂದಿರುವ ಬಲ್ಲ ಮೂಲಗಳ ವರದಿಗಳ ಪ್ರಕಾರ, ಕಂಪನಿಯು ನ್ಯಾನೋವನ್ನು ಎಲೆಕ್ಟ್ರಿಕ್ ರೂಪವನ್ನು ನೀಡಲು ಮತ್ತು ನ್ಯಾನೋ ಇವಿ ಎಂದು ಬಿಡುಗಡೆ ಮಾಡಲು ಎಲ್ಲ ರೀತಿಯಲ್ಲಿ ತಯಾರಿ ಮಾಡಿಕೊಂಡು ಸಿದ್ಧವಾಗಿದೆ ಎನ್ನಲಾಗಿದೆ.

ದೇಶದ ಜನತೆಗೆ ಗುಡ್ ನ್ಯೂಸ್ ಏನೆಂದರೆ ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಈ ಎಲೆಕ್ಟ್ರಿಕ್ ಕಾರಿನ ಕೆಲಸವನ್ನು ಈಗಾಗಲೇ ಸದ್ದಿಲ್ಲದೇ ಪ್ರಾರಂಭಿಸಿದೆ. ಟಾಟಾ ಈಗಾಗಲೇ ತನ್ನ ಎಲೆಕ್ಟ್ರಿಕ್ ಪವರ್‌ಟ್ರೇನ್‌ನ ಕೆಲಸವನ್ನು ಪ್ರಾರಂಭಿಸಿದೆ. ಇತ್ತೀಚಿನ ಸುದ್ದಿಗಳ ಪ್ರಕಾರ, ಟಾಟಾ ಮೋಟಾರ್ಸ್ 2025 ರ ವೇಳೆಗೆ ನ್ಯಾನೋ EV ಅನ್ನು ಭಾರತಕ್ಕೆ ತರಬಹುದು ಮತ್ತು ಅದೇ ವರ್ಷದಲ್ಲಿ ಅದರ ವಿತರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್! ವಾಹನ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಓಲಾ ಕಂಪನಿ

Tata Nano EVನ್ಯಾನೋ ಕಾರಿನ ಬಗ್ಗೆ ದೊಡ್ಡ ಗುಡ್ ನ್ಯೂಸ್ ಎಂದರೆ ಈ ಕಾರಿನ ಬೆಲೆ ಎಷ್ಟಾಗಿರಬಹುದು ಎಂದು ಈಗ ಇದೆ ವಿಷಯ ಜನರಿಗೆ ಹಾಗು ಮಾರುಕಟ್ಟೆಯಲ್ಲಿರುವ ಇತರೆ ಬ್ರಾಂಡ್ ಗಳಿಗೂ ತಲೆನೋವು ನೀಡಲಿದೆ.

ಪೇಟಿಎಂ ವಾಲೆಟ್ ನಲ್ಲಿ ಹಣ ಇಲ್ಲದೆ ಹೋದ್ರೆ ಸೇವೆ ಸ್ಥಗಿತ! ಪೇಟಿಎಂ ಬಳಕೆದಾರರಿಗೆ ಬಿಗ್ ಅಪ್ಡೇಟ್

ಹೌದು ಈ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಬಂದ ನಂತರ ಅಗ್ಗದ ಎಲೆಕ್ಟ್ರಿಕ್ ಕಾರುಗಳ (Electric Cars) ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದೆ. ಭಾರತದಲ್ಲಿ ಈ ನ್ಯಾನೋ ಕಾರನ್ನು 4 ಲಕ್ಷದಿಂದ 6 ಲಕ್ಷದವರೆಗೆ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಕಂಪನಿಯು ಇದನ್ನು 5 ಲಕ್ಷದವರೆಗೆ ಬಿಡುಗಡೆ ಮಾಡಿದರೆ, ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳಿಗೆ ದೊಡ್ಡ ಸ್ಪರ್ಧೆಯನ್ನು ನೀಡಬಹುದು.

Ratan Tata dream car Tata Nano electric model Launching Soon

Follow us On

FaceBook Google News