ನಾಯಿಗೂ ಮಾಡಿಸಬೇಕಾ ಆಧಾರ್ ಕಾರ್ಡ್! ಶ್ವಾನ ಪ್ರಿಯರಿಗೆ ಬಂತು ಹೊಸ ರೂಲ್ಸ್
ಈ ಸುದ್ದಿ ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು. ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ (Aadhaar Card) ಎನ್ನುವುದು ಕಡ್ಡಾಯ ಎಂಬ ವಿಷಯ ಎಲ್ಲರಿಗೂ ಗೊತ್ತು.. ಇದರ ಜೊತೆಗೆ ಐದು ವರ್ಷದ ಮಕ್ಕಳಿಗೂ ಕೂಡ ಆಧಾರ್ ಕಾರ್ಡ್ ಮಾಡಿಸುವುದು ಇತ್ತೀಚಿನ ದಿನಗಳಲ್ಲಿ ಕಡ್ಡಾಯ ಮಾಡಲಾಗಿದೆ.
ಇದರ ಜೊತೆಗೆ ನೀವು ಮನೆಯಲ್ಲಿ ನಾಯಿ ಸಾಕಾಣಿಕೆ ಮಾಡಿದರೆ ಆ ನಾಯಿಗೂ ಕೂಡ ಆಧಾರ್ ಕಾರ್ಡ್ ಮಾಡಿಸಬೇಕು ಎನ್ನುವ ವಿಷಯ ಗೊತ್ತಾ?
ಇನ್ನು ಮುಂದೆ ನಾಯಿಗಳಿಗೂ ಬೇಕು ಆಧಾರ್ ಕಾರ್ಡ್ (Aadhaar card for your pet dog)
ಹೌದು ನೀವು ಸಾಕು ಪ್ರಾಣಿ ನಾಯಿಯನ್ನ ಮನೆಯಲ್ಲಿ ಇಟ್ಟು ಸಾಕುವುದಾದರೆ ನಿಮ್ಮ ಬಳಿ ಇರುವಂತೆ ಆ ನಾಯಿಗೂ ಆಧಾರ್ ಕಾರ್ಡ್ ಮಾಡಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಮನುಷ್ಯರಿಗೆ ಇರುವಂತೆ ನಾಯಿಗಳಿಗೂ ಕೂಡ ಐಡೆಂಟಿಟಿ ಇರಬೇಕು ಎನ್ನುವ ಕಾರಣಕ್ಕೆ ಈ ಹೊಸ ರೂಲ್ಸ್ ತರಲಾಗಿದೆ.
ರಾಜಧಾನಿ ದೆಹಲಿ (Delhi) ಯಲ್ಲಿ ಈಗಾಗಲೇ ನಾಯಿಗಳ ಆಧಾರ್ ಕಾರ್ಡ್ ನೋಂದಣಿ ಆರಂಭವಾಗಿದೆ. ಸುಮಾರು 100 ನಾಯಿಗಳಿಗೆ ಆಧಾರ್ ಕಾರ್ಡ್ ಮಾಡಿಸಲಾಗಿದೆ. ಈಗಾಗಲೇ ಆಧಾರ್ ಕಾರ್ಡು ಪಡೆದುಕೊಂಡ ನೂರು ನಾಯಿಗಳು ಇಂಡಿಯ ಗೇಟ್, ದೆಹಲಿ ಟರ್ಮಿನಲ್ ಒನ್ ವಿಮಾನ ನಿಲ್ದಾಣ, ಪ್ರಾಣಿ ಕಾರ್ಯಕರ್ತ ಮಾನವಿ ರೈ ಅವರ ನಾಯಿ ಆಶ್ರಯ ಸೇರಿದಂತೆ ಮೊದಲಾದ ಸಾಕು ನಾಯಿಗಳಿಗೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಕ್ಯಾನರ್ ಮೂಲಕ ನಾಯಿಗಳನ್ನು ಗುರುತು ಹಿಡಿಯಬಹುದು!
ಬೀದಿ ನಾಯಿಗಳನ್ನು ಸ್ಥಳಾಂತರಿಸುವುದು ಹಾಗೂ ರಕ್ಷಿಸುವ ಉದ್ದೇಶದಿಂದ NGOಗಳು ಈ ಹೊಸ ರೂಲ್ಸ್ ಮಾಡಿಕೊಂಡಿವೆ. ಏಪ್ರಿಲ್ 27 2024 ರಿಂದ ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಪ್ರಕ್ರಿಯೆ ಆರಂಭವಾಗಿದೆ.
Pawfriend.in ಈ ವೆಬ್ ಸೈಟ್ ನಡೆಸುತ್ತಿರುವ ಎನ್ ಜಿಓ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡುವ ಆಧಾರ್ ಕಾರ್ಡ್ ಕಂಡು ಹಿಡಿದಿದ್ದು, ಇದನ್ನು ಸಾಕು ನಾಯಿಗಳ ಕುತ್ತಿಗೆಗೆ ಹಾಕಿಡಲಾಗುವುದು ಇದರಿಂದ ಯಾವುದೇ ಎಮರ್ಜೆನ್ಸಿ ಸಂದರ್ಭದಲ್ಲಿ ಅಥವಾ ನಾಯಿ ಕಳೆದು ಹೋದಾಗ ಅದನ್ನು ಕಂಡುಹಿಡಿಯಲು ಸುಲಭವಾಗುವುದು, ಸಾಕು ಪ್ರಾಣಿಗಳ ಸಂರಕ್ಷಕಿ ಮಾನವಿ ರೈ ಈ ಹೊಸ ಉಪಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
Aadhaar card should be made for dogs too, New rules for dog lovers