ವೋಟರ್ ಐಡಿ ಇರುವ ಎಲ್ಲರಿಗೂ ರಾತ್ರೋರಾತ್ರಿ ಹೊಸ ರೂಲ್ಸ್; ಇನ್ನೊಂದು ಆದೇಶ
ಡಿಸೆಂಬರ್ ತಿಂಗಳು (month of December) ಮುಗಿಯುತ್ತಿದೆ. ಅಂದರೆ 2023ರ ಆರ್ಥಿಕ ವರ್ಷ ಮುಗಿದು 2024 ಸದ್ಯದಲ್ಲಿಯೇ ಆರಂಭವಾಗಲಿದೆ, ಹೊಸ ವರ್ಷ (New year) ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಕೆಲಸಗಳನ್ನು ನೀವು ಮಾಡಿ ಮುಗಿಸಬೇಕಿದೆ
ಒಂದು ವೇಳೆ ಇಂತಹ ಕೆಲಸಗಳನ್ನು ಮಾಡಿಕೊಳ್ಳದೆ ಇದ್ದರೆ ಮುಂದೆ ಸಮಸ್ಯೆ . ಅಂತಹ ಕೆಲಸಗಳಲ್ಲಿ ಸಂಬಂಧಪಟ್ಟ ವಿಷಯವು ಸೇರಿದೆ.
ವೋಟರ್ ಐಡಿ (voter ID) ಹಾಗೂ ಆಧಾರ್ ಕಾರ್ಡ್ (Aadhaar Card) ಎರಡೂ ಕೂಡ ಪ್ರಮುಖ ಗುರುತಿನ ಚೀಟಿಗಳು. ಮತದಾನದ ಹಕ್ಕನ್ನು ಪಡೆಯಲು ಪ್ರತಿಯೊಬ್ಬರು ವೋಟರ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ
ಅದೇ ರೀತಿ ಆಧಾರ್ ಕಾರ್ಡ್ ಇಲ್ಲದೆ ಇದ್ರೆ ಯಾವ ಕೆಲಸವೂ ಆಗುವುದಿಲ್ಲ ಎನ್ನುವುದು ಈಗಾಗಲೇ ನಿಮಗೆ ತಿಳಿದಿರುತ್ತದೆ. 2024ರ ಲೋಕಸಭಾ ಚುನಾವಣಾ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ವೋಟರ್ ಐಡಿ ಗೆ ಸಂಬಂಧಪಟ್ಟ ಸಾಕಷ್ಟು ಮಾಹಿತಿಗಳನ್ನು ಕೂಡ ಸರ್ಕಾರ ನೀಡುತ್ತಿದೆ. ಅವುಗಳಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ಕೂಡ ಒಂದು.
ವೋಟರ್ ಐಡಿ ಆಧಾರ್ ಲಿಂಕ್ ಕಡ್ಡಾಯವೇ? (Is Voter ID Aadhaar Link Mandatory?)
ಸಾಕಷ್ಟು ದಿನಗಳಿಂದಲೂ ಈ ವಿಷಯದ ಬಗ್ಗೆ ಚರ್ಚೆಗಳು ತಕರಾರುಗಳು ನಡೆಯುತ್ತಲೇ ಇವೆ. ವೋಟರ್ ಐಡಿ ಹಾಗೂ ಆಧಾರ್ ಜೋಡಣೆಗೆ ಫಾರ್ಮ್ ನಂಬರ್ 6 B (form number 6b) ಅನ್ನು ಸಲ್ಲಿಸಬೇಕು. ಇದೀಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಮಯದಲ್ಲಿ ವೋಟರ್ ಐಡಿ ಹಾಗೂ ಆಧಾರ್ ಜೋಡಣೆಗೆ ಸಂಬಂಧಪಟ್ಟ ಹಾಗೆ ಸ್ಪಷ್ಟನೆಯನ್ನು ಸಚಿವರು ನೀಡಿದ್ದಾರೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ವೋಟರ್ ಐಡಿ ಹಾಗೂ ಆಧಾರ್ ಜೋಡಣೆ ಇನ್ನೂ ಶುರುವಾಗಿಲ್ಲ. 2024ರ ಹಾಗೆ ಜೋಡಣೆ ಮಾಡಿಕೊಳ್ಳಬೇಕು. ಎನ್ನುವುದರ ಬಗ್ಗೆ ಇನ್ನೂ ಸರ್ಕಾರ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಆಧಾರ್ ಮತ್ತು ವೋಟರ್ ಐಡಿ ಲಿಂಕ್ ಮಾಡಿಕೊಳ್ಳುವುದರ ಬಗ್ಗೆ ಕೇಳಿರುವ ಪ್ರಶ್ನೆಗೆ ಸಚಿವ ರಾಮ ಮೇಘವಾಲ್ ಅವರು ಉತ್ತರಿಸಿದ್ದಾರೆ. ಡಿಸೆಂಬರ್ 4 ರಿಂದ ಚಳಿಗಾಲದ ಅಧಿವೇಶನ (Winter session) ಆರಂಭವಾಗಿದೆ, ಈ ಸಂದರ್ಭದಲ್ಲಿ ಮಾತನಾಡಿದ ಮೇಘವಾಲ್ ಅವರು ಲಿಖಿತ ರೂಪದಲ್ಲಿ ಆಧಾರ್ ಕಾರ್ಡ್ ಲಿಂಕ್ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
“ಆಧಾರ್ ಕಾರ್ಡ್ ವೋಟರ್ ಐಡಿ ಜೋಡಣೆ ಪ್ರಕ್ರಿಯೆ ಪ್ರಚಲಿತದಲ್ಲಿದೆ. ಆದರೆ ವೋಟರ್ ಐಡಿ ಹಾಗೂ ಆಧಾರ್ ಜೋಡಣೆಗೆ ಯಾವುದೇ ಕೊನೆಯ ದಿನಾಂಕವನ್ನು ನಿಗದಿ ಪಡಿಸಿಲ್ಲ. ಇದಲ್ಲದೆ ಜೊತೆಗೆ ಆಧಾರ್ ಲಿಂಕ್ (Aadhaar link) ಮಾಡುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಫಾರ್ಮ್ ನಂಬರ್ 6 ಬಿ ಸಲ್ಲಿಸಲು ಇನ್ನೂ ಒಂದು ವರ್ಷಗಳ ಅವಧಿ ನೀಡಲಾಗಿದೆ” ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಸದ್ಯಕಂತು ಚುನಾವಣಾ ಐಡಿ ಜೊತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ.
New Rules Overnight for All Voter ID Holders
Our Whatsapp Channel is Live Now 👇