ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ, ಮಹಾನ್ ಚೇತನ ನಟಿ ನಿಧನ

Actress Leelavathi Passes Away : ದಕ್ಷಿಣ ಭಾರತದ ಹಿರಿಯ ಪ್ರತಿಭಾನ್ವಿತ ನಟಿ ಲೀಲಾವತಿ ವಿಧಿವಶ, 86 ವರ್ಷ ವಯಸ್ಸಿನಲ್ಲಿ ಅವರು ವಯೋಸಹಜ ಕಾಯಿಲೆಯಿಂದ ನಿಧನ

Actress Leelavathi Passes Away : ದಕ್ಷಿಣ ಭಾರತದ ಚಿತ್ರರಂಗ ಇಂದು ಹಿರಿಯ ಪ್ರತಿಭಾನ್ವಿತ ನಟಿಯನ್ನು ಕಳೆದುಕೊಂಡು ಅನಾಥವಾಗಿದೆ. ಚಂದನವನದ ಹೆಮ್ಮೆಯ ಹಿರಿಯ ನಟಿ ಲೀಲಾವತಿ ಅವರು ಇಂದು ಅಸ್ತಂಗತರಾಗಿದ್ದಾರೆ. ನೆಲಮಂಗಲ ಖಾಸಗಿ ಆಸ್ಪತ್ರೆ ಒಂದರಲ್ಲಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಲೀಲಾವತಿ (Actress Leelavathi) ಅಮ್ಮನವರು ವಿಧಿವಶ ಎನ್ನುವ ಸುದ್ದಿ ಬಹಿರಂಗವಾಗಿದೆ.

ನಟಿ ಲೀಲಾವತಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ನಟಿ ಲೀಲಾವತಿ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರು. ಸತತ 50 ವರ್ಷಗಳ ಕಾಲ ಕಲಾ ಸೇವೆ ಮಾಡಿದ ಹಿರಿಮೆ ಅವರದ್ದು.

ತಮಿಳು, ತೆಲುಗು, ಮಲಯಾಳಂ ಭಾಷೆಗಳು ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ 400 ಚಿತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ ಅದ್ಭುತ ನಟಿ ಲೀಲಾವತಿ (Veteran Actress Leelavathi) ಎಂದರೆ ಅತಿಶಯೋಕ್ತಿಯಲ್ಲ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ, ಮಹಾನ್ ಚೇತನ ನಟಿ ನಿಧನ - Kannada News

ನಟಿ ಲೀಲಾವತಿಯವರು ಅಭಿನಯಿಸಿದ ಭಕ್ತ ಕುಂಬಾರ, ಮನಮೆಚ್ಚಿದ ಮಡದಿ, ಸಂತ ತುಕಾರ ಮೊದಲಾದ ಸಿನಿಮಾಗಳು ಸಿನಿಮಾ ಕ್ಷೇತ್ರದಲ್ಲಿ (Kannada Film Industry) ಲೀಲಾವತಿ ಅವರ ಅಭಿನಯವನ್ನು ಅಚ್ಚಳಿಯದಂತೆ ಉಳಿಸಿವೆ.

ಚಿತ್ರರಂಗದಲ್ಲಿ ಅಭಿನಯದ ಉತ್ತುಂಗದಲ್ಲಿ ಇರುವಾಗಲೇ ಅವರಿಗೆ ಹತ್ತು ಹಲವು ಪ್ರಶಸ್ತಿಗಳು ಕೂಡ ಸಂದಾಯವಾಗಿವೆ. ಅವುಗಳಲ್ಲಿ 1999ರಲ್ಲಿ ಸಿಕ್ಕಿರುವ ಡಾಕ್ಟರ್ ರಾಜಕುಮಾರ್ ಪ್ರಶಸ್ತಿ ಫಿಲಂ ಫೇರ್ ಪ್ರಶಸ್ತಿಗಳು ಸೇರಿವೆ. ಸ್ಯಾಂಡಲ್ ವುಡ್ ನ ಡ್ಯಾನ್ಸಿಂಗ್ ಸ್ಟಾರ್ ವಿನೋದ್ ರಾಜ್ (Actor vinod raj) ಅವರನ್ನು ಇಂದು ಲೀಲಾವತಿ ಅಗಲಿದ್ದಾರೆ. ಲೀಲಾವತಿ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ಲೀಲಾವತಿ ಅವರ ಯೋಗಕ್ಷೇಮ ವಿಚಾರಿಸಲು ಖುದ್ದಾಗಿ ಭೇಟಿ ನೀಡಿದ್ದ ಸಿಎಂ!

Veteran Actress Leelavathiಇತ್ತೀಚಿಗೆ ಅನಾರೋಗ್ಯದಿಂದ ಲೀಲಾವತಿ ಬಳಲುತ್ತಿದ್ದರು. ಹೀಗಾಗಿ ಚಿತ್ರರಂಗದ ಅನೇಕ ನಟ ನಟಿಯರು ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ಯೋಗ ಕ್ಷೇಮ ವಿಚಾರಿಸಿಕೊಂಡು ಬಂದಿದ್ದಾರೆ

ಇದರ ಜೊತೆಗೆ ಸ್ವತಹ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಯೋಗ ಕ್ಷೇಮ ವಿಚಾರಿಸಿಕೊಂಡು ಬಂದಿದ್ದರು. ಅಷ್ಟೇ ಅಲ್ಲದೆ ಅವರ ಆಸ್ಪತ್ರೆಯ ಖರ್ಚನ್ನು ತಾನೇ ಬರಿಸುವುದಾಗಿ ಕೂಡ ಮುಖ್ಯಮಂತ್ರಿ ತಿಳಿಸಿದ್ದಾರೆ

ಅವರೊಬ್ಬ ನೈಜ ಕಲಾವಿದೆ. ಇಂತಹ ಹಿರಿಯ ಕಲಾವಿದೆಗೆ ಅನಾರೋಗ್ಯ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಖರ್ಚು ವೆಚ್ಚ ನೋಡಿಕೊಳ್ಳುವ ಜವಾಬ್ದಾರಿಯನ್ನು ಕೂಡ ಮುಖ್ಯಮಂತ್ರಿ ವಹಿಸಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ.

Actress Leelavathi with Son Vinod Raj
Image Source: Times Of India

ನೆಲಮಂಗಲದ ಸೋಲದೇವನ ಹಳ್ಳಿ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಜೊತೆಗೆ ಲೀಲಾವತಿ ತನ್ನ ಕೊನೆಯ ದಿನಗಳನ್ನು ಕಳೆದಿದ್ದಾರೆ. ನಟ ದರ್ಶನ್, ಅಭಿಷೇಕ್ ಅಂಬರೀಶ್, ಗಿರಿಜಾ ಲೋಕೇಶ್ ಸೇರಿದಂತೆ ಮೊದಲಾದ ಸ್ಯಾಂಡಲ್ವುಡ್ (Sandalwood Cinema) ನಟ ನಟಿಯರು ಕೂಡ ಲೀಲಾವತಿ ಅವರ ತೋಟದ ಮನೆಗೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದು ವರದಿಯಾಗಿದೆ.

ಲೀಲಾವತಿ ಅವರ ಪುತ್ರ ವಿನೋದ್ ರಾಜ್ ತಾಯಿಯ ಆರೈಕೆಯನ್ನು ಬಹಳ ಪ್ರೀತಿಯಿಂದ ಮಾಡಿದ್ದಾರೆ. ಈಗ ಆಸ್ಪತ್ರೆಗೆ ದಾಖಲಾಗಿದ್ದ ಲೀಲಾವತಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Kannada Actress LeelavathiKannada Senior Actress Leelavathi Passes Away

 

Follow us On

FaceBook Google News

Kannada Senior Actress Leelavathi Passes Away