ನಿಮ್ಮ ಮನೆಯ ಟಿವಿಯಲ್ಲೇ ನೋಡಿ ಕಾಟೇರ ಸಿನಿಮಾ! ಓಟಿಟಿಗೆ ಬಂದ ಡಿಬಾಸ್ ಸಿನಿಮಾ

ಡಿ ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಓಟಿಟಿಗೆ ಬಂದ ಕಾಟೇರ ಸಿನೆಮಾ; ಯಾವಾಗಿಂದ ನೋಡಬಹುದು ಗೊತ್ತಾ?

ನಮ್ಮ ಕನ್ನಡ ಚಿತ್ರರಂಗ (Kannada film industry) ವು ಈಗ ಭಾರತೀಯ ಚಿತ್ರರಂಗದಲ್ಲೇ ಉಚ್ಛ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಕೆ.ಜಿ.ಎಫ್ ಚಿತ್ರದ (KGF film) ನಂತರವಂತೂ ಕನ್ನಡದಲ್ಲಿ ಯಾವ ಸಿನೆಮಾ ಬಿಡುಗಡೆಯಾಗುತ್ತದೆ ಎಂದು ನೋಡಿಕೊಂಡು ಪರಭಾಷೆಯವರು ಚಿತ್ರ ಬಿಡುಗಡೆ ಮಾಡುವ ಹಂತಕ್ಕೆ ತಲುಪಿದೆ.

ಕನ್ನಡದಲ್ಲಿ ಅತ್ಯಂತ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಮಾಸ್ ಸೂಪರ್ ಸ್ಟಾರ್ಗಳಲಿ ಡಿ.ಬಾಸ್ ಎಂದೇ ಕರೆಸಿಕೊಳ್ಳುವ ದರ್ಶನ್ (Darshan tugudeep) ತೂಗುದೀಪ ಕೂಡ ಒಬ್ಬರು. ಇವರ ಸಿನೆಮಾ ಎಂದರೆ ಮಾಸ್ ಪ್ರೇಕ್ಷಕರಿಗೆ ಹಬ್ಬದ ಊಟ ಇದ್ದಂತೆ. ಯಾವಾಗ ಬಿಡುಗಡೆ ಆಗುತ್ತದೆ ಎಂದು ತುದಿಗಾಲಿನಲ್ಲಿ ನಿಂತಿರುತ್ತಾರೆ.

ಈಗ ಏನಿದ್ದರೂ ಡಿ ಬಾಸ್ (D Boss) ನಟನೆಯ ಕಾಟೇರ (kaatera) ಹವಾ. ಡಿ. 29ರಂದು ಕಾಟೇರಾ ಸಿನೆಮಾ ಬಿಡುಗಡೆಯಾಗಿತ್ತು. ಇದೀಗ ಈಗ ಇದು ಓಟಿಟಿ (OTT) ಯಲ್ಲಿ ಪ್ರಸಾರವಾಗಲಿದೆ. ಹಾಗಾದರೆ ಯಾವ ಚಾನೆಲ್ನಲ್ಲಿ ಪ್ರಸಾರವಾಗಲಿದೆ, ಬಿಡುಗಡೆ ಯಾವಾಗ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ ಮನೆಯ ಟಿವಿಯಲ್ಲೇ ನೋಡಿ ಕಾಟೇರ ಸಿನಿಮಾ! ಓಟಿಟಿಗೆ ಬಂದ ಡಿಬಾಸ್ ಸಿನಿಮಾ - Kannada News

ಡಿಬಾಸ್ ದರ್ಶನ್ ಅವರು ನಟಿಸಿರುವ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಅವರು ಮೊದಲ ಬಾರಿ ನಾಯಕ ನಟಿಯಾಗಿ ನಟಿಸಿರುವ ಬಿಗ್ ಬಜೆಟ್ ಸಿನೆಮಾ (big budget film) ಕಾಟೇರ ಡಿ.29ರಂದು ಅದ್ಧೂರಿಯಾಗಿ ಬಿಡುಗಡೆಯಾಗಿತ್ತು.

ಅಭಿಮಾನಿಗಳು ಸಹ ಬಿಡುಗಡೆಗಾಗಿ ಕಾಯುತ್ತಿದ್ದರು. ಸಿನೆಮಾವು ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಮೂಡಿಬಂದಿತ್ತು. ಹಾಗಾಗಿ ಈ ಸಿನೆಮಾ ಆರ್ಥಿಕವಾಗಿಯೂ ಭರ್ಜರಿ ಕಲೆಕ್ಷನ್ ಮಾಡಿತ್ತು. ಮೊದಲು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ನಂತರ ತೆಲುಗು, ತಮಿಳು ಭಾಷೆಯಲ್ಲಿಯೂ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಆದ ಎಲ್ಲ ಭಾಷೆಗಳಲ್ಲೂ ಇದು ಹಿಟ್ ಆಗಿದೆ.

Kaatera Movie on OTTಇದೀಗ ಈ ಸಿನೆಮಾವನ್ನು ಜೀ 5 (Zee5) ಸಂಸ್ಥೆಯು ಭಾರೀ ಮೊತ್ತಕ್ಕೆ ಖರೀದಿ ಮಾಡಿದೆ. Zee 5 ಚಾನೆಲ್ನಲ್ಲಿ ಇದೆ ಬರುವ ಫೆ.9ರಂದು ಟೆಲಿಕಾಸ್ಟ್ ಆಗಲಿದೆ. ಇದರಿಂದ ಮತ್ತೊಮ್ಮೆ ಅಭಿಮಾನಿಗಳಿಗೆ ಹಬ್ಬ ಎಂದರೆ ತಪ್ಪಾಗಲಾರದು. ಈಗ ಡಿ ಬಾಸ್ ಸೆಲೆಬ್ರಿಟಿಗಳು, ಇನ್ನೂ ಸಿನೆಮಾ ನೋಡಲು ಸಾಧ್ಯವಾಗದವರು ಮನೆಯಲ್ಲಿಯೇ ಕುಳಿತು zee 5 ಮೂಲಕ ಸಿನೆಮಾ ವೀಕ್ಷಿಸಬಹುದಾಗಿದೆ.

ಫೆ.16ರಂದು ಡಿ.ಬಾಸ್ ದರ್ಶನ್ ಅವರ ಜನ್ಮದಿನವಿದ್ದು, ಅವರ ಜನ್ಮದಿನ ಉಡುಗೊರೆಯಾಗಿ ಜೀ 5 ನಲ್ಲಿ ಈ ಸಿನೆಮಾ ಸ್ಕ್ರೀನಿಂಗ್ (film streaming) ಆಗಲಿದೆ. ಈ ಕುರಿತು ಜೀ 5 ಸಂಸ್ಥೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಹಂಚಿಕೊಂಡಿದೆ.

ಈ ಸಿನೆಮಾವನ್ನು ತರುಣ್ ಸುಧೀರ್ (Tarun Sudheer) ಅವರು ನಿರ್ದೇಶನ ಮಾಡಿದ್ದಾರೆ. ರಾಕಲೈನ್ ವೆಂಕಟೇಶ್ ಅವರು ಬಂಡವಾಳ (producer) ಹೂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ (music director) ವಿ. ಹರಿಕೃಷ್ಣ ಅವರು ಸಂಗೀತ ನೀಡಿದ್ದಾರೆ.

ಕಾಟೇರ ಸಿನೆಮಾದಲ್ಲಿ ಡಿ. ಬಾಸ್ ದರ್ಶನ್, ಆರಾಧನಾ ರಾಮ್ (Aradhana Ram) ಅವರು ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದರ ಜೊತೆ ಕುಮಾರ್ ಗೋವಿಂದ, ಜಗಪತಿ ಬಾಬು, ಶೃತಿ, ವೈಜಯಂತ್ ಬಿರಾದಾರ್ ಸೇರಿದಂತೆ ದೊಡ್ಡ ಕಲಾವಿದರ ಬಳಗವೇ ಇದೆ.

Watch the Kaatera movie on TV, D Boss movie came to OTT

Follow us On

FaceBook Google News

Watch the Kaatera movie on TV, D Boss movie came to OTT