ಕನ್ನಡ ಚಿತ್ರರಂಗದ ಮೇರು ನಟಿ ಮಂಜುಳಾ ಅವರ ಮಗ ಈಗ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?

ಅದೆಷ್ಟೋ ಸಿನಿಮಾಗಳಲ್ಲಿ (Kannada Cinema) ಅಭಿನಯಿಸಿ ಅತ್ಯದ್ಭುತ ಅಭಿನೇತ್ರಿ ಎನಿಸಿಕೊಂಡ ಕಲಾವಿದೆ ಮಂಜುಳಾ (sandalwood actresses Manjula).

ಕನ್ನಡ ಚಿತ್ರರಂಗದ (Kannada Film Industry) 80 – 90ರ ದಶಕಗಳನ್ನು ಮೆಲುಕು ಹಾಕಿದರೆ, ಅದೆಷ್ಟೋ ಸಿನಿಮಾಗಳು ಮತ್ತೆ ಮತ್ತೆ ನೆನಪಾಗುತ್ತವೆ. ಆ ಸಿನಿಮಾದಲ್ಲಿನ ಹಾಡುಗಳು, ನಟ ನಟಿಯರು ಜನರ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದಂತೆ ತಮ್ಮ ಅದ್ಭುತ ನಟನೆಯಿಂದ ಶಾಶ್ವತವಾಗಿ ನೆಲೆಸಿದ್ದಾರೆ ಎನ್ನಬಹುದು.

ಅಂದಿನ ಕಾಲದ ನಟಿಯರು ಇಂದಿಗೂ ಎವರ್ ಗ್ರೀನ್ ನಟಿಯರು ಎನಿಸಿಕೊಂಡಿದ್ದಾರೆ. ಅಂತವರಲ್ಲಿ ಕನ್ನಡದ ಮೇರು ನಟಿ ಮಂಜುಳ (Kannada Actress Manjula) ಕೂಡ ಒಬ್ಬರು.

ಅದೆಷ್ಟೋ ಸಿನಿಮಾಗಳಲ್ಲಿ (Kannada Cinema) ಅಭಿನಯಿಸಿ ಅತ್ಯದ್ಭುತ ಅಭಿನೇತ್ರಿ ಎನಿಸಿಕೊಂಡ ಕಲಾವಿದೆ ಮಂಜುಳಾ (sandalwood actresses Manjula). ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಮಂಜುಳಾ ನಟಿಸದೇ ಇರುವ, ಮಾಡದೆ ಇರುವ ಪಾತ್ರಗಳೇ ಇಲ್ಲ. ಅವರ ನಟನೆಯ ಸಿನಿಮಾಗಳು ಇಂದಿಗೂ ಬಹುಶಃ ಥಿಯೇಟರ್ ನಲ್ಲಿ ತೆರೆ ಕಂಡರೆ 100 ಡೇಸ್ ಓಡಿದರೆ ಆಶ್ಚರ್ಯವಿಲ್ಲ.

Kannada News

ನಟಿ ಮಂಜುಳಾ ಇಂದು ನಮ್ಮ ಜೊತೆಗೆ ಇಲ್ಲದೆ ಇದ್ದರೂ ಅವರ ನೆನಪು ಮಾತ್ರ ಶಾಶ್ವತವಾಗಿ ಉಳಿದಿದೆ. ಇನ್ನು ಈ ನಟಿಯ ಬಗ್ಗೆ ಈಗಲೂ ಕೂಡ ತಿಳಿದುಕೊಳ್ಳಲು ಜನರಿಗೆ ಕುತೂಹಲ ಇದೆ, ಹಾಗಾದ್ರೆ ನಟಿ ಮಂಜುಳಾ ಅವರಿಗೆ ಇರುವ ಒಬ್ಬನೇ ಒಬ್ಬ ಮಗ ಈಗ ಎಲ್ಲಿದ್ದಾರೆ. ಏನು ಮಾಡುತ್ತಿದ್ದಾರೆ ಗೊತ್ತಾ?

Kannada Actress Manjulaದಿವಂಗತ ನಟಿ ಮಂಜುಳಾ ಅವರ ಮಗ ಅಭಿಷೇಕ್. ಖಾಸಗಿ ಕಂಪನಿ ಒಂದರಲ್ಲಿ ಉದ್ಯೋಗಿಯಾಗಿದ್ದು ಬೆಂಗಳೂರಿನ ನಿವಾಸಿಯಾಗಿದ್ದಾರೆ. ನಟಿ ಮಂಜುಳಾ ಅವರ ಮಗ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದು, ತಮಗೆ ತಮ್ಮ ತಾಯಿ ಅಭಿನಯದ ಎರಡು ಕನಸು ಸಿನಿಮಾ ತುಂಬಾ ಇಷ್ಟ ಎಂದಿದ್ದಾರೆ.

ಅಭಿಷೇಕ್ ಅವರ ಬಳಿ ನಿನ್ನ ತಾಯಿಯ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಎಂದು ಯಾರಾದ್ರೂ ಹೇಳಿದ್ರೆ ಬಹಳ ಖುಷಿಯಾಗುತ್ತಂತೆ. ಅವರಿಗೂ ಚಿತ್ರರಂಗದ ಬಗ್ಗೆ ಬಹಳ ಆಸಕ್ತಿ ಇದ್ದು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ತನ್ನ ಮಗನನ್ನು ಚಿತ್ರರಂಗಕ್ಕೆ ನಟನಿಗಾಗಿ ಕಳುಹಿಸುವ ಬಗ್ಗೆ ಆಸಕ್ತಿ ಇದೆ ಎಂದಿದ್ದಾರೆ.

ಬಹು ಪ್ರತಿಭೆ ನಟಿ ಮಂಜುಳಾ ಆಗಿನ ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ, ಬಹಳ ಸಣ್ಣ ವಯಸ್ಸಿನಲ್ಲಿ ದೊಡ್ಡ ಖ್ಯಾತಿಯನ್ನು ಗಳಿಸಿದ ನಾಯಕ ನಟಿ ಇವರು. ಡಾಕ್ಟರ್ ರಾಜಕುಮಾರ್ ಶ್ರೀನಾಥ್ ವಿಷ್ಣುವರ್ಧನ್ ಹಿಗೆ ಮೊದಲಾದ ಮೇರು ನಟರ ಜೊತೆಗೆ ಅಭಿನಯಿಸಿದ ಹೆಗ್ಗಳಿಕೆ ಇವರದ್ದು.

ಮಂಜುಳಾ ಅವರ ಸಿನಿಮಾ ಬಹಳ ಜನರ ಮೆಚ್ಚುಗೆಯನ್ನು ಗಳಿಸಿಕೊಳ್ಳುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಅವರ ನಟನೆ ಅವರ ಚುರುಕಿನ ಹಾವಭಾವಗಳು ಜನರನ್ನು ಹೆಚ್ಚು ಸೆಳೆಯುತ್ತಿತ್ತು ಎನ್ನಬಹುದು. ಇದೇ ಕಾರಣಕ್ಕೆ ಇಂದಿಗೂ ಕೂಡ ಮಂಜುಳಾ ಅಂದ್ರೆ ಸ್ಯಾಂಡಲ್ ವುಡ್ ಗೌರವಿಸುತ್ತೆ.

Where is Kannada actress Manjula’s son now

Follow us On

FaceBook Google News