ಇಂದು ನಾವು, ಯಾವುದೇ ಸಮಸ್ಯೆಗೆ ಪರಿಹಾರ ಬೇಕು ಅಂದ್ರು ಗೂಗಲ್ (Google) ನ ಮೊರೆ ಹೋಗುತ್ತೇವೆ. ಅಂದರೆ ಎಲ್ಲಾ ವಿಷಯಗಳಿಗೆ ಸರಿಯಾದ ಪರಿಹಾರ ಉತ್ತರ google ನಲ್ಲಿ ಸಿಗುತ್ತದೆ ಎನ್ನುವುದು ಎಲ್ಲರ ನಂಬಿಕೆ. ಹೀಗಾಗಿಯೇ ಪ್ರಪಂಚದಾದ್ಯಂತ ಗೂಗಲ್ ಎನ್ನುವುದು ದೈತ್ಯ ಸರ್ಚ್ ಎಂಜಿನ್ (search engine) ಆಗಿ ಗುರುತಿಸಿಕೊಂಡಿದೆ.
ಹೌದು, ಗೂಗಲ್ ಒಂದು ಇದ್ರೆ ಸಾಕು ನಮ್ಮ ಯಾವುದೇ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಯಾವುದೇ ಗೊಂದಲಗಳಿಗೆ ಪರಿಹಾರ ಸಿಗುತ್ತದೆ. ಎಷ್ಟೋ ಬಾರಿ ವೈದ್ಯರ ಬಳಿ ಹೋಗಿ ಔಷಧಿ (medicine) ತೆಗೆದುಕೊಳ್ಳುವುದಕ್ಕಿಂತಲೂ ಗೂಗಲ್ ನಲ್ಲಿ ಸರ್ಚ್ ಮಾಡಿ ಮಾತ್ರೆ ತಂದು ನುಂಗುವರೇ ಜಾಸ್ತಿ.
ಅಷ್ಟೇ ಅಲ್ಲ ಇಂದು ಸಾಮಾನ್ಯ ವಿಜ್ಞಾನ (general knowledge) ಎನ್ನುವುದು ಜನರ ತಲೆಯಲ್ಲಿ ಇಲ್ಲವೇ ಇಲ್ಲ ಅದು ಕೇವಲ ಕೈಯಲ್ಲಿ ಇರುವ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಸರ್ಚ್ ಎಂಜಿನ್ ನಲ್ಲಿ ಇದೆ ಎನ್ನುವಂತೆ ಆಗಿದೆ. ಅಷ್ಟರ ಮಟ್ಟಿಗೆ ಗೂಗಲ್ ಅನ್ನು ಜನ ಮೆಚ್ಚಿಕೊಂಡಿದ್ದಾರೆ.
ಗೂಗಲ್ ನಲ್ಲಿ ಇನ್ನು ಮುಂದೆ ಈ ವಿಷಯಗಳ ಹುಡುಕಾಟ ಬಿಡಿ!
ಗೂಗಲ್ ನಲ್ಲಿ ಎಲ್ಲಾ ವಿಷಯಗಳಿಗೆ ಒಂದಲ್ಲ ಒಂದು ಉತ್ತರ ಇದ್ದೆ ಇರುತ್ತದೆ. ಆದರೆ ಗೂಗಲ್ ನಲ್ಲಿ ನಾವು ಯಾವ ವಿಚಾರವನ್ನು ಸರ್ಚ್ (Google Search) ಮಾಡಬೇಕು ಎನ್ನುವ ವಿಷಯದ ಬಗ್ಗೆ ನಮಗೆ ತಿಳಿದಿರಬೇಕು. ಉದಾಹರಣೆಗೆ ಕೆಲವು ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ರು ಕೂಡ ಜೈಲು ಶಿಕ್ಷೆ ಅನುಭವಿಸುವ ಪರಿಸ್ಥಿತಿ ಎದುರಾಗಬಹುದು ಅಥವಾ ಭಾರಿ ಪ್ರಮಾಣದ ದಂಡ ತರ ಬೇಕಾಗಬಹುದು.
ಹಾಗಾಗಿ ಈ ಕೆಳಗಿನ ಮೂರು ವಿಷಯಗಳನ್ನು ಮಾತ್ರ ಅಪ್ಪಿ ತಪ್ಪಿಯು ಗೂಗಲ್ ನಲ್ಲಿ ಸರ್ಚ್ ಮಾಡಲು ಹೋಗಬೇಡಿ.
1. ದೇಶದ್ರೋಹದ ವಿಷಯದ ಹುಡುಕಾಟ. ಯಾವುದಾದರೂ ಸ್ಪೋಟಕ ತಯಾರಿಸುವುದು ಹೇಗೆ ಅಥವಾ ದೇಶದ್ರೋಕೆ ಸಂಬಂಧಿಸಿದ ಇತರ ಯಾವುದೇ ವಿಷಯವನ್ನು ಗೂಗಲ್ ನಲ್ಲಿ ಸರ್ಚ್ ಮಾಡುವಂತಿಲ್ಲ ಏನಾದ್ರೂ ಮಾಡಿದ್ರೆ ತಕ್ಷಣ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ.
2. ಇನ್ನು ಎರಡನೆಯದಾಗಿ ಗೂಗಲ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಅಥವಾ ಫೋಟೋಗಳ (Photos) ಹುಡುಕಾಟ ಮಾಡಬಾರದು. ಈ ಕೆಲಸ ಮಾಡುವುದು ಅಕ್ಷಮ್ಯ ಅಪರಾಧವಾಗುತ್ತದೆ. ಈ ರೀತಿ ಹುಡುಕಾಟ ನಡೆಸಿ ಸಿಕ್ಕಿ ಬಿದ್ದರೆ ಜೀವನಪರ್ಯಂತ ಜೈಲು ಊಟ ಗ್ಯಾರಂಟಿ.
3. ಯಾವುದೇ ಸಿನಿಮಾವನ್ನು ತಂಡ ಬಹಳ ಕಷ್ಟಪಟ್ಟು ಮಾಡಿರುತ್ತದೆ. ಆದರೂ ಕೂಡ ಪೈರಸಿ ಎನ್ನುವ ಸಮಸ್ಯೆ ಪ್ರತಿಯೊಂದು ಚಿತ್ರವನ್ನು ಕಾಡುತ್ತೆ. ಆದ್ದರಿಂದ ಈಗ ಈ ಸಮಸ್ಯೆಯನ್ನು ಕೂಡ ತಡೆಗಟ್ಟಲು ಪ್ರಯತ್ನಿಸಲಾಗುತ್ತಿದ್ದು ಗೂಗಲ್ ನಲ್ಲಿ ಪೈರಸಿ ಮಾಡಿದರೆ ಅಂಥವರನ್ನು ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು.
ಹಾಗಾಗಿ ಇನ್ನು ಮುಂದೆ ಗೂಗಲ್ ನಲ್ಲಿ ಸರ್ಚ್ ಮಾಡುವಾಗ ಕೆಲವು ಪ್ರಮುಖ ಹಾಗೂ ಸೂಕ್ಷ್ಮ ವಿಷಯಗಳನ್ನು ಸರ್ಚ್ ಮಾಡಲು ಹೋಗಬೇಡಿ ಇದರಿಂದ ಮುಂದೆ ಸಮಸ್ಯೆ ಅನುಭವಿಸಬೇಕಾಗುತ್ತದೆ.
ಇನ್ನು ಗೂಗಲ್ ನಲ್ಲಿ ನಾವು ಸರ್ಚ್ ಮಾಡಿದ್ರೆ ಪೊಲೀಸರಿಗೆ ಹೇಗೆ ತಿಳಿಯುತ್ತದೆ ಎನ್ನುವ ಪ್ರಶ್ನೆ ಹಲವರಲ್ಲಿ ಇರಬಹುದು, ಗೂಗಲ್ ಎನ್ನುವುದು ಸರ್ವರ್ ಗೆ ಸಂಬಂಧಿಸಿದ್ದು, ಸೈಬರ್ ಕ್ರೈಂ ಅಥವಾ ಇತರ ಡಿಪಾರ್ಟ್ಮೆಂಟ್ ಗಳು ಪ್ರತಿಯೊಬ್ಬ ವ್ಯಕ್ತಿಯ ಆನ್ ಲೈನ್ ಹುಡುಕಾಟದ ಡಾಟಾ ವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
Do not search these things on Google at all
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.