ಇನ್ಮುಂದೆ ಸಿಮ್ ಕಾರ್ಡ್ ಖರೀದಿಗೆ ಯಾವುದೇ ದಾಖಲೆ ಬೇಕಾಗಿಲ್ಲ! ಸಿಂಪಲ್ ಪ್ರಕ್ರಿಯೆ

ಇನ್ನು ಮುಂದೆ ನೀವು ಪೇಪರ್ ಲೆಸ್ ದಾಖಲೆಗಳನ್ನು (paperless documents) ಸಲ್ಲಿಸಿದರೆ ಸಾಕು ನಿಮಗೆ ಸಿಮ್ ಕಾರ್ಡ್ (SIM card) ಲಭ್ಯವಾಗುತ್ತದೆ.

2023 ಡಿಸೆಂಬರ್ ತಿಂಗಳು ಇನ್ನೇನು ಕೊನೆಗೊಳ್ಳಲಿದೆ. 2024 ಆರಂಭವಾಗಲಿದೆ, ಸರ್ಕಾರ ಹಲವು ಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯ ನಿಯಮಗಳ ಬದಲಾವಣೆ (rules changes) ಹಾಗೂ ನಿಯಮಗಳ ಪರಿಷ್ಕರಣೆ ಮಾಡುತ್ತಿದೆ.

ಟೆಲಿಕಾಂ ಕ್ಷೇತ್ರದಲ್ಲಿಯೂ (telecom department) ಕೂಡ ಸಾಕಷ್ಟು ಬದಲಾವಣೆಗಳು ಜನವರಿ ಒಂದು 2024 ರಿಂದ ಆಗಬಹುದು ಎಂದು ಊಹಿಸಲಾಗಿದೆ ಅದಕ್ಕೆ ತಕ್ಕಂತೆ ಟೆಲಿಕಾಂ ಕಂಪನಿಗೆ (telecom companies) ಸಂಬಂಧಪಟ್ಟ ಕೆಲವು ನಿಯಮಗಳ ಬಗ್ಗೆ ದೂರಸಂಪರ್ಕ ಇಲಾಖೆ ಮಾಹಿತಿ ನೀಡಿದೆ.

Realme ಅಗ್ಗದ 5G ಫೋನ್ ಬಿಡುಗಡೆ! 50MP ಕ್ಯಾಮೆರಾ, 33W ವೇಗದ ಚಾರ್ಜಿಂಗ್ ಬೆಂಬಲ

ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರದ ನಿರ್ಧಾರ! (Digitalisation in telecom field)

ಟೆಲಿಕಾಂ ಕ್ಷೇತ್ರ ಅಂದ್ರೆ ಬಹುತೇಕ ಡಿಜಿಟಲಿಕರಣ ಇದ್ದೇ ಇರುತ್ತೆ. ಅಂತದ್ರಲ್ಲಿ ಇದೀಗ ಟೆಲಿಕಾಂ ಕ್ಷೇತ್ರವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಬೇಕು ಎನ್ನುವುದು ಸರ್ಕಾರದ ನಿರ್ಧಾರವಾಗಿದ್ದು, ಬಳಿಕ ಸಿಮ್ ಕಾರ್ಡ್ ಖರೀದಿ (SIM card purchase) ಮಾಡುವುದಕ್ಕೆ ಯಾವುದೇ ಭೌತಿಕ ಪರಿಶೀಲನೆ ಅಗತ್ಯವಿಲ್ಲ. ಅಂದರೆ ಆನ್ಲೈನ್ (online) ಮೂಲಕವೇ ಎಲ್ಲಾ ಕೆಲಸಗಳು ನಡೆಯುತ್ತವೆ, ನೀವು ನಿಮ್ಮ ಆಧಾರ್ ಕಾರ್ಡ್ ಅಥವಾ ಇತರ ದಾಖಲೆ ಪ್ರತಿ ಸಲ್ಲಿಸುವ ಅಗತ್ಯವಿಲ್ಲ.

ದೂರಸಂಪರ್ಕ ಇಲಾಖೆ ಸಿಮ್ ಕಾರ್ಡ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಬಗ್ಗೆಯೂ ಹೊಸ ನಿಯಮವನ್ನು ಹೊರಡಿಸಿದೆ. ಇನ್ನು ಮುಂದೆ ನೀವು ಪೇಪರ್ ಲೆಸ್ ದಾಖಲೆಗಳನ್ನು (paperless documents) ಸಲ್ಲಿಸಿದರೆ ಸಾಕು ನಿಮಗೆ ಸಿಮ್ ಕಾರ್ಡ್ (SIM card) ಲಭ್ಯವಾಗುತ್ತದೆ.

₹6000ಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ, ದೊಡ್ಡ ಡಿಸ್ಪ್ಲೇ ಜೊತೆಗೆ ಉತ್ತಮ ಸೌಂಡ್ ಸಿಸ್ಟಂ

ಜನವರಿ ಒಂದು 2024 ರಿಂದ ಕೆ ವೈ ಸಿ ಪ್ರಕ್ರಿಯೆಯಲ್ಲಿ ಬದಲಾವಣೆ

Sim Cardಕೆವೈಸಿ ಪ್ರಕ್ರಿಯೆ (KYC process) ಆರಂಭವಾಗಿದ್ದು ಆಗಸ್ಟ್ 9 2012ರಿಂದ. ಈಗ ಈ ಪ್ರಕ್ರಿಯೆಗಳಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ, ಟೆಲಿಕಾಂ ಕಂಪನಿಗೆ ಈ ಬಗ್ಗೆ ದೂರ ಸಂಪರ್ಕ ಇಲಾಖೆ (department of telecommunication) ಅಧಿಸೂಚನೆಯನ್ನು ಹೊರಡಿಸಿದ್ದು ಪ್ರತಿಯೊಂದು ಟೆಲಿಕಾಂ ಕಂಪನಿ ಇದನ್ನ ಪಾಲಿಸಬೇಕಾಗಿದೆ.

ಈ ಹಿಂದೆ ಚಾಲ್ತಿಯಲ್ಲಿದ್ದ, ಅಂದರೆ ಹಳೆಯ ಕೆ ವೈ ಸಿ ಪದ್ಧತಿಯನ್ನು ಜನವರಿ ಒಂದು 2024 ರಿಂದ ರದ್ದುಪಡಿಸಲಾಗುತ್ತದೆ. ಅಂದ್ರೆ ಇನ್ನು ಮುಂದೆ ಯಾವುದೇ ರೀತಿಯ ಪೇಪರ್ ಅಥವಾ ನಕಲು ಪ್ರತಿ ನೀಡಿ ಕೆಲಸ ಮಾಡಿಸಿಕೊಳ್ಳಬೇಕಾಗಿಲ್ಲ. ಕೆ ವೈ ಸಿ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳಲಿದ್ದು, ಪೇಪರ್ ಲೆಸ್ ಕೆ ವೈ ಸಿ ಪ್ರಕ್ರಿಯೆ ನಡೆಯಲಿದೆ. ಕಾಗದ ಆಧಾರಿತ ಕೆವೈಸಿ ಇನ್ನು ಮುಂದೆ ಯಾವ ಟೆಲಿಕಾಂ ಕಂಪನಿಯಲ್ಲಿಯೂ ನಡೆಯುವುದಿಲ್ಲ.

ಈ ಹೊಸ ಕೆ ವೈ ಸಿ ಮಾದರಿ ಜಾರಿಗೆ ಬಂದರೆ ಗ್ರಾಹಕರ ವೆಚ್ಚ ಬಹಳ ಕಡಿಮೆ ಆಗುತ್ತದೆ, ಅದರಲ್ಲೂ ಸಿಮ್ ಕಾರ್ಡ್ ಖರೀದಿ ಮಾಡುವಾಗ ದಾಖಲೆಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಿದರೆ ಸಾಕು ನೀವು ಭೌತಿಕ ಪೇಪರ್ ನೀಡುವ ಅಗತ್ಯವಿಲ್ಲ

ಅಷ್ಟೇ ಅಲ್ಲದೆ ಸಿಮ್ ಕಾರ್ಡ್ ನಲ್ಲಿ ನಡೆಯಬಹುದಾದ ವಂಚನೆಗಳನ್ನು ತಡೆಗಟ್ಟಲು ಕೂಡ ಇದರಿಂದ ಸಾಧ್ಯವಾಗಲಿದೆ. ಈ ಹಿಂದೆ ಸಿಮ್ ಕಾರ್ಡ್ ಖರೀದಿ ಮಾಡಬೇಕು ಅಂದ್ರೆ ಗ್ರಾಹಕರು ಫಾರ್ಮ್ ಒಂದನ್ನು ಭರ್ತಿ (application form) ಮಾಡಬೇಕಿತ್ತು ಅದಕ್ಕೆ ಫೋಟೋ ಆಂಟಿಸಿ ಗುರುತಿನ ಪುರಾವೆಗಳನ್ನು ನಕಲಿ ಪ್ರತಿ ರೂಪದಲ್ಲಿ ಸಲ್ಲಿಸಬೇಕಿತ್ತು.

ಎಷ್ಟೋ ಸಂದರ್ಭದಲ್ಲಿ ಇಂತಹ ನಕಲಿ ಪ್ರತಿಯನ್ನು ದುರುಪಯೋಗಪಡಿಸಿಕೊಂಡು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಬೇರೆ ಬೇರೆ ಸಿಮ್ ಕಾರ್ಡ್ ಖರೀದಿಸುವ ಪ್ರಕ್ರಿಯೆ ಕೂಡ ನಡೆದಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಕ್ರಿಮಿನಲ್ ಚಟುವಟಿಕೆಯನ್ನು (criminal activities ) ತಡೆಗಟ್ಟುವುದಕ್ಕಾಗಿ ಕಾಗದರಹಿತ ಬಯೋಮೆಟ್ರಿಕ್ (biometric) ದೃಢೀಕರಣದ ಮೂಲಕ ಕೆ ವೈ ಸಿ ಮಾಡಿಸಲು ಸರ್ಕಾರ ಆದೇಶ ಹೊರಡಿಸಿದೆ. ಸಿಮ್ ಕಾರ್ಡ್ ಡೀಲರ್ಗಳು ಈ ನಿಯಮಗಳನ್ನು ಉಲ್ಲಂಘಿಸಿದ್ರೆ 10 ಲಕ್ಷ ರೂಪಾಯಿಗಳವರೆಗೆ ದಂಡಪಾವತಿಸಬೇಕು ಎಂಬುದಾಗಿಯೂ ಸರ್ಕಾರ ತಿಳಿಸಿದೆ.

no document is required for purchasing a SIM card, Simple process