ರದ್ದಾಗಲಿದೆ ಇಂತಹ ಜನರ ಬಿಪಿಎಲ್ ರೇಷನ್ ಕಾರ್ಡ್! ಮುಲಾಜಿಲ್ಲ ಸರ್ಕಾರದಿಂದ ಖಡಕ್ ವಾರ್ನಿಂಗ್

ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಸರ್ಕಾರಕ್ಕೆ ಮೋಸ ಮಾಡುವ ಪ್ರಕರಣಗಳು ಕೂಡ ನಡೆಯುತ್ತಿದೆ. ಅವೆಲ್ಲವನ್ನೂ ತಡೆಗಟ್ಟಲು ಈಗ ಸರ್ಕಾರ ಪ್ರಮುಖವಾದ ನಿರ್ಧಾರ ತೆಗೆದುಕೊಂಡಿದೆ.

Ration Card : ನಮ್ಮ ದೇಶದ ಜನರಿಗೆ ಸಹಾಯ ಆಗಲಿ ಅದರಲ್ಲೂ ಬಡ ಕುಟುಂಬದಲ್ಲಿ ಇರುವವರಿಗೆ ಸಹಾಯ ಆಗಲಿ ಎಂದು ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್, ಎಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇದೆಲ್ಲವನ್ನು ಸಹ ಅರ್ಹತೆ ಇರುವ ಕುಟುಂಬಗಳಿಗೆ ನೀಡಲಾಗುತ್ತದೆ. ಸರ್ಕಾರದಿಂದ ಉಚಿತ ಧಾನ್ಯ ಸೇರಿದಂತೆ ಇನ್ನು ಅನೇಕ ಪ್ರಯೋಜನಗಳನ್ನು ಕೊಡಲಾಗುತ್ತಿದೆ.

ಆದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಸರ್ಕಾರಕ್ಕೆ ಮೋಸ ಮಾಡುವ ಪ್ರಕರಣಗಳು ಕೂಡ ನಡೆಯುತ್ತಿದೆ. ಅವೆಲ್ಲವನ್ನೂ ತಡೆಗಟ್ಟಲು ಈಗ ಸರ್ಕಾರ ಪ್ರಮುಖವಾದ ನಿರ್ಧಾರ ತೆಗೆದುಕೊಂಡಿದ್ದು, ಇಂಥವರ ಕುಟುಂಬಕ್ಕೆ ನೀಡಿರುವ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ (Ration Card Cancellation) ಎಂದು ತಿಳಿಸಲಾಗಿದೆ. ಹಾಗಿದ್ದಲ್ಲಿ ನಿಜಕ್ಕೂ ಆಗಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಸರ್ಕಾರಿ ಜಾಗ ಒತ್ತುವರಿ, ಮನೆ ಕಟ್ಟಿಕೊಂಡವರಿಗೆ ಬಿಗ್ ಅಪ್ಡೇಟ್! ಧಿಡೀರ್ ಹೊಸ ನಿಯಮ

Kannada News

ನಮ್ಮ ರಾಜ್ಯದಲ್ಲಿ ಅರ್ಹತೆ ಇಲ್ಲದೇ ಇದ್ದರು ಸಹ ಬಹಳಷ್ಟು ಜನರು ರೇಷನ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಬಹಳಷ್ಟು ಸ್ಕ್ಯಾಮ್ ಸಹ ನಡೆಯುತ್ತಿದೆ. ಎಲೆಕ್ಷನ್ ಇದ್ದ ಕಾರಣ ಸರ್ಕಾರವು ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಆಗಿರಲಿಲ್ಲ.

ಆದರೆ ಈಗ ಸರ್ಕಾರ ಹೊಸ ನಿರ್ಧಾರ ತೆಗೆದುಕೊಂಡಿದ್ದು, ಮತ್ತೊಮ್ಮೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡುವುದರ ಜೊತೆಗೆ ಕೆಲವರ ರೇಷನ್ ಕಾರ್ಡ್ ಗಳನ್ನು ಬ್ಯಾನ್ ಮಾಡುವುದಾಗಿ ತಿಳಿಸಿದೆ.

Ration Cardಕೇಂದ್ರ ಸರ್ಕಾರವು ನಮ್ಮ ರಾಜ್ಯದಲ್ಲಿ ರೇಷನ್ ಕಾರ್ಡ್ ವಿತರಣೆಗೆ ಇಟ್ಟಿರುವ ಮಿತಿ ಈಗಾಗಲೇ ದಾಟಿದೆ. ರಾಜ್ಯದಲ್ಲಿ 1.03 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು, 10.83 ಲಕ್ಷ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿವೆ.

ಒಟ್ಟು 1.14 ಕೋಟಿ ಬಿಪಿಎಲ್ ಕುಟುಂಬಗಳಿದ್ದು, ಅವುಗಳಲ್ಲಿ 10.33 ಲಕ್ಷ ಕುಟುಂಬಗಳಿಗೆ ಸರ್ಕಾರವೇ ತನ್ನ ಖರ್ಚಿನಿಂದ ಸೌಲಭ್ಯಗಳನ್ನು ನೀಡುತ್ತಿದೆ. ಇದು ಸರ್ಕಾರಕ್ಕೆ ಹೊರೆ ಆಗಿದೆ ಜೊತೆಗೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಕೂಡ ಇದೆ..

ಏನೇ ಮಾಡಿದ್ರೂ ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ವಾ? ಹಾಗಾದ್ರೆ ಕೂಡಲೇ ಈ ಕೆಲಸ ಮಾಡಿ

ಇಂಥವರ ರೇಷನ್ ಕಾರ್ಡ್ ಬಂದ್

ಕೆಲವು ಜನರು ಆರ್ಥಿಕವಾಗಿ ಕಷ್ಟದಲ್ಲಿರುವುದಾಗಿ ತಿಳಿಸಿ ರೇಷನ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ, ಆದರೆ ಈಗ ಅವರ ಸ್ಥಿತಿ ಉತ್ತಮ ಹಂತಕ್ಕೆ ತಲುಪಿರುತ್ತದೆ. ಬಡತನದ ರೇಖೆಗಿಂತ ಮೇಲೆ ಇರುತ್ತಾರೆ, ಅಂಥವರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಸರ್ಕಾರ.

ಜೊತೆಗೆ ಕೆಲವು ಕುಟುಂಬಗಳು ಅವರ ಮನೆಯವರು ಮೃತರಾಗಿರುವವರ ಹೆಸರನ್ನು ಪಟ್ಟಿಯಿಂದ ಹೊರ ತೆಗೆಸಿಲ್ಲ, ಇದೆಲ್ಲವನ್ನು ಸಹ ಪತ್ತೆ ಹಚ್ಚಿ, ತೆಗೆದು ಹಾಕಿದರೆ ಸರ್ಕಾರಕ್ಕೆ ಹೊರೆ ಕಡಿಮೆ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಒಟ್ಟಿಗೆ ಸಿಗಲಿದೆ ₹4000, ಮಹಿಳೆಯರಿಗೆ ಭರ್ಜರಿ ನ್ಯೂಸ್!

BPL Ration Cardಹಾಗೆಯೇ ಬಿಪಿಎಲ್ ಕಾರ್ಡ್ ಇರುವವರ ಪೈಕಿ, 83-85% ಕುಟುಂಬಗಳು ಮಾತ್ರ ಪ್ರತಿ ತಿಂಗಳು ರೇಷನ್ ಪಡೆಯುತ್ತಿವೆ, ಹಲವರು ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿಲ್ಲ. ಅಂಥವರನ್ನು ಗುರುತಿಸುವ ಕೆಲಸ ಕೂಡ ನಡೆಯುತ್ತಿದ್ದು, 3 ತಿಂಗಳುಗಳಿಂದ ಯಾರೆಲ್ಲಾ ರೇಷನ್ ಪಡೆದಿಲ್ಲವೋ ಅಂಥವರ ರೇಷನ್ ಕಾರ್ಡ್ ಅನ್ನು ಅಮಾನತು ಮಾಡಬೇಕು ಎಂದು ನಿರ್ಧರಿಸಲಾಗಿದೆ. ಹಾಗೆಯೇ 6 ತಿಂಗಳಿನಿಂದ ರೇಷನ್ ಪಡೆದಿಲ್ಲ ಎಂದರೆ ಅಂಥವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದೆ.

ರೇಷನ್ ಕಾರ್ಡಿನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ಮತ್ತೊಮ್ಮೆ ವಿಸ್ತರಣೆ

BPL ration card of such people will be cancelled, Warning by Govt

Follow us On

FaceBook Google News