ಮನೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಇದ್ರೂ ರೇಷನ್ ಕಾರ್ಡ್ ಬಂದ್ ಆಗುತ್ತಾ? ಸರ್ಕಾರದ ಹೊಸ ರೂಲ್ಸ್

ಬಿಪಿಎಲ್ ಕಾರ್ಡ್ (BPL Card) ಇರುವವರ ಬಳಿ ಸ್ವಂತ ಕಾರ್ (Own Car) ಇದ್ದರೆ ಅವರ ಬಿಪಿಎಲ್ ಕಾರ್ಡ್ ವಾಪಸ್ ಪಡೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸರ್ಕಾರ ಹೇಳೋದೇನು?

ನಮ್ಮ ದೇಶದಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ರೇಷನ್ ಕಾರ್ಡ್ ಗಳನ್ನು (Ration Card) ಜಾರಿಗೆ ತರಲಾಯಿತು. ರೇಷನ್ ಕಾರ್ಡ್ ಗಳು, ಸರ್ಕಾರದ ಸೌಲಭ್ಯಗಳು ಇದೆಲ್ಲವನ್ನೂ ಕೂಡ ಸಾಮಾನ್ಯವಾಗಿ ಬಡತನದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕೆ ತರಲಾಗಿರುತ್ತದೆ.

ಇದೀಗ ರೇಷನ್ ಕಾರ್ಡ್ ವಿಚಾರದಲ್ಲಿ ಒಂದು ವಿಷಯ ವೈರಲ್ ಆಗಿದ್ದು, ಬಿಪಿಎಲ್ ಕಾರ್ಡ್ (BPL Card) ಇರುವವರ ಬಳಿ ಸ್ವಂತ ಕಾರ್ (Own Car) ಇದ್ದರೆ ಅವರ ಬಿಪಿಎಲ್ ಕಾರ್ಡ್ ವಾಪಸ್ ಪಡೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸರ್ಕಾರ ಹೇಳೋದೇನು?

ಸ್ವಂತ ಆಸ್ತಿ, ಸೈಟ್, ಮನೆ, ಜಮೀನು ಇರುವವರಿಗೆ ಸರ್ಕಾರದಿಂದ ಹೊಸ ಆದೇಶ! ಖಡಕ್ ನಿರ್ಧಾರ

ಬಿಪಿಎಲ್ ಕಾರ್ಡ್ ಕೊಡೋದ್ಯಾಕೆ?

ರೇಷನ್ ಕಾರ್ಡ್ ಗಳನ್ನು (Ration Card) ಮಾಡಿರುವುದೇ ಬಡವರ ಸಹಾಯಕ್ಕಾಗಿ. ನಮ್ಮಲ್ಲಿ ಎರಡು ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ, ಅವು ಜನರ ವಾರ್ಷಿಕ ಆದಾಯದ ಮೇಲೆ ಡಿಪೆಂಡ್ ಆಗಿರುತ್ತದೆ. ಅತೀ ಕಡಿಮೆ ಆದಾಯ ಇರುವವರಿಗೆ, ಬಡತನದ ರೇಖೆಗಿಂತ ಕೆಳಗೆ ಬರುತ್ತಾರೆ ಎಂದು ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ, ಇನ್ನು ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

Ration Cardಬಿಪಿಎಲ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಸಿಗುತ್ತದೆ. ಉಚಿತ ರೇಷನ್, ಹಾಗೂ ಸರ್ಕಾರ ಜಾರಿಗೆ ತರುವಂಥ ಯೋಜನೆಗಳ ಸಹಾಯ ಸಿಗುತ್ತದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಒಂದು ಸುದ್ದಿ ಹರಿದಾಡುತ್ತಿದ್ದು, ಬಡವರ ಮನೆಯಲ್ಲಿ ಬೈಕ್ (Bike), ಕಾರ್ (Car) ಅಥವಾ ಇನ್ನಿತರ ಐಷಾರಾಮಿ ವಸ್ತು ಇದ್ದರೆ ಅಂಥವರ ರೇಷನ್ ಕಾರ್ಡ್ ವಾಪಸ್ ಪಡೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸರ್ಕಾರದಿಂದಲೇ ಸ್ಪಷ್ಟನೆ ಸಿಕ್ಕಿದೆ.

ಇನ್ನು ಮುಂದೆಯೂ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕು ಅಂದ್ರೆ ಈ ಕೆಲಸವನ್ನು ತಪ್ಪದೇ ಮಾಡಿ

ಬ್ಯಾನ್ ಆಗುತ್ತಾ ರೇಶನ್ ಕಾರ್ಡ್?

ಸರ್ಕಾರ ರೇಷನ್ ಕಾರ್ಡ್ ವಿತರಣೆ ಮಾಡುವುದು ಆ ಕುಟುಂಬದ ಆದಾಯದ ಆಧಾರದ ಮೇಲೆ. ಒಂದು ವೇಳೆ ಆ ಕುಟುಂಬ ಬಡತನದಲ್ಲಿದ್ದು ಲೋನ್ (Loan) ಮೇಲೆ ಅಥವಾ ಇನ್ನಿತರ ಕಾರಣಕ್ಕೆ ವಾಹನ ಖರೀದಿ ಮಾಡಿದ್ದರೆ ಅಂಥವರ ರೇಷನ್ ಕಾರ್ಡ್ ವಾಪಸ್ ಪಡೆಯುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಹ ಜನರು ಪಡೆಯುತ್ತಿದ್ದಾರೆ ಎನ್ನುವ ವಿಚಾರ ಕೂಡ ಗೊತ್ತೇ ಇದೆ..

BPL Ration Cardಇಂಥವರ ರೇಷನ್ ಕಾರ್ಡ್ ಬ್ಯಾನ್ ಆಗುವುದಿಲ್ಲ. ಆದರೆ ಕೆಲವರು ಜಾಸ್ತಿ ಹಣ ಸಂಪಾದನೆ ಮಾಡುತ್ತಿದ್ದು, ತಮ್ಮ ಆದಾಯದ ಬಗ್ಗೆ ಸುಳ್ಳು ದಾಖಲೆಗಳನ್ನು ನೀಡಿ, ಕಡಿಮೆ ಆದಾಯ ಎಂದು ತೋರಿಸಿ, ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಾ ಇರುತ್ತಾರೆ. ಅಂಥವರ ರೇಷನ್ ಕಾರ್ಡ್ ಗಳು ಬ್ಯಾನ್ ಆಗಬಹುದು ಎಂದು ಹೇಳಲಾಗುತ್ತಿದೆ.

ರೇಷನ್ ಕಾರ್ಡ್‌ಗೆ ಹೊಸ ಸದಸ್ಯರ ಹೆಸರು ಸೇರಿಸಲು ಅವಕಾಶ! ಆನ್ಲೈನ್ ಸುಲಭ ಪ್ರಕ್ರಿಯೆ ಇಲ್ಲಿದೆ

Second hand car, new car, will the ration card be Canceled, New Rules of Govt

Follow us On

FaceBook Google News