ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನೀವು ಹೂಡಿಕೆ ಮಾಡೋ ಹಣಕ್ಕೆ ಸಿಗಲಿದೆ 10 ಲಕ್ಷ ರೂಪಾಯಿ!

Fixed Deposit : ಬೇರೆ ಎಲ್ಲೋ ಹೂಡಿಕೆ ಮಾಡುವುದಕ್ಕಿಂತ ಪೋಸ್ಟ್ ಆಫೀಸ್ ನಲ್ಲಿ ಮಾಡಿದರೆ, ನಿಮ್ಮ ಹಣ ಸುರಕ್ಷಿತವಾಗಿ ಇರುವುದರ ಜೊತೆಗೆ ಒಳ್ಳೆಯ ಆದಾಯ ಕೂಡ ನಿಮ್ಮದಾಗುತ್ತದೆ.

Fixed Deposit : ನಾವು ಎಷ್ಟೇ ಹಣ ಸಂಪಾದನೆ ಮಾಡಿದರು ಸಹ ಅದರಲ್ಲಿ ಸ್ವಲ್ಪ ಮೊತ್ತವನ್ನು ಉಳಿತಾಯ (Savings) ಮಾಡಿದರೆ ಮುಂದಿನ ಭವಿಷ್ಯಕ್ಕೆ ಸಹಾಯ ಆಗುತ್ತದೆ. ಹಾಗೆ ಉಳಿತಾಯ ಮಾಡುವುದಕ್ಕೆ ಪೋಸ್ಟ್ ಆಫೀಸ್ ಯೋಜನೆಗಳು (post office Scheme) ಸಹಾಯ ಮಾಡುತ್ತದೆ ಎಂದರೆ ತಪ್ಪಲ್ಲ

ಗೊತ್ತಿಲ್ಲದ ಬೇರೆ ಎಲ್ಲೋ ಹೂಡಿಕೆ ಮಾಡುವುದಕ್ಕಿಂತ ಪೋಸ್ಟ್ ಆಫೀಸ್ ನಲ್ಲಿ ಮಾಡಿದರೆ, ನಿಮ್ಮ ಹಣ ಸುರಕ್ಷಿತವಾಗಿ ಇರುವುದರ ಜೊತೆಗೆ ಒಳ್ಳೆಯ ಆದಾಯ ಕೂಡ ನಿಮ್ಮದಾಗುತ್ತದೆ. ಹಾಗಾಗಿ ಹೂಡಿಕೆಗೆ ಇದು ಒಳ್ಳೆಯ ಆಯ್ಕೆ ಎನ್ನಬಹುದು.

ಚಿನ್ನದ ಬೆಲೆ ಕ್ರಮೇಣ ಇಳಿಕೆ, ಶನಿವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತ; ಇಲ್ಲಿದೆ ಫುಲ್ ಡೀಟೇಲ್ಸ್

ಹಾಗೆಯೇ ಹೂಡಿಕೆ ಮಾಡುವುದಕ್ಕೆ ಪೋಸ್ಟ್ ಆಫೀಸ್ ನಲ್ಲಿ ಕೆಲವು ವಿಶೇಷ ಸೌಲಭ್ಯ ಇರುವ ಒಳ್ಳೆಯ ಯೋಜನೆಗಳು ಸಹ ಇದೆ. ಹೂಡಿಕೆ ಮಾಡುವ ಹಣಕ್ಕೆ ಬರುವ ಬಡ್ಡಿಗೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ ಎನ್ನುವುದು ಗೊತ್ತಿರುವ ವಿಚಾರ.

ಆದರೆ ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಎರಡು ಪಟ್ಟು ಲಾಭ ಬರುವುದರ ಜೊತೆಗೆ, ತೆರಿಗೆ ವಿನಾಯಿತಿ ಕೂಡ ಪಡೆಯುತ್ತೀರಿ. ಇದು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (POTD) ಯೋಜನೆ ಆಗಿದೆ. ಈ ಯೋಜನೆಯ ಬಗ್ಗೆ ಪೂರ್ತಿ ಡೀಟೇಲ್ಸ್ ತಿಳಿಯೋಣ..

Post Office Schemeಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಒಳ್ಳೆಯ ಲಾಭ ಪಡೆಯುವುದಕ್ಕೆ ಪೋಸ್ಟ್ ಆಫೀಸ್ ನ FD ಯೋಜನೆಗಳು ಒಳ್ಳೆಯ ಆಯ್ಕೆ ಆಗಿದೆ. FD ಯಲ್ಲಿ ನೀವು 1, 3 ಹಾಗೂ 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಈ ಸಮಯಕ್ಕೆ ಅನುಸಾರವಾಗಿ ಬಡ್ಡಿಮೊತ್ತವನ್ನು ನಿಗದಿ ಮಾಡಲಾಗುತ್ತದೆ.

ನಿಮ್ಮ ಹಣ ಡಬಲ್ ಆಗಬೇಕು ಎಂದರೆ ನೀವು 5 ವರ್ಷಗಳ ಅವಧಿಗೆ FD ಮಾಡಬೇಕು. ಇದಕ್ಕೆ 7.5% ಬಡ್ಡಿದರ ಸಿಗುತ್ತದೆ. ನಿಮ್ಮ ಹಣ ಹೂಡಿಕೆ ಮಾಡಿದ ಬಳಿಕ, 5 ವರ್ಷಕ್ಕೆ FD ಮೆಚ್ಯುರ್ ಆಗುವುದಕ್ಕಿಂತ ಮೊದಲು FD ಯನ್ನು ವಿಸ್ತರಿಸಬೇಕು. ಇದರಲ್ಲಿ ನಿಮಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನ ಸಿಗುತ್ತದೆ.

ಉಚಿತ ಆಧಾರ್ ಅಪ್‌ಡೇಟ್‌ಗೆ ಮತ್ತೊಮ್ಮೆ ಗಡುವು ವಿಸ್ತರಣೆ! ಲಾಸ್ಟ್ ಡೇಟ್ ಯಾವಾಗ ಗೊತ್ತಾ?

ಪೋಸ್ಟ್ ಆಫೀಸ್ ನ ಈ FD ಯೋಜನೆಯಲ್ಲಿ 5 ಲಕ್ಷ ರೂಪಾಯಿಗಳನ್ನು 5 ವರ್ಷಗಳ ಕಾಲಕ್ಕೆ ಹೂಡಿಕೆ ಮಾಡಿದರೆ, 7.5% ಬಡ್ಡಿದರಲ್ಲಿ 5 ವರ್ಷಗಳ ನಂತರ ₹2,24,974 ರೂಪಾಯಿ ಬಡ್ಡಿಮೊತ್ತವೆ ನಿಮಗೆ ಸಿಗುತ್ತದೆ. 5 ವರ್ಷಗಳ ಕೊನೆಯಲ್ಲಿ ಒಟ್ಟು ₹7,24,974 ರೂಪಾಯಿಗಳನ್ನು ಪಡೆಯುತ್ತೀರಿ.

ಈ FD ಯೋಜನೆಯನ್ನು ವಿಸ್ತರಣೆ ಮಾಡಿದರೆ, 10 ವರ್ಷಗಳ ಅವಧಿಯಲ್ಲಿ ನಿಮಗೆ ಸಿಗುವ ಬಡ್ಡಿದರ ₹5,51,175 ರೂಪಾಯಿ ಆಗಿರುತ್ತದೆ. ಹಾಗೆಯೇ ಮೆಚ್ಯುರಿಟಿ ಬಳಿಕ ನಿಮ್ಮ ಕೈಗೆ ₹10,51,175 ರೂಪಾಯಿಗಳು ಸಿಗುತ್ತದೆ.

Post Office Fixed DepositFD ಅವಧಿ ವಿಸ್ತರಣೆ ಮಾಡೋದು ಯಾವಾಗ?

1 ವರ್ಷದ FD ಯೋಜನೆಯನ್ನು ವಿಸ್ತರಣೆ ಮಾಡಬೇಕು ಎಂದರೆ, ಅವಧಿ ಮುಕ್ತಾಯ ಆಗುವುದಕ್ಕಿಂತ 6 ತಿಂಗಳ ಮೊದಲೇ ವಿಸ್ತರಣೆ ಮಾಡಿಸಬೇಕು. 2 ವರ್ಷಗಳ FD ಅವಧಿ ವಿಸ್ತರಣೆ ಆದರೆ 1 ವರ್ಷಕ್ಕಿಂತ ಮೊದಲೇ ವಿಸ್ತರಣೆ ಮಾಡಬೇಕು.

ಯಾವುದೇ ಬ್ಯಾಂಕ್ ಎಟಿಎಂ ಬಳಕೆದಾರರಿಗೆ ಬಿಗ್ ಅಲರ್ಟ್! ಇನ್ಮುಂದೆ ಪಾವತಿಸಬೇಕು ಹೆಚ್ಚಿನ ಶುಲ್ಕ

3 ಮತ್ತು 5 ವರ್ಷಗಳ FD ಯೋಜನೆಯನ್ನು ವಿಸ್ತರಣೆ ಮಾಡಬೇಕು ಎಂದರೆ, 18 ತಿಂಗಳುಗಳ ಮೊದಲೇ ಪೋಸ್ಟ್ ಆಫೀಸ್ ಗೆ ತಿಳಿಸಿ ಅವಧಿಯನ್ನು ವಿಸ್ತರಣೆ ಮಾಡಿಸಬೇಕು. ನಿಮ್ಮ ಪೋಸ್ಟ್ ಆಫೀಸ್ FD ಅಕೌಂಟ್ ಓಪನ್ ಮಾಡುವ ವೇಳೆ, ಅಥವಾ ಮುಗಿದ ನಂತರ FD ವಿಸ್ತರಣೆ ಮಾಡಬಹುದು.

In this post office Scheme, you will get 10 lakhs if you invest