ರೇಷನ್ ಕಾರ್ಡ್‌ಗೆ ಹೊಸ ಸದಸ್ಯರ ಹೆಸರು ಸೇರಿಸಲು ಅವಕಾಶ! ಆನ್ಲೈನ್ ಸುಲಭ ಪ್ರಕ್ರಿಯೆ ಇಲ್ಲಿದೆ

Ration Card : ಈಗ ಆನ್ಲೈನ್ ಮೂಲಕ ರೇಷನ್ ಕಾರ್ಡ್ ನಲ್ಲಿ ಮನೆಯ ಸದಸ್ಯರ ಹೆಸರನ್ನು ಸೇರಿಸುವುದಕ್ಕೆ ಸರ್ಕಾರದಿಂದ ಅವಕಾಶ ಸಿಕ್ಕಿದೆ.

ನಮ್ಮ ಭಾರತ ದೇಶದ ಪ್ರಜೆಗಳಿಗೆ ಬಹಳ ಮುಖ್ಯವಾದ ದಾಖಲೆ ರೇಷನ್ ಕಾರ್ಡ್ (Ration Card) ಎಂದರೆ ತಪ್ಪಲ್ಲ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಗೆ ಇರುವಷ್ಟೇ ಮಹತ್ವ ರೇಶನ್ ಕಾರ್ಡ್ ಗು ಇದೆ.

ಒಂದು ಕುಟುಂಬದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಅವರಿಗೆ ಸರ್ಕಾರದಿಂದ ಬಹಳಷ್ಟು ಸೌಲಭ್ಯಗಳು ಸಿಗುತ್ತದೆ. ಉಚಿತ ಆಹಾರ ಧಾನ್ಯಗಳು, ಆರೋಗ್ಯ ಸೇವೆ, ಸರ್ಕಾರದ ಯೋಜನೆಯ ಸೌಲಭ್ಯಗಳು ಇದೆಲ್ಲವೂ ಸಹ ಲಭ್ಯವಾಗುತ್ತದೆ..

ಕೊನೆಗೂ ಮೇ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಿ

ಬಿಪಿಎಲ್ ರೇಷನ್ ಕಾರ್ಡ್ ಪ್ರಾಮುಖ್ಯತೆ

ಹಾಗಾಗಿ ಸರ್ಕಾರದ ಕಡೆಯಿಂದ ಬದವರಿಗೆ ಸಿಗುವಂಥ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಲುವಾಗಿ ಹಲವು ಜನರು ರೇಶನ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ. ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಎಪಿಎಲ್ ರೇಷನ್ ಕಾರ್ಡ್, ಬಡತನದ ರೇಖೆಗಿಂತ ಮೇಲೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗುತ್ತದೆ. ಭಾರತದಲ್ಲಿರುವ ಬಡಕುಟುಂಬಕ್ಕೆ ಸೇರಿದವರು, ಅಗತ್ಯವಿರುವ ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ.

Ration Cardಪಡಿತರ ಚೀಟಿಗೆ ಹೊಸ ಸದಸ್ಯರ ಸೇರ್ಪಡೆ

ಹಲವು ಸಾರಿ ಕುಟುಂಬದಲ್ಲಿ ಮದುವೆಯಾದಾಗ ಅಥವಾ ಮಗು ಜನಿಸಿದಾಗ ಹೊಸ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬೇಕಾಗುತ್ತದೆ. ಕೆಲ ದಿನಗಳಿಂದ ಸರ್ಕಾರ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಅಪ್ಡೇಟ್ ಮಾಡಲು ಅವಕಾಶ ನೀಡಿರಲಿಲ್ಲ. ಆದರೆ ಈಗ ಆನ್ಲೈನ್ ಮೂಲಕ ರೇಷನ್ ಕಾರ್ಡ್ ನಲ್ಲಿ ಮನೆಯ ಸದಸ್ಯರ ಹೆಸರನ್ನು ಸೇರಿಸುವುದಕ್ಕೆ ಸರ್ಕಾರದಿಂದ ಅವಕಾಶ ಸಿಕ್ಕಿದ್ದು, ಸುಲಭವಾಗಿ ನಿಮ್ಮ ಮನೆಯ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸುವುದು ಹೇಗೆ ಎಂದು ತಿಳಿಯೋಣ..

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ಯೋ ಇಲ್ವೋ? ಈ ರೀತಿ ಸುಲಭವಾಗಿ DBT ಚೆಕ್ ಮಾಡಿಕೊಳ್ಳಿ

ಹೊಸ ಸದಸ್ಯರ ಹೆಸರನ್ನು ಆನ್ಲೈನ್ ಮೂಲಕ ಸೇರಿಸುವ ಪ್ರಕ್ರಿಯೆ

*ಮೊದಲು ಕರ್ನಾಟಕ ರಾಜ್ಯದ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

*ಇಲ್ಲಿ Add New Member to Ration Card ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

*ಈಗ ನೀವು ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ

*ಹೊಸ ಸದಸ್ಯರ ಹೆಸರು, ಅಗತ್ಯವಿರುವ ದಾಖಲೆಗಳು, ಫೋನ್ ನಂಬರ್ ಈ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

*ಮಾಹಿತಿ ಕೊಟ್ಟು, ದಾಖಲೆಗಳನ್ನು ಅಪ್ಲೋಡ್ ಮಾಡಿದ ಬಳಿಕ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

*ಈ ಪ್ರಕ್ರಿಯೆ ಮುಗಿದ ಬಳಿಕ ಅರ್ಜಿ ಸಲ್ಲಿಸಿದ್ದೀರಿ ಎಂದು ಅರ್ಥ

ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸೋಕೆ ಅವಕಾಶ! ಆದ್ರೆ ಈ ದಾಖಲೆ ಇರಬೇಕಷ್ಟೆ

BPL Ration Card
ಹೊಸ ಸದಸ್ಯರ ಹೆಸರು ಸೇರಿಸಲು ಬೇಕಾಗುವ ದಾಖಲೆಗಳು:

*ಮನೆಯ ಮುಖ್ಯಸ್ಥರ ಹೆಸರು
*ಹೊಸದಾಗಿ ಸೇರಿಸುವ ಸದಸ್ಯರ ಹೆಸರು
*ಹೊಸ ಸದಸ್ಯರ ಬರ್ತ್ ಸರ್ಟಿಫಿಕೇಟ್
*ಹೊಸ ಸದಸ್ಯರ ಆಧಾರ್ ಕಾರ್ಡ್.
ಇದಿಷ್ಟು ದಾಖಲೆಗಳನ್ನ ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು.

add new member’s name to ration card, Here’s an easy online process

Follow us On

FaceBook Google News