ನಿಮ್ಮ ಜಮೀನಿನ ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ! ಇಲ್ಲಿದೆ ಬದಲಾದ ಹೊಸ ನಿಯಮ

ಜಮೀನಿನ ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಸರ್ಕಾರದಿಂದ ರೈತರಿಗೆ ಸಿಗುವ ಪಿಎಮ್ ಕಿಸಾನ್ ಯೋಜನೆ, ಬೆಳೆ ವಿಮೆ ಪರಿಹಾರ, ಬಡ್ಡಿರಹಿತ ಸಾಲ (Loan) ಇದ್ಯಾವ ಸೌಲಭ್ಯಗಳು ಕೂಡ ಸಿಗುವುದಿಲ್ಲ.

ರಾಜ್ಯದಲ್ಲಿ ಕಷ್ಟಪಡುವ ಜೀವಿಗಳು ಎಂದರೆ ರೈತರು ಎನ್ನಬಹುದು. ಅವರು ಎಷ್ಟೇ ಶ್ರಮ ಪಟ್ಟರೂ ಸಹ ಅವರಿಗೆ ಸಲ್ಲಬೇಕಾದ ಲಾಭ ಸಿಗುವುದಿಲ್ಲ. ಹಲವು ಜನರು ಸುಳ್ಳು ದಾಖಲೆಗಳಿಂದ ರೈತರಿಗೆ ಮತ್ತು ಸರ್ಕಾರಕ್ಕೆ ಕೂಡ ಮೋಸ ಮಾಡುತ್ತಿದ್ದಾರೆ.

ಇದನ್ನು ಗಮನಿಸಿರುವ ಸರ್ಕಾರ ಜಮೀನುಗಳ ವಿಷಯದಲ್ಲಿ ರೈತರಿಗೆ ಮೋಸ ಆಗಬಾರದು ಎಂದು, ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡಬೇಕು ಎಂದು ನಿಯಮ ಮಾಡಿತ್ತು. ಆದರೆ ಇದೀಗ ಈ ನಿಯಮದಲ್ಲಿ ಬದಲಾವಣೆ ತರಲಾಗಿದ್ದು, ರೈತರು ಈ ಹೊಸ ನಿಯಮವನ್ನು ತಿಳಿದುಕೊಂಡಿರಬೇಕು..

ಪಹಣಿ RTC ಲಿಂಕ್ ಹಿಂದಿನ ಉದ್ದೇಶ ಏನು?

ಪಹಣಿ ಪತ್ರವು ಜಮೀನಿನ (Land Documents) ಬಗ್ಗೆ ಇರಬೇಕಾದ ಮುಖ್ಯವಾದ ಡಾಕ್ಯುಮೆಂಟ್ ಆಗಿದೆ. ಪಹಣಿಯಲ್ಲಿ ಒಂದು ಜಾಗದ ಹಿಡುವಳಿ, ಗಡಿ ಇಂಚು, ಸರ್ಕಾರಕ್ಕೆ ಸಂಬಂಧಿಸಿದ ಮಾಹಿತಿಗಳು ಇದೆಲ್ಲವೂ ಇರುತ್ತದೆ. ಹಾಗಾಗಿ ಈ ದಾಖಲೆ ಡಿಜಿಟಲೈಸ್ ಆಗುವುದು ಬಹಳ ಮುಖ್ಯ ಆಗಿರುತ್ತದೆ.

ಈ ವಿಷಯದಲ್ಲಿ ರೈತರಿಗೆ ಮತ್ತು ಸರ್ಕಾರಕ್ಕೆ ಮೋಸ ಆಗಬಾರದು ಎಂದು ಪಹಣಿ ಜೊತೆಗೆ (Property Documents) ಆಧಾರ್ ಕಾರ್ಡ್ ಲಿಂಕ್ ಮಾಡಬೇಕು, ಯಾರು ಕೂಡ ಸುಳ್ಳು ದಾಖಲೆ ಇಂದ ಸರ್ಕಾರಕ್ಕೆ ಮೋಸ ಮಾಡಬಾರದು ಎಂದು ಸರ್ಕಾರ ಈ ಒಂದು ನಿಯಮವನ್ನು ಜಾರಿಗೆ ತಂದಿತು.

ಕಡಿಮೆ ಕೃಷಿ ಭೂಮಿ ಇರೋ ರೈತರಿಗೆ ಸಿಗುತ್ತೆ ₹10,000 ರೂಪಾಯಿ! 90% ಜನರಿಗೆ ಈ ಯೋಜನೆ ಬಗ್ಗೆ ಗೊತ್ತಿಲ್ಲ

ಇದರಿಂದ ಸಿಗುವ ಲಾಭವೇನು?

*ಪಹಣಿ ದಾಖಲೆ ಡಿಜಿಟಲ್ ಆದರೆ ಅದರಿಂದ ಸಿಗುವ ಅನುಕೂಲ ಹೆಚ್ಚು, ಸುಲಭವಾಗಿ ಆನ್ಲೈನ್ ನಲ್ಲೇ ಪಹಣಿ ದಾಖಲೆ ಪಡೆಯಬಹುದು.

*ಕೆಲವರು ಹೆಚ್ಚು ಭೂಮಿ ಇದ್ದರು ಕಡಿಮೆ ತೆರಿಗೆ ಕಟ್ಟುತ್ತಾರೆ ಹಾಗೆಯೇ ಅಕ್ರಮವಾಗಿ ಭೂಮಿಯನ್ನು ವಶಮಾಡಿಕೊಂಡಿರುತ್ತಾರೆ. ಅಂಥ ಮೊಸಗಾರರನ್ನು ಪತ್ತೆಹಚ್ಚಲು ಸುಲಭ ಆಗುತ್ತದೆ.

*ವ್ಯಕ್ತಿಯ ಒಟ್ಟು ಆಸ್ತಿ ಎಷ್ಟು ಎನ್ನುವುದು ಗೊತ್ತಾಗುತ್ತದೆ.

*ಭೂಮಿ ಮಾರಾಟ ಮತ್ತು ಖರೀದಿಯಲ್ಲಿ ಸಮಸ್ಯೆ ಉಂಟಾಗುವುದಿಲ್ಲ.

*ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸುವಾಗ, ಆಧಾರ್ ಜೊತೆಗೆ ಪಹಣಿ ಲಿಂಕ್ ಆಗಿದ್ದರೆ ಒಳಿತು.

*ಸುಳ್ಳು ಮಾಹಿತಿ ನೀಡಿರುವವರ ಬಗ್ಗೆ ಗೊತ್ತಾಗುತ್ತದೆ, ಅರ್ಹತೆ ಇರುವ ರೈತರಿಗೆ ಮಾತ್ರ ಸರ್ಕಾರದ ಸೌಲಭ್ಯ ಸಿಗುತ್ತದೆ.

*ಒಮ್ಮೆ ಆಧಾರ್ ಜೊತೆಗೆ ಪಹಣಿ ಲಿಂಕ್ ಆದರೆ, ಸರ್ಕಾರದ ಯೋಜನೆಗಳಿಗೆ ಅಪ್ಲೈ ಮಾಡುವಾಗ, ಪಹಣಿ ಪತ್ರ ಕೊಡುವ ಅವಶ್ಯಕತೆ ಇಲ್ಲ.

ಅನ್ನಭಾಗ್ಯ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ! ಡಿಬಿಟಿ ಸ್ಟೇಟಸ್ ಚೆಕ್ ಮಾಡಿ

Link Aadhaar Card to your Land RTC, Easy processಲಿಂಕ್ ಮಾಡದೇ ಇದ್ದರೆ ಏನಾಗುತ್ತದೆ?

ಎಲ್ಲಾ ರೈತರು ಕೂಡ ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಸರ್ಕಾರ ನಿಯಮವನ್ನು ಕಡ್ಡಾಯಗೊಳಿಸಿದೆ. ಆಧಾರ್ RTC ಲಿಂಕ್ ಬಗ್ಗೆ ಮಾಹಿತಿ ಗೊತ್ತಾದ ಕೂಡಲೇ ಎಲ್ಲಾ ರೈತರು ಸಹ ಈ ಮುಖ್ಯವಾದ ಕೆಲಸವನ್ನು ಮಾಡಲೇಬೇಕು. ಇಲ್ಲದೇ ಹೋದರೆ, ಸರ್ಕಾರದಿಂದ ರೈತರಿಗೆ ಸಿಗುವ ಪಿಎಮ್ ಕಿಸಾನ್ ಯೋಜನೆ, ಬೆಳೆ ವಿಮೆ ಪರಿಹಾರ, ಬಡ್ಡಿರಹಿತ ಸಾಲ (Loan) ಇದ್ಯಾವ ಸೌಲಭ್ಯಗಳು ಕೂಡ ಸಿಗುವುದಿಲ್ಲ.

ರೈತರಿಗೆ ಗುಡ್ ನ್ಯೂಸ್, ವಿವಿಧ ಯೋಜನೆ ಅಡಿಯಲ್ಲಿ ಸಿಗುತ್ತಿದೆ ರೈತರಿಗೆ ಸಬ್ಸಿಡಿ ಸಾಲ! ಅರ್ಜಿ ಸಲ್ಲಿಸಿ

ಲಿಂಕ್ ಮಾಡುವ ವಿಧಾನ:

ಆಧಾರ್ ಜೊತೆಗೆ ಪಹಣಿ ಲಿಂಕ್ ಮಾಡುವುದಕ್ಕೆ ಪಹಣಿ ಜೆರಾಕ್ಸ್, ಆಧಾರ್ ಕಾರ್ಡ್, ಆಧಾರ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಇದಿಷ್ಟು ಇದ್ದರೆ ಸಾಕು. ಸುಲಭವಾಗಿ ಲಿಂಕ್ ಮಾಡಬಹುದು.

ಇದಕ್ಕಾಗಿ ಮೊದಲು ನೀವು ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಬೇಕು, ಅದಕ್ಕಾಗಿ ಈ https://landrecords.karnataka.gov.in/ ಲಿಂಕ್ ಗೆ ಭೇಟಿ ನೀಡಿ.

ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರ ಎರಡನ್ನು ಸ್ಕ್ಯಾನ್ ಮಾಡಬೇಕು. ಬಳಿಕ ಆಧಾರ್ ಗೆ ಲಿಂಕ್ ಆಗಿರುವ ನಿಮ್ಮ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿದರೆ, ಈ ಎರಡು ದಾಖಲೆಗಳು ಲಿಂಕ್ ಆಗುತ್ತದೆ.

ಆನ್ಲೈನ್ ಮಾಡುವುದಕ್ಕೆ ಗೊತ್ತಾಗಲಿಲ್ಲ ಎಂದರೆ, ನಿಮಗೆ ಹತ್ತಿರ ಇರುವ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅಧಿಕಾರಿಗಳ ಬಳಿ ಪಹಣಿ ಆಧಾರ್ ಲಿಂಕ್ ಮಾಡಬೇಕು ಎಂದು ಕೇಳಿದರೆ, ಅದಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿಸಿಕೊಂಡು, ಲಿಂಕ್ ಮಾಡುತ್ತಾರೆ. ಈ ಕೆಲಸಕ್ಕೆ ನೀವು ಹಣ ಪಾವತಿ ಮಾಡಬೇಕಾಗುತ್ತದೆ. ಈ ಒಂದು ಲಿಂಕ್ ಮಾಡಿದರೆ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

Link Aadhaar Card with your Land Documents RTC, Here is the changed new rule