ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ₹58,000 ರೂಪಾಯಿ ಸಬ್ಸಿಡಿ ಹಣ! ಇಂದೇ ಅರ್ಜಿ ಸಲ್ಲಿಸಿ

ಜಾನುವಾರು ಸಾಕಾಣಿಕೆ ಮಾಡುವವರಿಗೆ ಪ್ರಾಣಿಗಳಿಗೆ ಶೆಡ್ ಕಟ್ಟುವುದಕ್ಕೆ ಸರ್ಕಾರದಿಂದ ಒಂದು ಯೋಜನೆಯ ಮೂಲಕ 58,000 ರೂಪಾಯಿಗಳವರೆಗು ಸಹಾಯ ಸಿಗಲಿದೆ. ಅದನ್ನು ಪಡೆಯುವುದು ಹೇಗೆ ಎಂದು ತಿಳಿಯೋಣ

ನಮ್ಮ ಭಾರತ ದೇಶದ ಮೂಲ ಜೀವನೋಪಾಯ ಕೃಷಿ. ನಮ್ಮಲ್ಲಿ ಹೆಚ್ಚು ಹಳ್ಳಿಗಳಿವೆ, ಹೆಚ್ಚಿನ ಜನರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವಂಥವರು. ರೈತರೇ ಹೆಚ್ಚಿರುವ ನಮ್ಮ ದೇಶದಲ್ಲಿ ಅವರಿಗೇ ಯಾವಾಗಲೂ ಉತ್ತಮವಾದ ಆದಾಯ ಬರುವುದಿಲ್ಲ.

ಏಕೆಂದರೆ ಕೃಷಿ ಪ್ರಕೃತಿಯನ್ನು ಅವಲಂಬಿಸಿ ಮಾಡುವಂಥ ಕೆಲಸ ಆಗಿದೆ. ಕೆಲವೊಮ್ಮೆ ಮಳೆ ಸರಿಯಾದ ಸಮಯಕ್ಕೆ ಬರುವುದಿಲ್ಲ, ಇನ್ನು ಕೆಲವೊಮ್ಮೆ ಅತಿಯಾದ ಮಳೆ ಇಂದ ಬೆಳೆ ನಾಶ ಉಂಟಾಗಬಹುದು. ಕೀಟಗಳ ಸಮಸ್ಯೆ ಕೂಡ ಎದುರಾಗಬಹುದು.

ಹಾಗಾಗಿ ರೈತರು ಕೃಷಿಯನ್ನು ಮಾತ್ರ ನಂಬಿಕೊಂಡು ಇದ್ದರೆ, ಉತ್ತಮ ಆದಾಯ ಗಳಿಸಿ ಜೀವನ ನಡೆಸಲು ಸಾಧ್ಯ ಅಗುವುದಿಲ್ಲ. ಈ ಕಾರಣಕ್ಕೆ ರೈತರು ತಮ್ಮದೇ ಆದ ಸ್ವಂತ ಉದ್ಯಮ (Own Business) ಶುರು ಮಾಡಲು ಸಹಾಯ ಆಗಲಿ ಎಂದು ಸರ್ಕಾರ ಕೂಡ ಅನೇಕ ಯೋಜನೆಗಳನ್ನು ಜಾರಿಗೆ ತಂದು, ಅವುಗಳ ಮೂಲಕ ರೈತರಿಗೆ ಸಹಾಯ ಮಾಡುತ್ತಿದೆ. ಕೃಷಿಗೆ (Agriculture) ಹೊಂದಿಕೊಂಡ ಹಾಗೆ ರೈತರು ಸಣ್ಣದಾಗಿ ಉದ್ಯಮ ಶುರು ಮಾಡುವುದರಿಂದ ಉತ್ತಮವಾಗಿ ಹಣ ಗಳಿಸಬಹುದು..

ಈ ತಳಿ ಎಮ್ಮೆ ಸಾಕಾಣಿಕೆ ಮಾಡಿದ್ರೆ ಪ್ರತಿ ತಿಂಗಳು ₹30,000 ಆದಾಯ! ವರ್ಷಕ್ಕೆ ₹3,24 ಲಕ್ಷ ರೂ. ಗಳಿಕೆ

ರೈತರಿಗೆ ಹೈನುಗಾರಿಕೆ, ಕುರಿ, ಕೋಳಿ, ಹಸು ಸಾಕಾಣಿಕೆ ಉತ್ತಮ ಉದ್ಯಮ. ಇದನ್ನು ಶುರು ಮಾಡಿ ಒಳ್ಳೆಯ ಲಾಭ ಗಳಿಸಬಹುದು. ಹೈನುಗಾರಿಕೆ ಜಾನುವಾರು ಸಾಕಾಣಿಕೆ ಮಾಡುವವರಿಗೆ ಸರ್ಕಾರವೇ ಸಹಾಯ ಮಾಡುತ್ತದೆ. ಅಂಥವರಿಗೆ ಸಹಾಯ ಧನ ನೀಡಿ, ಪ್ರೋತ್ಸಾಹ ನೀಡಲಾಗುತ್ತದೆ.

ಹೈನುಗಾರಿಕೆ ಮಾಡುವವರು, ಜಾನುವಾರು ಸಾಕಾಣಿಕೆ ಮಾಡುವವರಿಗೆ ಪ್ರಾಣಿಗಳಿಗೆ ಶೆಡ್ ಕಟ್ಟುವುದಕ್ಕೆ ಸರ್ಕಾರದಿಂದ ಒಂದು ಯೋಜನೆಯ ಮೂಲಕ 58,000 ರೂಪಾಯಿಗಳವರೆಗು ಸಹಾಯ ಸಿಗಲಿದೆ. ಅದನ್ನು ಪಡೆಯುವುದು ಹೇಗೆ ಎಂದು ತಿಳಿಯೋಣ.

ಅರ್ಜಿ ಸಲ್ಲಿಕೆಯ ಮಾನದಂಡಗಳು

*ನಮ್ಮ ರಾಜ್ಯದ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು

*ರೈತರು ಜಾನುವಾರು ಸಾಕಣಿಕೆ ಅಥವಾ ಮೀನು ಸಾಕಾಣಿಕೆ ಮಾಡುತ್ತಿರಬೇಕು, ಜೊತೆಗೆ ಶೆಡ್ ನಿರ್ಮಿಸಲು ಅವರ ಬಳಿ ಸ್ವಂತ ಜಾಗ ಇರಬೇಕು.

*4 ಕ್ಕಿಂತ ಹೆಚ್ಚು ಜಾನುವಾರುಗಳನ್ನು ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು.

*SC/ST ರೈತರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ.

*ಈ ಯೋಜನೆಯ ಸೌಲಭ್ಯ ಪಡೆಯಲು ನಿಮ್ಮ ಹಳ್ಳಿಯ ಪಶು ವೈದ್ಯರಿಂದ ಸರ್ಟಿಫಿಕೇಟ್ ಪಡಿದಿರಬೇಕು.

*ನಿರ್ಮಿಸುವ ಶೆಡ್ ಗಳು 10 ಅಡಿ ಅಗಲ, 18 ಅಡಿಗಳ ಗೋಡೆ, 5 ಅಡಿ ಎತ್ತರ ಇರುವ ಗೋಡೆ, ಇದೆಲ್ಲವು ಇರಬೇಕು. ಶೆಡ್ ನಲ್ಲಿ ಗೋದಲಿ ಮೇವು ತೊಟ್ಟಿ ಇರಬೇಕು, ಪ್ರಾಣಿಗಳು ಉಸಿರಾಡಲು ಸಹಾಯ ಆಗುವ ಹಾಗೆ ಶೀಟ್ ಮತ್ತು ಬೆಳಕು ಬರುವ ಹಾಗಿರಬೇಕು.

*ಈ ಯೋಜನೆಯಲ್ಲಿ 58,000 ಸಹಾಯಧನ ಸಿಗಲಿದ್ದು, 10,556 ರೂಪಾಯಿಗಳು ಕೂಲಿ ಖರ್ಚಿಗೆ. 56,444 ರೂಪಾಯಿಗಳು ಬೇಕಿರುವ ವಸ್ತುಗಳನ್ನು ಪಡೆಯಲು ಕೊಡಲಾಗುತ್ತದೆ.

ನಿಮ್ಮ ಆಧಾರ್ ಕಾರ್ಡ್ ಇಂದ ಎಷ್ಟು ಸಿಮ್ ಕಾರ್ಡ್ ಖರೀದಿ ಆಗಿದೆ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ

Cow Farmingಅಗತ್ಯವಿರುವ ದಾಖಲೆಗಳು

*ರೈತರ ಆಧಾರ್ ಕಾರ್ಡ್

*ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್

*ಶೆಡ್ ನಿರ್ಮಾಣ ಮಾಡುವ ಜಾಗದ ಬಗ್ಗೆ ದಾಖಲೆಗಳು

*ಜಾನುವಾರುಗಳ ಬಗ್ಗೆ ಪಶು ವೈದ್ಯರಿಂದ ಪ್ರಮಾಣಪತ್ರ

*ಅರ್ಜಿ ಅಪ್ಲಿಕೇಶನ್

*ಇನ್ನಿತರ ದಾಖಲೆಗಳು

ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಹತ್ತಿರದ ಕೇಂದ್ರಕ್ಕೆ ಹೋಗಿ, ಪೂರ್ತಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

ಗೋಲ್ಡ್ ಪ್ರಿಯರಿಗೆ ಬಿಗ್ ರಿಲೀಫ್, ₹1,520 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ! ಇಲ್ಲಿದೆ ಫುಲ್ ಡೀಟೇಲ್ಸ್

58,000 subsidy money will be available for cow, sheep and Poultry farming

Follow us On

FaceBook Google News