Bank Account : ಸರ್ಕಾರದ ಯೋಜನೆಗಳ ಹಣ ನಿಮಗೆ ಸಿಗಬೇಕಾ? ಪ್ರತಿ ತಿಂಗಳು ವೇತನ ನಿಮಗೆ ಬೇಕಾ? ಪಿಂಚಣಿ ಹಣವನ್ನು ಪಡೆದುಕೊಳ್ಳಬೇಕಾ? ಈ ಯಾವುದೇ ರೀತಿಯ ಹಣ ನಿಮಗೆ ಬೇಕು ಅಂದ್ರೆ ಯಾರು ನಿಮ್ಮ ಹತ್ತಿರ ಕ್ಯಾಶ್ (cash) ಕೊಡುವುದಿಲ್ಲ. ಅದರ ಬದಲು ನಿಮ್ಮ ಖಾತೆಗೆ ಜಮಾ ಮಾಡುತ್ತಾರೆ.

ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ನಲ್ಲಿ ತಮ್ಮದೇ ಆಗಿರುವ ಖಾತೆ ಹೊಂದಿರುವುದು ಅನಿವಾರ್ಯವಾಗಿದೆ. ಬ್ಯಾಂಕ್ ನಲ್ಲಿ ಖಾತೆ ಹೊಂದಿರದೆ ಇರುವವರು ಬಹುತೇಕ ಯಾರು ಇಲ್ಲ ಎಂದೇ ಹೇಳಬಹುದು. ಹಣಕಾಸಿನ ವ್ಯವಹಾರ (financial transaction) ಮಾಡಿಕೊಳ್ಳುವುದಕ್ಕೆ ಮುಖ್ಯವಾಗಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವುದು ಸಾಮಾನ್ಯ.

New update for those who have more than one bank account

ಮನೆ ಇಲ್ಲದವರಿಗೆ ಸ್ವಂತ ಮನೆ ಕಟ್ಟಲು ಸರ್ಕಾರದಿಂದ 1.5 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ

ಬ್ಯಾಂಕಿನಲ್ಲಿ ಬೇರೆ ಬೇರೆ ರೀತಿಯ ಖಾತೆಗಳನ್ನು (Bank Account) ತೆರೆಯಬಹುದು. ಪ್ರಾಥಮಿಕ ಖಾತೆ, ಉಳಿತಾಯ ಖಾತೆ (Savings Account), ವೇತನ ಖಾತೆ (Salary Account), ಜಂಟಿ ಖಾತೆ ಹೀಗೆ ಒಂದೊಂದು ಕಾರಣಕ್ಕೆ ಒಂದೊಂದು ರೀತಿಯ ಖಾತೆಯನ್ನು ತೆರೆಯಬಹುದು. ಹಾಗಾದ್ರೆ ನಿಜಕ್ಕೂ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಅಥವಾ ಖಾತೆ ಹೊಂದಿರಬಹುದು ಗೊತ್ತ?

ಪ್ರಸ್ತುತ ಆರ್ ಬಿ ಐ (RBI) ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಹೊಸ ಹೊಸ ನಿಯಮಗಳನ್ನು ಕೂಡ ಜಾರಿಗೆ ತರುತ್ತಿದೆ. ಇಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಎಷ್ಟು ಖಾತೆಯನ್ನು ಹೊಂದಿರಬಹುದು ಎನ್ನುವುದಕ್ಕೆ ಆರ್‌ಬಿಐ ನಿಯಮ ಏನು ಹೇಳುತ್ತೆ ಎಂಬುದರ ಬಗ್ಗೆ ಈ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ.

ಚೆಕ್ ಮೂಲಕ ಹಣದ ವ್ಯವಹಾರ ಮಾಡುವವರಿಗೆ ಹೊಸ ನಿಯಮ! ಬಂತು ಹೊಸ ರೂಲ್ಸ್

ಒಬ್ಬ ವ್ಯಕ್ತಿ ಎಷ್ಟು ಖಾತೆ ಹೊಂದಿರಬಹುದು? (How many accounts can a person have?)

Bank Accountಈ ಪ್ರಶ್ನೆಗೆ ಉತ್ತರಿಸುವುದಾದರೆ ನಾವು ಎಷ್ಟು ಬ್ಯಾಂಕ್ ಅಕೌಂಟ್ (bank account) ಹೊಂದಿರಬೇಕು ಎನ್ನುವುದಕ್ಕೆ ಯಾವುದೇ ಮಿತಿ ಇಲ್ಲ. ಅದರ ಬದಲು ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು ಎನ್ನುವುದಕ್ಕೆ ಮಿತಿ ವಿಧಿಸಲಾಗಿದೆ. ದಾಖಲೆ ಹೊಂದಿಲ್ಲದೆ ಇದ್ದರೆ ಆಗ ಆದಾಯ ತೆರಿಗೆ ಇಲಾಖೆ ದಂಡ ವಿಧಿಸಬಹುದು.

ಆದರೆ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದಿರಬಹುದು ಎನ್ನುವುದಕ್ಕೆ ನಿಯಮವಿಲ್ಲ. ನೀವು ದೇಶಾದ್ಯಂತ ಎಷ್ಟು ಖಾತೆಯನ್ನು ಬೇಕಾದರೂ ಹೊಂದಿರಬಹುದು. ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಬೇರೆ ಬೇರೆ ಖಾತೆಯನ್ನು ತೆರೆಯುತ್ತಾರೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ತೆರೆದರೆ ಕೆಲವು ಅನುಕೂಲಗಳು ಹಾಗೂ ಅನಾನುಕೂಲಗಳು ಕೂಡ ಇವೆ.

ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್! ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತೆ ₹8,000 ಹಣ

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ ಏನಾಗಬಹುದು?

ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿರಬಹುದು. ಕೆಲವೊಂದು ಸಂದರ್ಭದಲ್ಲಿ ಇದು ಹೆಚ್ಚು ಪ್ರಯೋಜನಕಾರಿಯೂ ಆಗಿರುತ್ತದೆ. ಉದಾಹರಣೆಗೆ ನೀವು ಪ್ರೈಮರಿ ಬ್ಯಾಂಕ್ (primary account) ಅಕೌಂಟ್ ಹೊಂದಿದ್ದರೆ ಉಳಿತಾಯ ಖಾತೆಗೆ ಆ ಖಾತೆಯಿಂದ ಹಣ ವರ್ಗಾಯಿಸಬಹುದು.

ವೇತನ ಖಾತೆ (salary account) ಹೊಂದಿದ್ದರೆ ನೀವು ಎಲ್ಲಿ ಕೆಲಸ ಮಾಡುತ್ತಿರೋ ಅಲ್ಲಿನ ಪ್ರತಿ ತಿಂಗಳ ವೇತನ ಮಾತ್ರ ಈ ಖಾತೆಗೆ ಬರುತ್ತದೆ. ಅದೇ ರೀತಿ ನೀವು ಉಳಿತಾಯ ಖಾತೆ (savings account) ಯನ್ನು ಹೊಂದಿದ್ದರೆ ನಿಮ್ಮ ಬಳಿ ಇರುವ ಹಣವನ್ನು ಡೆಪಾಸಿಟ್ (money deposit) ಮಾಡುವುದರ ಮೂಲಕ ಉಳಿತಾಯ ಮಾಡಬಹುದು. ಇನ್ನು ಗಂಡ ಹೆಂಡತಿ ಅಥವಾ ಕಂಪನಿ ಪಾಲುದಾರರು ಜಂಟಿ ಖಾತೆ (joint account) ಯನ್ನು ಕೂಡ ಹೊಂದಲು ಅವಕಾಶವಿದೆ.

ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು ಗೊತ್ತಾ? ಹಣ ಇಡುವುದಕ್ಕೂ ಇದೆ ಮಿತಿ

ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದು ಒಳ್ಳೆಯದೇ?

*ಕೆಲವೊಂದು ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದೇ ಸಮಸ್ಯೆಯಾಗುತ್ತದೆ. ಉದಾಹರಣೆಗೆ ಸ್ವಲ್ಪ ಹಣ ಇದ್ದು ಅದನ್ನು ಬೇರೆ ಬೇರೆ ಖಾತೆಯಲ್ಲಿ ಇಡುತ್ತಾ ಬಂದರೆ ನಿಮಗೆ ಅದರಿಂದ ಸಿಗುವ ಬಡ್ಡಿದರ ಬಹಳ ಕಡಿಮೆ ಆಗುತ್ತದೆ. ಅದೇ ಅಷ್ಟು ಹಣವನ್ನು ಒಂದೇ ಖಾತೆಯಲ್ಲಿ ಇಟ್ಟರೆ ಅದರಿಂದ ಸಿಗುವ ಆದಾಯ ಹಾಗೂ ಇತರ ಬೆನಿಫಿಟ್ ಗಳು ಜಾಸ್ತಿ.

*ಇನ್ನು ಎರಡನೆಯದಾಗಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿದ್ದು ನೀವು ಎಲ್ಲಾ ಬ್ಯಾಂಕ್ ಖಾತೆಯನ್ನು ನಿರ್ವಹಿಸಬೇಕು, ನೀವು ಬ್ಯಾಂಕ್ ನಲ್ಲಿ ಹಣಕಾಸಿನ ವ್ಯವಹಾರ ಮಾಡದೆ ಇದ್ದರೂ ಕೂಡ ಆ ಖಾತೆಗೆ ವಾರ್ಷಿಕ ಶುಲ್ಕ (processing fee) ಪಾವತಿಸಬೇಕಾಗುತ್ತದೆ.

*ಇನ್ನು ಮೂರನೆಯದಾಗಿ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದಾಗ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ (minimum balance) ಇಡಬೇಕು ಹೀಗೆ ನೀವು ಹೆಚ್ಚು ಖಾತೆ ಹೊಂದಿದ್ದಾಗ ಪ್ರತಿಯೊಂದು ಬ್ಯಾಂಕ್ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಷ್ಟಕರವಾಗಬಹುದು. ಒಟ್ಟಿನಲ್ಲಿ ಒಬ್ಬ ವ್ಯಕ್ತಿ ದೇಶಾದ್ಯಂತ ಎಷ್ಟು ಖಾತೆ ಹೊಂದಿರಬೇಕು ಎನ್ನುವುದಕ್ಕೆ ಆರ್‌ಬಿಐ ಯಾವುದೇ ಮಿತಿಯನ್ನು ಹೇರಿಕೆ ಮಾಡಿಲ್ಲ. ನೀವು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರಬಹುದು.

How many bank accounts a person can have, What happens if the limit is exceeded