Optical Illusion: ಈ ಚಿತ್ರದಲ್ಲಿ ಚಿರತೆಯನ್ನು ಗುರುತಿಸುವುದು ಅಷ್ಟು ಸುಲಭವಲ್ಲ, ಗುರುತಿಸಿದರೆ ನೀವೇ ಗ್ರೇಟ್
Optical Illusion: ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಚಿರತೆ ಎಲ್ಲೋ ಅಡಗಿದೆ. ಆದರೆ ಆ ಚಿರತೆಯನ್ನು ಹುಡುಕುವುದೇ ಸವಾಲು.
Optical Illusion: ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಚಿರತೆ ಎಲ್ಲೋ ಅಡಗಿದೆ. ಆದರೆ ಆ ಚಿರತೆಯನ್ನು ಹುಡುಕುವುದೇ ಸವಾಲು.
ಸಾಮಾಜಿಕ ಮಾಧ್ಯಮದ ಯುಗದಲ್ಲಿ, ಅನೇಕ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿವೆ. ಅಂತಹ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ, ಜನರು ಸವಾಲು ಹೊಡ್ಡುತ್ತಾರೆ, ಕೆಲವರು ಸುಲಭವಾಗಿ ಗುರುತಿಸಿದರೆ, ಇನ್ನೂ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಅಂತಹ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಚಿತ್ರದಲ್ಲಿ ಚಿರತೆ ಅಡಗಿದೆ. ಅದನ್ನು ಕಂಡುಹಿಡಿಯಬೇಕು ಎಂಬುದು ಜನರ ಮುಂದಿರುವ ಸವಾಲು.
ಸಿಂಹವನ್ನು ಹೋಲುವ ಕರುವಿಗೆ ಜನ್ಮ ನೀಡಿದ ಹಸು, ನೋಡಲು ನೆರೆದ ಜನಸಾಗರ, ವೈರಲ್ ವೀಡಿಯೋ
ಮಣ್ಣಿನ ರಾಶಿಯ ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಕೂಲಂಕುಷವಾಗಿ ನೋಡಿದರೂ ಎಲ್ಲಿಯೂ ಚಿರತೆ ಕಾಣಿಸುವುದಿಲ್ಲ. ಸದ್ಯ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಈ ಚಿತ್ರವನ್ನು ವನ್ಯಜೀವಿ ಛಾಯಾಗ್ರಾಹಕ ಹೇಮಂತ್ ದಾಬಿ ತೆಗೆದಿದ್ದಾರೆ.
ಈ ಚಿತ್ರವನ್ನು ಟ್ವಿಟರ್ ಹ್ಯಾಂಡಲ್ ಫೆಸಿನೇಟಿಂಗ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಅಡಗಿರುವ ಚಿರತೆಯನ್ನು ನೀವು ಗುರುತಿಸಬಹುದೇ?
ಈ ಫೋಟೋ ಇಲ್ಲಿಯವರೆಗೆ 8.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. 41.6 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ತಮ್ಮ ನಿರಂತರ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.
6 ಹೆಂಡತಿಯರ ಜೊತೆ ಮಲಗಲು 81 ಲಕ್ಷ ಖರ್ಚು ಮಾಡಿ 20 ಅಡಿ ಹಾಸಿಗೆ ಮಾಡಿಸಿದ ಭೂಪ! ವೈರಲ್ ಸುದ್ದಿ
ಒಬ್ಬ ಬಳಕೆದಾರ, “ಇದರಲ್ಲಿ ಚಿರತೆಯನ್ನು ಗುರುತಿಸಲು ನನಗೆ ಬಹಳ ಸಮಯ ಹಿಡಿಯಿತು” ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು “5 ನಿಮಿಷಗಳು ವ್ಯರ್ಥವಾಯಿತು.” ಎಂದರೆ ಇನ್ನೊಬ್ಬ ಬಳಕೆದಾರರು “ಇದು ನಿಜವಾಗಿಯೂ ಒಳ್ಳೆಯ ಸವಾಲು” ಎಂದು ಟ್ವಿಟರ್ ಪೋಸ್ಟ್ ನಲ್ಲಿ ಹಲವು ರೀತಿಯ ಕಾಮೆಂಟ್ ಗಳು ಬರೆದಿದ್ದಾರೆ.
There's a leopard in this photo by Hemant Dabi. Can you find it? pic.twitter.com/DvS5JGAYue
— Fascinating (@fasc1nate) April 26, 2023
ಗಮನಕೊಟ್ಟು ನೋಡಿದ ನಂತರವೂ, ಚಿತ್ರದಲ್ಲಿ ಈ ಚಿರತೆಯನ್ನು ನೀವು ನೋಡಲು ಸಾಧ್ಯವಾಗದಿದ್ದರೆ, ನಾವು ನಿಮ್ಮ ಸಮಸ್ಯೆಯನ್ನು ಸುಲಭಗೊಳಿಸುತ್ತಿದ್ದೇವೆ. ಈ ಟ್ವಿಟ್ಟರ್ ಪೋಸ್ಟ್‌ನ ಕೆಳಗೆ ಬಳಕೆದಾರರು ಚಿರತೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮಣ್ಣಿನ ರಾಶಿಯ ಮಧ್ಯದಲ್ಲಿ ಮಾಡಿದ ಗುಂಡಿಯಲ್ಲಿ ಚಿರತೆ ಮಲಗಿರುವುದು ಚಿತ್ರದಲ್ಲಿ ಕಾಣಿಸುತ್ತಿದೆ.
150 ವರ್ಷ ಹಳೆಯ ಚಿತ್ರದಲ್ಲಿ ಕಾಣುವ ಯುವತಿ ಕೈಯಲ್ಲಿ ಸ್ಮಾರ್ಟ್‌ಫೋನ್? ವೈರಲ್ ಪೇಂಟಿಂಗ್ ಸತ್ಯವೇನು?
It is not that easy to find the leopard in this Optical Illusion picture
Here it is so no other lives are wasted 😭 pic.twitter.com/8TIm9pHQRM
— Zak (@ZakSilverstein) April 26, 2023
Follow us On
Google News |