ಇನ್ಮುಂದೆ ಬಿಪಿಎಲ್ ಕಾರ್ಡ್ ಪಡೆಯೋಕೆ ಈ 6 ನಿಯಮಗಳನ್ನು ಪಾಲಿಸಲೇಬೇಕು! ಹೊಸ ರೂಲ್ಸ್

ಜನರು ಹೊಸದಾಗಿ ರೇಷನ್ ಕಾರ್ಡ್ (New Ration Card) ಮಾಡಿಸಿಕೊಳ್ಳುವುದಕ್ಕೆ ಕಾಯುತ್ತಿದ್ದಾರೆ. ಆದರೆ ಇನ್ನುಮುಂದೆ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಸರ್ಕಾರದ ಕೆಲವು ರೂಲ್ಸ್ ಗಳನ್ನು ಫಾಲೋ ಮಾಡಲೇಬೇಕು

BPL Ration Card : ಬಿಪಿಎಲ್ ಕಾರ್ಡ್ ಈಗ ನಮ್ಮ ಬಳಿ ಇರಬೇಕಾದ ಬಹಳ ಮುಖ್ಯವಾದ ಒಂದು ದಾಖಲೆ ಆಗಿದೆ ಎಂದರೆ ತಪ್ಪಲ್ಲ. ಅದರಲ್ಲೂ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಡುತ್ತಿರುವ ಗ್ಯಾರೆಂಟಿ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು.

ಹಾಗಾಗಿ ಜನರು ಹೊಸದಾಗಿ ರೇಷನ್ ಕಾರ್ಡ್ (New Ration Card) ಮಾಡಿಸಿಕೊಳ್ಳುವುದಕ್ಕೆ ಕಾಯುತ್ತಿದ್ದಾರೆ. ಆದರೆ ಇನ್ನುಮುಂದೆ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಸರ್ಕಾರದ ಕೆಲವು ರೂಲ್ಸ್ ಗಳನ್ನು ಫಾಲೋ ಮಾಡಲೇಬೇಕು..

ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ, ನಿಮ್ಮ ಅಕೌಂಟ್ ಗೆ ಬಂದಿದ್ಯಾ? ಈ ರೀತಿ ಚೆಕ್ ಮಾಡಿಕೊಳ್ಳಿ

Kannada News

ರೇಷನ್ ಕಾರ್ಡ್ ಪ್ರಯೋಜನಗಳು

ಬಿಪಿಎಲ್ ರೇಷನ್ ಕಾರ್ಡ್ ಹೊಂದುವುದರಿಂದ ಏನೆಲ್ಲಾ ಪ್ರಯೋಜನವಿದೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಉಚಿತವಾಗಿ ಪಡಿತರ ಪಡೆಯಬಹುದು, ಸರ್ಕಾರಿ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಔಷಧಿಯನ್ನು ಉಚಿತವಾಗಿ ಪಡೆಯಬಹುದು ಹಾಗೂ ಇನ್ನು ಹಲವು ಪ್ರಯೋಜನಗಳು ಬಿಪಿಎಲ್ ಕಾರ್ಡ್ ಇಂದ ಸಿಗಲಿದೆ.

ಇನ್ನು ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳದೇ ಇರುವಂಥವರು ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕಾಗಿ ಕಾಯುತ್ತಿದ್ದಾರೆ.

Ration Cardಇನ್ನು ಕೂಡ ಸರ್ಕಾರವು ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು ಮಾಡಿಲ್ಲ. ಪ್ರಸ್ತುತ ನಮ್ಮ ರಾಜ್ಯದಲ್ಲಿ 1 ಕೋಟಿಗಿಂತ ಹೆಚ್ಚಿನ ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್ ಇದೆ. ಅವುಗಳಲ್ಲಿ ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಗುರುತಿಸಿ ಅಂಥವರ ರೇಶನ್ ಕಾರ್ಡ್ ಗಳನ್ನು ರದ್ದು ಗೊಳಿಸಬೇಕು ಎಂದು ಸರ್ಕಾರ ತೀರ್ಮಾನ ಮಾಡಿದೆ.

ಈ ನಿಟ್ಟಿನಲ್ಲಿ ಸುಮಾರು 35 ಲಕ್ಷ ಬಿಪಿಎಲ್ ಕಾರ್ಡ್ ಗಳು ರದ್ದಾಗಬಹುದು ಎಂದು ಕೂಡ ಹೇಳಲಾಗುತ್ತಿದೆ. ಬಿಪಿಎಲ್ ಕಾರ್ಡ್ ಮೋಸ ಜಾಸ್ತಿ ಆಗುತ್ತಿರುವ ಕಾರಣ ಸರ್ಕಾರ ಈಗ ಸ್ಟ್ರಿಕ್ಟ್ ಆಗಿದೆ.

ನಕಲಿ ರೇಷನ್ ಕಾರ್ಡುಗಳಿಗೆ ಬ್ರೇಕ್! ಬಿಪಿಎಲ್ ರೇಷನ್ ಕಾರ್ಡ್ ಇರೋರಿಗೆ ಖಡಕ್ ವಾರ್ನಿಂಗ್

ಈಗಾಗಲೇ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವವರಿಗೆ ಸಹ ಇನ್ನು ಹೊಸ ರೇಷನ್ ಕಾರ್ಡ್ ವಿತರಣೆ ಆಗಿಲ್ಲ. ಅದರ ಬೆನ್ನಲ್ಲೇ ಈಗ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ ಸರ್ಕಾರ.

ಅದೇನು ಎಂದರೆ, ಮುಂದಿನ ಸಾರಿ ಹೊಸ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಶುರುವಾದಾಗ ಸರ್ಕಾರದ 6 ನಿಯಮಗಳನ್ನು ಎಲ್ಲರೂ ಕೂಡ ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದೇ ಹೋದರೆ ಅಂಥವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ. ಹಾಗಿದ್ದಲ್ಲಿ ಸರ್ಕಾರದ ನಿಯಮಗಳು ಯಾವುವು ಎಂದು ತಿಳಿಯೋಣ..

BPL Ration Cardಸರ್ಕಾರದ ಹೊಸ ನಿಯಮಗಳು

*ಯಾವ ವ್ಯಕ್ತಿಯ ಬಳಿ 3 ಹೆಕ್ಟರ್ ಗಿಂತ ಹೆಚ್ಚು ಸ್ವಂತ ಭೂಮಿ ಇರುತ್ತದೆಯೋ ಅಂಥವರಿಗೆ ಹಾಗೂ ಸಿಟಿ ಗಳಲ್ಲಿ 1000 ಅಡಿಗಿಂತ ಹೆಚ್ಚು ದೊಡ್ಡ ಮನೆ ಹೊಂದಿರುವವರಿಗೆ ರೇಶನ್ ಕಾರ್ಡ್ ಸಿಗೋದಿಲ್ಲ.

*ಸರ್ಕಾರದ ಕೆಲಸ ಇರುವ ಕುಟುಂಬಗಳಿಗೆ ಬಿಪಿಎಲ್ ರೇಶನ್ ಕಾರ್ಡ್ ಸಿಗೋದಿಲ್ಲ.

*ಯಾರೆಲ್ಲಾ ತೆರಿಗೆ ಪಾವತಿ ಮಾಡುತ್ತಿದ್ದಾರೋ ಅಂಥವರಿಗೆ ಕೂಡ ರೇಷನ್ ಕಾರ್ಡ್ ಸಿಗೋದಿಲ್ಲ.

*ವೈಟ್ ಬೋರ್ಡ್ ಖಾಸಗಿ ವಾಹನ ಹೊಂದಿರುವವರಿಗೆ ಕೂಡ ರೇಷನ್ ಕಾರ್ಡ್ ಸಿಗೋದಿಲ್ಲ..

*1.2 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇದ್ದರೆ ಅಂಥವರಿಗೆ ಹೊಸ ರೇಷನ್ ಕಾರ್ಡ್ ಸಿಗೋದಿಲ್ಲ.

ಇನ್ಮುಂದೆ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರಲ್ಲ! ಸರ್ಕಾರದಿಂದ ಹೊಸ ಅಪ್ಡೇಟ್

ಮಾಹಿತಿಯಲ್ಲಿ ಸತ್ಯವಿರಲಿ

ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕು ಎನ್ನುವ ಆಸೆಯಲ್ಲಿ ಸುಳ್ಳು ಮಾಹಿತಿಗಳನ್ನು, ಸುಳ್ಳು ದಾಖಲೆಗಳನ್ನು ಸರ್ಕಾರಕ್ಕೆ ನೀಡಿ ರೇಷನ್ ಕಾರ್ಡ್ ಪಡೆಯುವ ಪ್ರಯತ್ನ ಮಾಡಬೇಡಿ. ಆ ದಾಖಲೆಗಳು, ಮಾಹಿತಿಗಳು ಸುಳ್ಳು ಎಂದು ಸರ್ಕಾರಕ್ಕೆ ಗೊತ್ತಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ. ಹಾಗಾಗಿ ಸರ್ಕಾರಕ್ಕೆ ಮೋಸ ಮಾಡದೇ ಹುಷಾರಾಗಿರಿ.

From now on to get BPL card these 6 rules must be followed

Follow us On

FaceBook Google News