Loan Scheme : ರೈತರಿಗಾಗಿಯೇ (farmers) ಪ್ರಮುಖವಾಗಿ ಈ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ (Karnataka state government) ಜಾರಿಗೆ ತಂದಿದ್ದು, ಕೃಷಿ ಚಟುವಟಿಕೆಗಳಿಗಾಗಿ (agriculture activities) 5 ಲಕ್ಷಗಳ ವರೆಗೆ ಬಡ್ಡಿ ರಹಿತ ಸಾಲ (Subsidy Loan) ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಅರ್ಹ ರೈತರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬಹುದು. ಅಥವಾ ಸಾಲ ನೀಡುವ ಈ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ಈ ಸಾಲವನ್ನು ಯಾವ ಬ್ಯಾಂಕ್ ನಲ್ಲಿ ಪಡೆದುಕೊಳ್ಳಬಹುದು? ಯಾವೆಲ್ಲಾ ಕೃಷಿ ಚಟುವಟಿಕೆಗೆ ಸಾಲ ಸೌಲಭ್ಯ ದೊರೆಯುತ್ತದೆ? ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಪಿಯುಸಿ ಪಾಸಾಗಿರುವ ಹೆಣ್ಣುಮಕ್ಕಳಿಗೆ ಸಿಗುತ್ತೆ 2.50 ಲಕ್ಷ ವಿದ್ಯಾರ್ಥಿ ವೇತನ! ಅಪ್ಲೈ ಮಾಡಿ
ಡಿಸಿಸಿ ಬ್ಯಾಂಕ್ ಬಡ್ಡಿ ರಹಿತ ಸಾಲ (Loan in DCC Bank)
ಕುರಿ ಸಾಕಾಣಿಕೆ, ಹೈನುಗಾರಿಕೆ ಹಾಗೂ ಮತ್ತಿತರ ಕೃಷಿ ಚಟುವಟಿಕೆಗಳಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು (without interest loan till 5 lakhs) ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುತ್ತದೆ.
ಸದ್ಯ ಈ ಸಾಲವನ್ನು ನೀವು DCC ಬ್ಯಾಂಕ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಕೆಲವು ಸಾಲಗಳಿಗೆ ಬಡ್ಡಿ ಪಾವತಿಸುವ ಅಗತ್ಯವಿಲ್ಲ. ಇನ್ನು ಕೆಲವು ಸಾಲಗಳಿಗೆ 1% – 3%ಬಡ್ಡಿ ವಿಧಿಸಲಾಗುತ್ತದೆ.
ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಹೊಂದಿರಬಹುದು; ಮಿತಿಗಿಂತ ಹೆಚ್ಚಿದ್ದರೆ ಏನಾಗುತ್ತೆ?
ಬಡ್ಡಿ ರಹಿತ ಸಾಲ ಪಡೆದುಕೊಳ್ಳುವುದು ಹೇಗೆ? (How to get loan)
ನೀವು ಡಿಸಿಸಿ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ನಿಮ್ಮ ಭೂಮಿಯ ದಾಖಲೆ, ಪಹಣಿ ಪತ್ರ, ಆಧಾರ್ ಕಾರ್ಡ್ ಮೊದಲಾದ ದಾಖಲೆಗಳನ್ನು ನೀಡಿ ಬಡ್ಡಿ ರಹಿತ ಸಾಲ ಪಡೆದುಕೊಳ್ಳಬಹುದು.
ಬೇರೆ ಬೇರೆ ಕೃಷಿ ಚಟುವಟಿಕೆಗಳಿಗೆ ಬೇರೆ ಬೇರೆ ರೀತಿಯಾದಂತಹ ಸಾಲ ಸೌಲಭ್ಯ ಸಿಗುತ್ತದೆ. ಇನ್ನು ಕೆಲವು ಸಾಲಗಳನ್ನು (Bank Loan), ಉದಾಹರಣೆಗೆ ಬೆಳೆ ಸಾಲ ತೆಗೆದುಕೊಂಡರೆ ಪ್ರತಿ ವರ್ಷ ರಿನಿವಲ್ ಮಾಡಿಕೊಳ್ಳಬಹುದು.
ಅಂದರೆ ನೀವು ಒಮ್ಮೆ ಪಾವತಿ ಮಾಡಿದರೆ ಕೆಲವೇ ದಿನಗಳಲ್ಲಿ ಆ ಹಣ ನಿಮಗೆ ಹಿಂತಿರುಗಿ ಕೊಡಲಾಗುತ್ತದೆ. ಅದನ್ನ ಮತ್ತೆ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ನೀವು ಎಷ್ಟು ಸರಿಯಾಗಿ ಪಾವತಿ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಈ ಸಾಲದ ಮೊತ್ತವು ಕೂಡ ಜಾಸ್ತಿ ಮಾಡಲಾಗುವುದು.
ಕೋಳಿ ಫಾರ್ಮ್ ಮಾಡೋಕೆ ಬೇಕಿರುವ ಪರವಾನಿಗೆ ಹಾಗೂ ಸರ್ಕಾರದ ಸಹಾಯಧನ ಮಾಹಿತಿ
ಫ್ರೂಟ್ಸ್ ಐಡಿ ಕಡ್ಡಾಯ! (FID)
ಡಿಸಿಸಿ ಬ್ಯಾಂಕಿನಲ್ಲಿ ನೀಡಲಾಗುವ ಬಡ್ಡಿ ರಹಿತ ಸಾಲ ಹಾಗೂ ಕಡಿಮೆ ಬಡ್ಡಿ ದರದ ಸಾಲ ಪಡೆದುಕೊಳ್ಳಲು ರೈತರು ಫ್ರೂಟ್ಸ್ ಐಡಿ (FID ) ಹೊಂದಿರುವುದು ಕಡ್ಡಾಯ. ಒಂದು ವೇಳೆ ಈ ಐಡಿ ನಿಮ್ಮ ಬಳಿ ಇಲ್ಲದೆ ಇದ್ದರೆ ತಕ್ಷಣವೇ ಮಾಡಿಕೊಳ್ಳಿ.
ಫ್ರೂಟ್ಸ್ ಐಡಿ ಇಲ್ಲದೆ ಇರುವ ರೈತರಿಗೆ ಸರಕಾರದ ಯಾವ ಯೋಜನೆಯ ಅಥವಾ ಸಾಲದ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಎರಡನೆಯದಾಗಿ ರೈತರು ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಮುಖ್ಯವಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ (bank account Aadhaar Card link) ಆಗಿರಬೇಕು. ಕೆ ವೈ ಸಿ (EKYC) ಆಗದೆ ಇರುವ ರೈತರ ಖಾತೆಗೆ (Bank Account) ಹಣ ಜಮಾ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಡಿಸಿಸಿ ಬ್ಯಾಂಕ್ ಸಂಪರ್ಕಿಸಬಹುದು.
ಮನೆ ಇಲ್ಲದವರಿಗೆ ಸ್ವಂತ ಮನೆ ಕಟ್ಟಲು ಸರ್ಕಾರದಿಂದ 1.5 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ
5 lakh Subsidy loan for agricultural Activities, scheme of government
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.