ಮಾರುಕಟ್ಟೆಗೆ ಬಂತು 90ರ ದಶಕದ ರೆಟ್ರೋ ಲುಕ್ ಇರೋ ಎಲೆಕ್ಟ್ರಿಕ್ ಸ್ಕೂಟರ್! ಅದೂ ಕಡಿಮೆ ಬೆಲೆಗೆ

Electric Scooter : ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಮಾದರಿಗೆ ಅವೆರಾ ರೆಟ್ರೋಸಾ ಎಲೆಕ್ಟ್ರಿಕ್ ಸ್ಕೂಟರ್ (Avera Retrosa) ಎಂದು ಹೆಸರಿಸಲಾಗಿದೆ.

Avera Retrosa Electric Scooter : ಭಾರತದಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇನ್ನೊಂದು ಟ್ರೆಂಡ್ ಕೂಡ ಆರಂಭವಾಗಿದೆ, ಅದೆನೆಂದರೆ ಹಳೆಯ ಮಾದರಿಯ ವಿಂಟೇಜ್ ಸ್ಟೈಲ್ ಗಳಲ್ಲಿ ಅನೇಕ ಬೈಕ್ ಗಳನ್ನೂ ಮಾರುಕಟ್ಟೆಗೆ ತರುತ್ತಿದೆ. ಹಳೆಯ ಮಾದರಿಯ ರೆಟ್ರೋ ಲುಕ್ ಕೊಡುತ್ತಿರುವ ಈ ವಿನ್ಯಾಸದ ಬೈಕುಗಳು (Bikes) ಈಗಾಗಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಇದೀಗ ಇದೆ ಟ್ರೆಂಡ್ ಅರಿತುಕೊಂಡಿರುವ ಕಂಪನಿಯೊಂದು 90 ರ ದಶಕದ ಅನುಭವವನ್ನು ಹೊಂದಲು ಬಯಸುವ ಜನರಿಗಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಮಾದರಿಗೆ ಅವೆರಾ ರೆಟ್ರೋಸಾ ಎಲೆಕ್ಟ್ರಿಕ್ ಸ್ಕೂಟರ್ (Avera Retrosa) ಎಂದು ಹೆಸರಿಸಲಾಗಿದೆ.

80Km ಮೈಲೇಜ್ ರೇಂಜ್ ನೀಡುವ ಸ್ಟೈಲಿಶ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಅಗ್ಗದ ಬೆಲೆಗೆ ಮಾರಾಟ

Kannada News

ಸಂಪೂರ್ಣವಾಗಿ 3.9kwh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವ ಈ ಬೈಕ್ ಒಂದೇ ಚಾರ್ಜ್‌ನಲ್ಲಿ 152 ಕಿಲೋಮೀಟರ್‌ಗಳಿಗಿಂತ ಹೆಚ್ಚು ಶ್ರೇಣಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಹಳೆಯ-ಶೈಲಿಯ ಎಲೆಕ್ಟ್ರಿಕ್ ಸ್ಕೂಟರ್‌ನಂತೆ ಕಾಣುತ್ತಿದ್ದರೂ ಅತ್ಯಂತ ಪವರ್ ಫುಲ್ ಆಗಿದೆ . ಏಕೆಂದರೆ ಈ ಸ್ಕೂಟರ್ ನಲ್ಲಿ BLDC ತಂತ್ರಜ್ಞಾನದೊಂದಿಗೆ 4800 ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಫಿಟ್ ಮಾಡಲಾಗಿದೆ. ಇನ್ನು ಇದೇ ಮೋಟಾರ್‌ನಿಂದಾಗಿ, ಸ್ಕೂಟರ್ 90km/hr ಗರಿಷ್ಠ ವೇಗವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಸಾಮಾನ್ಯವಾಗಿ ಬ್ರೇಕಿಂಗ್ ವಿಷಯಕ್ಕೆ ಬಂದಾಗ ಹಲವಾರು ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಮುಂಭಾಗದಲ್ಲಿ ಡಿಸ್ಕ್ ಹಾಗು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇರುತ್ತದೆ ಆದರೆ ಈ ರೆಟ್ರೋ ಸ್ಕೂಟರ್ ನಲ್ಲಿ ಎರಡು ಬದಿಯಲ್ಲಿ ಡಿಸ್ಕ್ ಬ್ರೇಕ್ ನೀಡಲಾಗಿದೆ.

120Km ರೇಂಜ್ ನೀಡಲಿರುವ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಗೆ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್

Avera Retrosa Electric Scooterಹೀಗಾಗಿ ಈ ಬೈಕ್ ಮಾರುಕಟ್ಟೆಯಲ್ಲಿ ಬ್ರೇಕಿಂಗ್ ವಿಷಯಕ್ಕೆ ಹೆಚ್ಚಿನ ಸದ್ದು ಮಾಡಲಿದೆ ಎಂದರೆ ತಪ್ಪಾಗಲಾರದು. ಇನ್ನು ಕೇವಲ ₹ 86,800 ಎಕ್ಸ್ ಶೋ ರೂಂ ಬೆಲೆಯಲ್ಲಿ ಈ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇನ್ನು EMI ಮೂಲಕ ನೀವು ಖರೀದಿಸುವುದಾದರೆ ಷೋ ರಮ್ ಮೂಲಕವೇ ಕಡಿಮೆ ಕಂತಿನಲ್ಲಿ ಈ ಸ್ಕೂಟರ್ ನಿಮಗೆ ಸಿಗಲಿದೆ.

ಪ್ರಸ್ತುತ ಭರ್ಜರಿ ಮೈಲೇಜ್ ನೀಡುವ ಭಾರತದ ಟಾಪ್ 5 ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಲಿಸ್ಟ್ ಇಲ್ಲಿದೆ!

ಈ ಸ್ಕೂಟರ್ ನ ಕೆಲ ಫೀಚರ್ ಗಳನ್ನ ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿಕೊಳ್ಳಿ

Key Specifications of Avera Retrosa

Range 90 km/charge
Charging Time 3-4 hours
Battery Capacity 2.4 kwh
Max Speed 90 kmph
Instrumentation Digital

An electric scooter with a 90s look has hit the market

Follow us On

FaceBook Google News