ಇತ್ತೀಚಿನ ದಿನಮಾನಗಳಲ್ಲಿ ಆನ್ಲೈನ್ ಪ್ಲಾಟ್ಫಾರ್ಮ್ ಸೌಲಭ್ಯವನ್ನು ಉಪಯೋಗಿಸಿಕೊಂಡು ವಂಚಕರು ನಮ್ಮ ಬ್ಯಾಂಕ್ ಖಾತೆಗೆ (Bank Account) ಪ್ರವೇಶ ಪಡೆದು ಅದರಲ್ಲಿರುವಂತಹ ಹಣವನ್ನೆಲ್ಲ ಲೂಟಿ ಮಾಡುವ ವಂಚನೆ ನಡೆಸುತ್ತಿದ್ದಾರೆ.

ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ 50 ಕೋಟಿಗೂ ಅಧಿಕ ಗ್ರಾಹಕರಿಗೆ, ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡುವುದರ ಜೊತೆಗೆ ನಮ್ಮ ಖಾತೆಯಲ್ಲಿ ಇರುವಂತಹ ಹಣ ವಂಚನೆಗೆ ಒಳಗಾದರೆ ಅದಕ್ಕೆ ಎಸ್ ಬಿ ಐ ಜವಾಬ್ದಾರಿಯಲ್ಲ ಎಂಬ ಮಾಹಿತಿಯನ್ನು ಸ್ಪಷ್ಟೀಕರಿಸಿದೆ.

ಇಂತಹ ಎಲ್ಲಾ ಮಹಿಳೆಯರಿಗೆ ಸಿಗಲಿದೆ ₹11,000 ರೂಪಾಯಿ! ಕೇಂದ್ರದಿಂದ ಹೊಸ ಯೋಜನೆ ಜಾರಿ

ಇಂತಹ ನಕಲಿ ಸಂದೇಶಗಳಿಂದ ಜಾಗರುಕರಾಗಿರಿ!

ಇತ್ತೀಚಿನ ದಿನಮಾನಗಳಲ್ಲಿ ಆನ್ಲೈನ್ ವಂಚನೆಗಳು ಹೆಚ್ಚಾಗಿ ನಡೆಯುತ್ತಿರುವ ಕಾರಣ, ಸಾಕಷ್ಟು ಅಮಾಯಕರು ಮೋಸಕ್ಕೆ ಒಳಗಾಗಿ ತಮ್ಮ ಬಳಿ ಇದ್ದಂತಹ ಹಣವನ್ನೆಲ್ಲ ಫ್ರಾಡ್ ನಿಂದ ಕಳೆದುಕೊಳ್ಳುತ್ತಿದ್ದಾರೆ.

ಅದರಲ್ಲೂ ಮುಖ್ಯವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಸ್ಬಿಐನ ಖಾತೆಯನ್ನು ಸಂಪೂರ್ಣವಾಗಿ ಮುಚ್ಚುವಂತೆ ಬೆದರಿಕೆಯ ಸಂದೇಶಗಳನ್ನು ಕಳಿಸಲಾಗುತ್ತಿದೆ ಹಾಗೂ ಬ್ಯಾಂಕ್ ಸಿಬ್ಬಂದಿಗಳೆಂದು ಸುಳ್ಳು ಹೇಳಿ SBI ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುವ ಕೆಲಸವನ್ನು ಸೈಬರ್ ಅಪರಾಧಿಗಳು ಮಾಡಲು ಮುಂದಾಗಿದ್ದಾರೆ, ಹೀಗಾಗಿ ಇಂತಹ ಮೆಸೇಜ್ಗಳಿಗೆ ಸ್ಪಂದಿಸದಿರಿ ಇದೆಲ್ಲವೂ ಸಂಪೂರ್ಣ ನಕಲಿ ಸಂದೇಶ ಎಂಬ ಎಚ್ಚರಿಕೆಯನ್ನು ನೀಡಿದೆ.

YONO ಖಾತೆಯನ್ನು ಮುಚ್ಚಲಾಗುವ ನಕಲಿ ಸಂದೇಶ ರವಾನೆ!

YONO ಖಾತೆಯನ್ನು ಹೊಂದಿರುವ ಅನೇಕ ಗ್ರಾಹಕರ ಅಕೌಂಟನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗುವುದು, ಅದನ್ನು ಮರು ಸಕ್ರಿಯಗೊಳಿಸುವ ಸಲುವಾಗಿ ನಿಮ್ಮ ಪಾನ್ ಕಾರ್ಡ್ ಹಾಗೂ ಅದರ ಸಂಪೂರ್ಣ ವಿವರವನ್ನು ಕಳಿಸಿಕೊಡಿ ಎಂಬ ಸಂದೇಶವನ್ನು ಪಡೆಯುತ್ತಿದ್ದಾರೆ.

ಇದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿಕ್ರಿಯಿಸಿದ್ದು ಇಂತಹ ಯಾವುದೇ ಸಂದೇಶಗಳನ್ನು ಅಥವಾ ಕರೆಗಳನ್ನು ಬ್ಯಾಂಕಿನ ಸಿಬ್ಬಂದಿಗಳಾಗಲಿ ಅಥವಾ ಬ್ಯಾಂಕಿಗೆ ಸಂಬಂಧ ಪಟ್ಟ ಅಧಿಕಾರಿಗಳಾಗಲಿ ಕಳುಹಿಸುವುದಿಲ್ಲ ಇದೆಲ್ಲವೂ ವಂಚನೆಯ ಸಂದೇಶಗಳಾಗಿರುತ್ತದೆ. ಹೀಗಾಗಿ ಇಂತಹ ಮೆಸೇಜ್ ಅಥವಾ ಕರೆಗಳಿಗೆ ಸ್ಪಂದಿಸದಿರಿ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಫೋನ್‌ಪೇ ಬಳಕೆದಾರರಿಗೆ ಭರ್ಜರಿ ಸುದ್ದಿ! ಒಂದೇ ನಿಮಿಷದಲ್ಲಿ ಸಿಗಲಿದೆ 1 ಲಕ್ಷದವರೆಗೂ ಲೋನ್

State Bank Of Indiaವೈಯಕ್ತಿಕ ಮಾಹಿತಿ ನೀಡಿದ್ರೆ ಖಾತೆಯಲ್ಲಿರುವ ಮೊತ್ತ ಶೂನ್ಯವಾಗಲಿದೆ!

ಸೈಬರ್ ಅಪರಾಧಿಗಳು ನಕಲಿ ಸಂದೇಶ ಅಥವಾ ಕರೆಗಳನ್ನು ಮಾಡುವ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಖಾತೆಗೆ ಪ್ರವೇಶ ಪಡೆಯುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಇಮೇಲ್ ಅಥವಾ ಎಸ್ಎಂಎಸ್ ಮೂಲಕ ಬ್ಯಾಂಕಿನ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಗ್ರಾಹಕರಿಗೆ ಎಸ್.ಬಿ.ಐ ಸಲಹೆ ನೀಡಿದೆ.

ಜೊತೆಗೆ ಯಾರೊಂದಿಗೂ ಸೂಕ್ಷ್ಮವಾದ ಮಾಹಿತಿಗಳಾದ ಪಾಸ್ವರ್ಡ್ ಅಕೌಂಟ್ ನಂಬರ್ ಅಥವಾ ಇನ್ನಿತರ ಬ್ಯಾಂಕಿನ ಕುರಿತಾದ ವಿವರಗಳನ್ನು ಹಂಚಿಕೊಳ್ಳಬೇಡಿ ಎಂದಿದ್ದಾರೆ.

60 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ, ಪಿಂಚಣಿ ನಿಯಮದಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಮಾಹಿತಿ

ನಿಮ್ಮ ನಂಬರ್ ಗೆ ಅನುಮಾನದಾಸ್ಪದ ಕರೆ ಅಥವಾ ಸಂದೇಶಗಳು ಬಂದರೆ ಕೂಡಲೇ ಈ ಕೆಲಸ ಮಾಡಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮೊಬೈಲ್ ನಂಬರ್ ಗು ಸಾಕಷ್ಟು ಸ್ಪಾಮ್ ಮೆಸೇಜುಗಳು ಅಥವಾ ನಕಲಿ ಕರೆಗಳು ರವಾನೆಯಾಗುತ್ತಿರುತ್ತದೆ. ಇಂತಹ ಅನುಮಾನಾಸ್ಪದ ಸಂದೇಶಗಳನ್ನು ತಕ್ಷಣ report.phishing@sbi.co.in ಗೆ ವರದಿ ಮಾಡಿ, ಇಲ್ಲವಾದರೆ ಬಹು ದೊಡ್ಡ ಮಟ್ಟದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂಬ ಮುನ್ಸೂಚನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಗ್ರಾಹಕರಿಗೆ ವಂಚನೆಯಿಂದ ರಕ್ಷಿಸಿಕೊಳ್ಳಲು ತಿಳಿಸಿದೆ.

Big alert from State Bank to its 50 crore customers