50 ಲಕ್ಷ ಗೃಹ ಸಾಲ ಪಡೆದುಕೊಂಡ್ರೆ ಪ್ರತಿ ತಿಂಗಳು ಎಷ್ಟು EMI ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ

Home Loan EMI : ಈ ಬ್ಯಾಂಕ್ ನಲ್ಲಿ 50 ಲಕ್ಷ ರೂಪಾಯಿ ಗೃಹ ಸಾಲಕ್ಕೆ ಪಾವತಿ ಮಾಡಬೇಕಾದ ಇಎಂಐ ಕಡಿಮೆ; ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್!

Home Loan EMI : ಮನೆ ನಿರ್ಮಾಣ ಮಾಡಿಕೊಳ್ಳುವ ಕನಸು ಎಲ್ಲರಿಗೂ ಇರುತ್ತೆ. ಆದರೆ ಮನೆ ನಿರ್ಮಾಣ ಮಾಡಲು ಬೇಕಾಗುವಷ್ಟು ಹಣ ಒದಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ.. ಇದಕ್ಕಾಗಿ ಸುಮಾರು 80 ರಿಂದ 85% ನಷ್ಟು ಜನ ಗೃಹ ಸಾಲವನ್ನು (Home Loan) ಪಡೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಬೇಕಾಗುತ್ತದೆ.

ಆದರೆ ಹೀಗೆ ಮನೆ ಕಟ್ಟಿಕೊಳ್ಳುವುದಕ್ಕೆ ಸಾಲ ಮಾಡುವವರಿಗೆ ಗೃಹ ಸಾಲಕ್ಕೆ ನಿಜಕ್ಕೂ ಎಷ್ಟು ಬಡ್ಡಿ ಇರುತ್ತದೆ ಅದಕ್ಕೆ ನಾವು ಎಷ್ಟು ಇಎಂಐ ಪಾವತಿ ಮಾಡಬೇಕು ಎಷ್ಟು ವರ್ಷದ ಅವಧಿಗೆ ಗೃಹ ಸಾಲ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಕಲ್ಪನೆ ಇರುವುದಿಲ್ಲ.

ಇಂದಿನ ಲೇಖನದಲ್ಲಿ ನಾವು ಬ್ಯಾಂಕ್ ಆಫ್ ಬರೋಡದಲ್ಲಿ (Bank Of Baroda) 50 ಲಕ್ಷ ರೂಪಾಯಿಗಳ ಗೃಹ ಸಾಲ (Home Loan) ತೆಗೆದುಕೊಂಡರೆ ಎಷ್ಟು ಇಎಂಐ ಪಾವತಿಸಬೇಕಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನೋಡೋಣ.

ಫೋನ್‌ಪೇ, ಗೂಗಲ್ ಪೇ ಅಪ್ಲಿಕೇಶನ್ ಬಳಕೆದಾರರಿಗೆ ಬೆಳ್ಳಂಬೆಳಗ್ಗೆ ಭರ್ಜರಿ ಸುದ್ದಿ!

ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡ (Bank of Baroda) ದಲ್ಲಿ ನೀವು ಸುಲಭವಾಗಿ 50 ಲಕ್ಷ ರೂಪಾಯಿಗಳ ವರೆಗೂ ಗೃಹ ಸಾಲ (home loan) ವನ್ನು ಪಡೆದುಕೊಳ್ಳಬಹುದು.

ಗೃಹ ಸಾಲಕ್ಕೆ ಪ್ರತಿ ತಿಂಗಳು ಎಷ್ಟು ಇಎಂಐ (EMI) ಪಾವತಿಸಬೇಕು ಎಂದು ತಿಳಿದುಕೊಳ್ಳುವುದಕ್ಕೂ ಮೊದಲು ಇದಕ್ಕೆ ಇರುವ ಬಡ್ಡಿದರ ಎಷ್ಟು ಎಂಬುದನ್ನು ನೋಡಬೇಕು, ಯಾಕಂದ್ರೆ ಬಡ್ಡಿ ದರವನ್ನ ಅವಲಂಬಿಸಿ ನಿಮ್ಮ ಈಎಂಐ ಪಾವತಿ ಮಾಡಬೇಕಾಗುತ್ತದೆ.

ಬ್ಯಾಂಕ್ ಆಫ್ ಬರೋಡದ ಗೃಹ ಸಾಲದ ಮೇಲಿನ ಬಡ್ಡಿದರ ಎಷ್ಟು?

ಗೃಹ ಸಾಲಕ್ಕೆ ಮುಖ್ಯವಾಗಿ ಬೇಕಾಗಿರುವುದು ಕ್ರೆಡಿಟ್ ಸ್ಕೋರ್ (Credit Score). ನಿಮ್ಮ ಕ್ರೆಡಿಟ್ ಸ್ಕೋರ್ (credit score) 700 ರಿಂದ 850.7 ನಡುವೆ ಇದ್ದರೆ ಕೇವಲ 8.40% ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಗೃಹ ಸಾಲವನ್ನು 20 ವರ್ಷಗಳ ಅವಧಿಗೆ ತೆಗೆದುಕೊಂಡರೆ ಪ್ರತಿ ತಿಂಗಳು ಎಷ್ಟು ಇಎಂಐ ಪಾವತಿಸಬೇಕು ಎಂಬುದನ್ನು ನೋಡೋಣ.

ಗಂಡ ಹೆಂಡತಿ ಇಬ್ಬರಿಗೂ 10,000 ಸಿಗುವ ಪೋಸ್ಟ್ ಆಫೀಸ್ ಯೋಜನೆ ಇದು! ಅರ್ಜಿ ಸಲ್ಲಿಸಿ

Home Loan20 ವರ್ಷಗಳಿಗೆ ಪಾವತಿ ಮಾಡಬೇಕಾದ ತಿಂಗಳ EMI ದರ!

ನೀವು 20 ವರ್ಷಗಳ ಅವಧಿಗೆ 50 ಲಕ್ಷ ರೂಪಾಯಿಗಳನ್ನು 8.40% ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡಿದ್ದೀರಿ ಎಂದು ಭಾವಿಸೋಣ. ಆಗ ಪ್ರತಿ ತಿಂಗಳು ಪಾವತಿ ಮಾಡಬೇಕಾದ ಮೊತ್ತ 43,075. ಇಲ್ಲಿ ನೀವು ಪಾವತಿಸಬೇಕಾದ ಬಡ್ಡಿ ಮೊತ್ತ ರೂ.53,38,054. ಅಂದರೆ 20 ವರ್ಷಗಳ ಅವಧಿಗೆ ಪಾವತಿಸಬೇಕಾದ ಒಟ್ಟು ಬಡ್ಡಿ ಮತ್ತು ಅಸಲು ರೂ. 1,03,38,054.

ಈ ಯೋಜನೆಯಲ್ಲಿ ನೀವು 3 ಲಕ್ಷ ಹಣ ಇಟ್ರೆ 6 ಲಕ್ಷ ರೂಪಾಯಿ ನಿಮ್ಮ ಕೈ ಸೇರಲಿದೆ

ಇನ್ನು ನೀವು ಯಾವುದೇ ಬ್ಯಾಂಕಿನಲ್ಲಿ ಗೃಹ ಸಾಲವನ್ನು ತೆಗೆದುಕೊಂಡರು, ಬಡ್ಡಿ ದರದ ಜೊತೆಗೆ ಸಂಸ್ಕರಣ ಶುಲ್ಕ (processing fee) ಹಾಗೂ ಇತರ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಬ್ಯಾಂಕ್ ಆಫ್ ಬರೋಡ ಸದ್ಯ 0.50% ಅನ್ನು ಸಂಸ್ಕರಣಾ ಶುಲ್ಕವಾಗಿ ವಿಧಿಸುತ್ತದೆ.

How much EMI should be paid every month if taking a 50 lakh home loan

Follow us On

FaceBook Google News