ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 20,000 ರೂಪಾಯಿ! ಮುಗಿಬಿದ್ದ ಜನ

Post Office Scheme : ಈ ಯೋಜನೆಯಲ್ಲಿ ಪ್ರತಿ ತಿಂಗಳು ₹1000 ಕಡಿಮೆ ಹೂಡಿಕೆ ಮಾಡುವ ಮೂಲಕ ನೀವು ಸಹ ಸೀನಿಯರ್ ಸಿಟಿಜನ್ ಎಡ್.ಡಿ ಸ್ಕೀಮ್ (Post Office Fixed Deposit) ಶುರು ಮಾಡಬಹುದು.

Post Office Scheme : ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮೊತ್ತವನ್ನು ಈಗಿನಿಂದಲೇ ಹೂಡಿಕೆ ಮಾಡಿಕೊಂಡು ಬರುವುದರಿಂದ ಮುಂದೆ ನಮ್ಮ ಜೀವನ ಬಹಳ ಚೆನ್ನಾಗಿರುತ್ತದೆ. ವಯಸ್ಸಾದ ಕಾಲದಲ್ಲಿ ಕಷ್ಟಪಡಬಾರದು ಎಂದರೆ ನಾವು ಈಗಿನಿಂದಲೇ ಹಣ ಉಳಿತಾಯ ಮಾಡಬೇಕು.

ಹೀಗೆ ಹಣವನ್ನು ಉಳಿತಾಯ ಮಾಡುವುದಕ್ಕೆ ಪೋಸ್ಟ್ ಆಫೀಸ್ ಉತ್ತಮ ಆಯ್ಕೆ ಆಗಿದೆ. ಇಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಹಾಗೆಯೇ ಕಡಿಮೆ ಮೊತ್ತದಲ್ಲಿ ಹೂಡಿಕೆ ಶುರು ಮಾಡಬಹುದು.

ಈ ಯೋಜನೆಯಲ್ಲಿ 25 ವರ್ಷ ಕರೆಂಟ್ ಬಿಲ್ ಕಟ್ಟೋ ತಾಪತ್ರಯ ಇಲ್ಲ! ಈ ರೀತಿ ಅರ್ಜಿ ಸಲ್ಲಿಸಿ

Kannada News

ಎಲ್ಲರಿಗೂ ಹೊಂದುವಂಥ ಯೋಜನೆ

ಪೋಸ್ಟ್ ಆಫೀಸ್ ನಲ್ಲಿ ನಿಮಗೆ ಸರಿ ಹೊಂದುವಂಥ ಹಲವು ಯೋಜನೆಯ ಆಯ್ಕೆಗಳಿವೆ. ಇಲ್ಲಿ ನೀವು ಅತೀ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಒಳ್ಳೆಯ ರಿಟರ್ನ್ಸ್ ಪಡೆಯುವ ಅವಕಾಶ ಕೂಡ ಹೆಚ್ಚಾಗಿದೆ.

ಪೋಸ್ಟ್ ಆಫೀಸ್ ಬಡವರಿಂದ ಹಿಡಿದು ಶ್ರೀಮಂತರ ವರೆಗೆ ಎಲ್ಲರೂ ಹೂಡಿಕೆ ಮಾಡುವುದಕ್ಕೆ ಉತ್ತಮ ಆಯ್ಕೆ. ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಒಂದು ಹೂಡಿಕೆಯ ಪ್ಲಾನ್ ಇಂದ ನೀವು ₹20000 ವರೆಗು ಲಾಭ ಪಡೆಯಬಹುದು. ಆ ಯೋಜನೆಯ ಬಗ್ಗೆ ಇಂದು ಪೂರ್ತಿಯಾಗಿ ತಿಳಿಯೋಣ..

Senior Citizens FD Scheme

ಪೋಸ್ಟ್ ಆಫೀಸ್ ನಲ್ಲಿ ಎಲ್ಲಾ ವಯಸ್ಸಿನವರಿಗೆ ಅನುಗುಣವಾಗಿ ಉಳಿತಾಯದ ಸ್ಕೀಮ್ ಗಳನ್ನು ನೋಡಬಹುದು. ಅಂಥದ್ದೇ ಒಂದು ಸ್ಕೀಮ್ ಸೀನಿಯರ್ ಸಿಟಿಜನ್ ಎಫ್.ಡಿ ಸ್ಕೀಮ್ (FD Scheme) ಆಗಿದೆ. ಈ ಒಂದು ಯೋಜನೆಯು ವಿಶೇಷವಾಗಿ ಹಿರಿಯ ನಾಗರೀಕರಿಗೋಸ್ಕರ ಜಾರಿಗೆ ತಂದಿರುವ ಯೋಜನೆ ಆಗಿದ್ದು, ಬ್ಯಾಂಕ್ ಗಳಲ್ಲಿ ನೀವು Fixed Deposit ಮಾಡಿದರೆ ಎಷ್ಟು ಬಡ್ಡಿ ಸಿಗುತ್ತದೆಯೋ ಅದಕ್ಕಿಂತಲೂ ಹೆಚ್ಚಿನ ಬಡ್ಡಿ ಈ ಯೋಜನೆಯ ಮೂಲಕ ಸಿಗುತ್ತದೆ ಎಂದು ಹೇಳಿದರೆ ಖಂಡಿತ ತಪ್ಪಾಗುವುದಿಲ್ಲ.

ಅಪ್ಡೇಟ್ ಮಾಡದಿದ್ರೆ ಆಧಾರ್ ಕಾರ್ಡ್ ಕ್ಯಾನ್ಸಲ್ ಆಗಲಿದೆಯೇ? ಇಲ್ಲಿದೆ ಪ್ರಮುಖ ಮಾಹಿತಿ

Post Office Scheme2024ರ ಆರಂಭದಲ್ಲಿ ಈ ಯೋಜನೆಗೆ ಬರುವ ಬಡ್ಡಿದರವನ್ನು 8.2% ಗೆ ಏರಿಸಲಾಗಿದೆ. ಹಾಗಾಗಿ ಇದು ಒಳ್ಳೆಯ ರಿಟರ್ನ್ಸ್ ಕೊಡುವ ಯೋಜನೆ ಆಗಿದ್ದು, ಇಲ್ಲಿ ನೀವು ಪ್ರತಿ ತಿಂಗಳು ₹20,000 ಪಡೆಯುವಂಥ ಪ್ಲಾನ್ ಗಳಿವೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ₹1000 ಕಡಿಮೆ ಹೂಡಿಕೆ ಮಾಡುವ ಮೂಲಕ ನೀವು ಸಹ ಸೀನಿಯರ್ ಸಿಟಿಜನ್ ಎಡ್.ಡಿ ಸ್ಕೀಮ್ (Post Office Fixed Deposit) ಶುರು ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಗರಿಷ್ಠ ಮಿತಿಯನ್ನು ₹30 ಲಕ್ಷಕ್ಕೆ ಇಡಲಾಗಿದೆ.

ಒಂದು ಲಕ್ಷದ ಗಡಿಯಲ್ಲಿ ಬೆಳ್ಳಿ ಬೆಲೆ, ಕಡಿಮೆಯಾಗದ ಚಿನ್ನದ ಬೆಲೆ! ಇಲ್ಲಿದೆ ಇತ್ತೀಚಿನ ದರಗಳ ವಿವರ

ಪ್ರತಿ ತಿಂಗಳು ಪಡೆಯಿರಿ ₹20000

ಹೌದು, ಈ ಯೋಜನೆಯಲ್ಲಿ ಹೂಡಿಕೆ ಶುರು ಮಾಡಲು ಕನಿಷ್ಠ ಮೊತ್ತ ₹1000 ಆಗಿದ್ದು ಗರಿಷ್ಠ ಮೊತ್ತ ₹30 ಲಕ್ಷ ಆಗಿದೆ. ಇಲ್ಲಿ ನೀವು 30 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿಮಗೆ ಸಿಗುವ 8.2% ಬಡ್ಡಿದರದ ಪ್ರಕಾರ ಲೆಕ್ಕ ಹಾಕಿದರೆ ಈ ಮೊತ್ತಕ್ಕೆ ವಾರ್ಷಿಕ ಆದಾಯ 2.46 ಲಕ್ಷ ರೂಪಾಯಿ ಆಗಿರುತ್ತದೆ.

ಇದರ ಅರ್ಥ ಪ್ರತಿ ತಿಂಗಳು ನೀವು ₹20,000 ರೂಪಾಯಿಗಳ ಆದಾಯವನ್ನು ಬಡ್ಡಿ ರೂಪದಲ್ಲಿ ಪಡೆಯಬಹುದು. ತಡಮಾಡದೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು.

In this post office Scheme, you will Get 20,000 rupees per month

Follow us On

FaceBook Google News