ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (fixed deposit) ಅಥವಾ ಸ್ಥಿರ ಠೇವಣಿ (FD) ಇಟ್ಟರೆ ಹೆಚ್ಚಿನ ಬಡ್ಡಿ ದರ ಸಿಗುತ್ತದೆ ಹಾಗಾಗಿ ಬ್ಯಾಂಕಿನಲ್ಲಿ ಹೆಚ್ಚಿನ ಜನ ಎಫ್ಡಿ ಇಡಲು ಮುಂದಾಗುತ್ತಾರೆ.

ಅದರಲ್ಲೂ ಹಿರಿಯ ನಾಗರಿಕರಿಗೆ ಕೆಲವು ಪ್ರಮುಖ ಪ್ರಯೋಜನಗಳ ಜೊತೆಗೆ ಅತ್ಯುತ್ತಮ ಬಡ್ಡಿ ದರದಲ್ಲಿ ಎಫ್ ಡಿ ಇಡಲು ಬ್ಯಾಂಕ್ (best interest rate on FD) ಗಳು ಅವಕಾಶ ಮಾಡಿಕೊಡುತ್ತವೆ.

Fixed Deposit

ಬೇರೆ ಎಲ್ಲಾ ಬ್ಯಾಂಕುಗಳಿಗೆ ಹೋಲಿಸಿದರೆ ಎಸ್ ಬಿ ಐ ನ ಈ ಒಂದು ಸ್ಕೀಮ್ ನಲ್ಲಿ ನೀವು ಅತಿ ಉತ್ತಮ ಲಾಭ ಪಡೆಯಬಹುದಾಗಿದೆ.

ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸಿಗುತ್ತೆ 50,000 ಸ್ಕಾಲರ್ಶಿಪ್! ಕೂಡಲೇ ಅಪ್ಲೈ ಮಾಡಿ

ಎಸ್ ಬಿ ಐ ಅಮೃತ್ ಕಳಶ್ ಯೋಜನ (SBI Amrit Kalash FD scheme)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಅಮೃತ ಕಳಶ್ ಎನ್ನುವ ಎಫ್ ಡಿ ಯೋಜನೆ ಆರಂಭಿಸಿದೆ. ಕಳೆದ ಎರಡು ತಿಂಗಳ ಹಿಂದೆ ಈ ಯೋಜನೆ ಮುಗಿಯಬೇಕಿತ್ತು ಆದರೆ ಜನರ ಬೇಡಿಕೆ ಹೆಚ್ಚುವುದರಿಂದ ಎಸ್ ಬಿ ಐ ಅಮೃತ್ ಕಳಶ್ ಸ್ಕೀಮ್ ನ ಗಡುವು ವಿಸ್ತರಣೆ ಮಾಡಿದೆ.

ಇಂದು ಗ್ರಾಹಕರ ನಡುವೆ ಹೆಚ್ಚು ಫೇಮಸ್ ಆಗಿರುವ ಅಮೃತ ಕಳಶ್ ಯೋಜನೆ ಆರಂಭವಾಗಿದ್ದು 2023 ಫೆಬ್ರುವರಿ ತಿಂಗಳಿನಲ್ಲಿ. ಅಗಸ್ಟ್ ವರೆಗೆ ಮಾತ್ರ ರೂಪಿಸಲಾಗಿದ್ದ ಸ್ಕೀಮ್ ಇಂದಿಗೂ ಕೂಡ ಮುಂದುವರೆಯಲು ಇದರ ಬೆನಿಫಿಟ್ ಗಳು ಕಾರಣ. ಅಮೃತ್ ಕಳಶ್ ವಿಶೇಷ ಬೆನಿಫಿಟ್ ಗಳ ಬಗ್ಗೆ ತಿಳಿಯೋಣ.

ಅಮೃತ್ ಕಳಶ್ ಯೋಜನೆಯಲ್ಲಿ ಉತ್ತಮ ಬಡ್ಡಿದರ! (Good rate of interest)

ಅಮೃತ್ ಕಳಶ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮೂರು ತಿಂಗಳಿಗೆ ಅಥವಾ ಅರ್ಧವಾರ್ಷಿಕಕ್ಕೆ ಬಡ್ಡಿ ಪಡೆದುಕೊಳ್ಳಬಹುದು ಇಲ್ಲಿ ಹೂಡಿಕೆ ಮಾಡಿದ ಹಣದ ಬಡ್ಡಿಗೆ ಟಿಡಿಎಸ್ ಪಾವತಿ (TDS) ಮಾಡಬೇಕಾಗುತ್ತದೆ ಆದರೆ ನೀವು ಐಟಿಆರ್ (ITR filing) ಸಲ್ಲಿಸುವ ಸಮಯದಲ್ಲಿ ಡಿಡಕ್ಷನ್ ಕ್ಲೈಮ್ (deduction climb) ಮಾಡಬಹುದು. ಯೋಜನೆಯ ಅವಧಿ ಮುಗಿದ ನಂತರ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡು ತಿಂಗಳ ಆಧಾರದ ಮೇಲೆ ಹಣವನ್ನು ಹಿಂಪಡೆಯಬಹುದು.

ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 75,000 ಸ್ಕಾಲರ್ಶಿಪ್, ಇದು ಕೋಲ್ಗೇಟ್ ಸಂಸ್ಥೆಯ ಕೊಡುಗೆ

State Bank Of Indiaಅಮೃತ ಕಳಶ್ ಯೋಜನೆ 400 ದಿನಗಳ ಯೋಜನೆ ಆಗಿದ್ದು ನೀವು ಒಂದೇ ಸಲಕ್ಕೆ ಹಣವನ್ನು ಡಿಪೋಸಿಟ್ ಇಡಬೇಕಾಗುತ್ತದೆ. ಅತ್ಯುತ್ತಮ ಬಡ್ಡಿ ದರವನ್ನು ನೀಡಲಾಗುತ್ತಿದ್ದು ಈ ಸ್ಕೀಮ್ ಗೆ ವಾರ್ಷಿಕ 7.1% ಬಡ್ಡಿಯನ್ನು ಪಡೆಯಬಹುದು. ಹಾಗೂ ಹಿರಿಯ ನಾಗರಿಕರಿಗೆ 7.6% ಬಡ್ಡಿ ನಿಗದಿಪಡಿಸಲಾಗಿದೆ.

ಯೋಜನೆಯ ಇತರ ಪ್ರಯೋಜನಗಳನ್ನು ನೋಡುವುದಾದರೆ ಭಾರತೀಯ ಪ್ರಜೆಗಳು ಮಾತ್ರವಲ್ಲದೆ ಎನ್ ಆರ್ ಐ (NRI)!ಗಳು ಕೂಡ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಸ್ಕೀಮ್ 400 ದಿನಗಳದ್ದಾಗಿದ್ದು 7.6% ವರೆಗೆ ಬಡ್ಡಿ ಪಡೆದುಕೊಳ್ಳಲು ಸಾಧ್ಯವಿದೆ. ಹೂಡಿಕೆಯ ಮೊತ್ತ 2 ಕೋಟಿಗಿಂತಲೂ ಕಡಿಮೆ ಆಗಿರಬೇಕು. 400 ದಿನಗಳಲ್ಲಿ ನೀವು ಅಸಲು ಹಾಗೂ ಬಡ್ಡಿ ಸೇರಿ ಅತ್ಯುತ್ತಮ ಲಾಭವನ್ನು ಪಡೆದುಕೊಳ್ಳಬಹುದು.

ಮನೆ ಇಲ್ಲದವರು ಸ್ವಂತ ಮನೆ ಕಟ್ಟಿಕೊಳ್ಳಲು ಸಾಲ ಮತ್ತು ಸಹಾಯಧನ! ಅರ್ಜಿ ಆಹ್ವಾನ

ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೂಡಿಕೆಯ ಹಣದ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (get loan with low interest) ಕೂಡ ಸಿಗುತ್ತದೆ. ಸ್ಕೀಮ್ ನಿಂದ ಸಿಗುವ ಬಡ್ಡಿಯ ಮೇಲೆ ಟಿಡಿಎಸ್ ಕಡಿತಗೊಳ್ಳುತ್ತದೆಯಾದರೂ ನೀವು ಐಟಿಆರ್ ಫೈಲಿಂಗ್ ಮಾಡುವಾಗ ರೀಫಂಡ್ ಮಾಡಿಕೊಳ್ಳಲು ಅವಕಾಶವಿದೆ.

ಉತ್ತಮ ಲಾಭವನ್ನು ನೀಡುವಂತಹ 400 ದಿನಗಳ ಎಸ್ ಬಿ ಐ ಅಮೃತ್ ಕಳಶ್ ಎಫ್ ಡಿ ಸ್ಕೀಮ್ (Fixed Deposit Scheme) ನಲ್ಲಿ ಡಿಸೆಂಬರ್ 31ರ ಒಳಗೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಿ.

New Scheme for State Bank Account Holders, Your money will double