ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ ₹60,000 ಸಂಪಾದನೆ ಮಾಡಿ, ಸ್ವಲ್ಪ ಜಾಗ ಇದ್ರೂ ಸಾಕು!

Bank ATM Franchise : ಎಟಿಎಂ ಫ್ರಾಂಚೈಸಿ ಪಡೆಯುವ ಅವಕಾಶ ನೀಡುತ್ತಿದ್ದು, ನಿಮ್ಮ ಬಳಿ ಖಾಲಿ ಜಾಗ ಇದ್ದರೆ ಅದರಲ್ಲಿ ಹೊಸ ಎಟಿಎಂ ಶುರು ಮಾಡಬಹುದು. ಇದರಿಂದ ನಿಮಗೆ ಉತ್ತಮವಾದ ಲಾಭ ಸಿಗುತ್ತದೆ

Bank ATM Franchise : ನಮ್ಮ ಕನಸಿನ ಜೀವನ ನಡೆಸಿಕೊಂಡು ಹೋಗುವುದಕ್ಕೆ ಉತ್ತಮ ಆದಾಯ ನಮಗೆ ಬೇಕೇ ಬೇಕು. ಈಗಿನ ಪ್ರಪಂಚದಲ್ಲಿ ಹಣ ಇಲ್ಲ ಎಂದರೆ, ಯಾವುದನ್ನು ಪಡೆಯಲು ಸಾಧ್ಯವಿಲ್ಲ.

ಹಾಗಾಗಿ ಹಣಗಳಿಕೆ ಮುಖ್ಯ, ಈಗ ಹಣ ಗಳಿಸಲು ಮೊದಲಿನ ಹಾಗೆ ಕಡಿಮೆ ಮಾರ್ಗಗಳಿಲ್ಲ, ಸುಲಭವಾಗಿ ಹಣ ಗಳಿಸುವುದಕ್ಕೆ ಬಹಳಷ್ಟು ಆಯ್ಕೆಗಳಿದ್ದು, ಅವುಗಳಲ್ಲಿ ಒಂದು ಬ್ಯಾಂಕ್ ಇಂದ ATM ಫ್ರಾಂಚೈಸಿ ಪಡೆದು, ಶುರುಮಾಡುವುದಾಗಿದೆ. ಇದರಿಂದ ನೀವು ತಿಂಗಳಿಗೆ 50 ರಿಂದ 60 ಸಾವಿರ ವರೆಗು ಹಣ (Money Earning Tips) ಗಳಿಸಬಹುದು.

ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯೋದು ಹೇಗೆ? ಅದಕ್ಕೂ ಇದೆ ನಿಯಮ ಗೊತ್ತಾ?

ಈಗ ಬ್ಯಾಂಕ್ ನಲ್ಲಿ ಹಣಕಾಸಿನ ವ್ಯವಹಾರ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಾಗೆಯೇ ATM ಇಂದ ನಗದು ಪಡೆಯುವವರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಹಾಗಾಗಿ ಬ್ಯಾಂಕ್ ಗಳು ಹೆಚ್ಚು ಕಡೆಗಳಲ್ಲಿ ಎಟಿಎಂ ಸ್ಥಾಪನೆ ಮಾಡಲು ಮುಂದಾಗಿದೆ.

ಈ ಕಾರಣದಿಂದ ಜನರಿಗೆ ಎಟಿಎಂ ಫ್ರಾಂಚೈಸಿ ಪಡೆಯುವ ಅವಕಾಶ ನೀಡುತ್ತಿದ್ದು, ನಿಮ್ಮ ಬಳಿ ಖಾಲಿ ಜಾಗ ಇದ್ದರೆ ಅದರಲ್ಲಿ ಹೊಸ ಎಟಿಎಂ ಶುರು ಮಾಡಬಹುದು. ಇದರಿಂದ ನಿಮಗೆ ಉತ್ತಮವಾದ ಲಾಭ ಸಿಗುತ್ತದೆ, ಒಳ್ಳೆಯ ಗಳಿಕೆ ಮಾಡುತ್ತೀರಿ.

ಶುರು ಮಾಡಿ ಎಟಿಎಂ

ಹೊಸ ATM ಶುರು ಮಾಡುವುದಕ್ಕೆ ಮುಖ್ಯವಾಗಿ ನಿಮ್ಮ ಬಳಿ ಖಾಲಿ ಜಾಗ ಇರಬೇಕು, ಜೊತೆಗೆ ನಿಮ್ಮ ಬಳಿ ಇರುವ ಖಾಲಿ ಜಾಗ ಇನ್ನೊಂದು ATM ಇಂದ ಮಿನಿಮಮ್ 100 ಮೀಟರ್ ದೂರದಲ್ಲಿ ಇರಬೇಕು.

ಹಾಗೆಯೇ 24 ಗಂಟೆಗಳ ಕಾಲ ವಿದ್ಯುತ್ ಸೇವೆ ಇರುವುದು ಮುಖ್ಯವಾಗುತ್ತದೆ. ಜೊತೆಗೆ ಕರೆಂಟ್ ಹೋದರೆ, ಎಟಿಎಂ ಕೆಲಸ ಮಾಡುವುದಕ್ಕೆ ಜೆನೆರೇಟರ್ ವ್ಯವಸ್ಥೆ ಮಾಡಬೇಕು. ಇದೆಲ್ಲವೂ ಇದ್ದರೆ, ನೀವು ಕೂಡ ಎಟಿಎಂ ಫ್ರಾಂಚೈಸಿ ಪಡೆದು, ಹೆಚ್ಚು ಲಾಭ ಪಡೆದುಕೊಳ್ಳಬಹುದು.

ಚಿನ್ನದ ಬೆಲೆ ಕೊಂಚ ಏರಿಕೆ, ಈ ವಾರ ಇನ್ನಷ್ಟು ಏರುಪೇರಾಗಲಿದೆಯಂತೆ ಚಿನ್ನ ಮತ್ತು ಬೆಳ್ಳಿ ಬೆಲೆ! ಇಲ್ಲಿದೆ ಡೀಟೇಲ್ಸ್

Bank ATM Franchiseಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:

ಎಟಿಎಂ ಫ್ರಾಂಚೈಸಿ ಅಪ್ಲೈ ಮಾಡಲು ಕೆಲವು ದಾಖಲೆಗಳು ಮುಖ್ಯವಾಗಿ ನಿಮ್ಮ ಬಳಿ ಇರಲೇಬೇಕು. ಆ ದಾಖಲೆಗಳು ಯಾವುವು ಎಂದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಪಾಸ್ ಬುಕ್ (Bank Passbook), ಪ್ಯಾನ್ ಕಾರ್ಡ್ (Pan Card), ಕರೆಂಟ್ ಬಿಲ್ ಪಾವತಿ ಮಾಡಿರುವ ರಶೀದಿ ಇದಿಷ್ಟು ಮಾಹಿತಿಗಳು ದಾಖಲೆಗಳು ಬೇಕಾಗುತ್ತದೆ. ಇದಿಷ್ಟು ನಿಮ್ಮ ಬಳಿ ಇದ್ದರೆ, ಸುಲಭವಾಗಿ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಉತ್ತಮ ಆದಾಯ ಪಡೆಯಬಹುದು.

ಈ ಕಾರ್ಡ್ ಇದ್ರೆ ಸಿಗುತ್ತೆ 10 ಲಕ್ಷ ಲೋನ್! ಆಧಾರ್ ಅಲ್ಲ, ಪ್ಯಾನ್ ಕಾರ್ಡ್ ಅಲ್ಲ; ಯಾವ ಕಾರ್ಡ್ ಗೊತ್ತಾ?

ಈ ಬಗ್ಗೆ ಇನ್ನೂ ಕೂಡ ಅರ್ಜಿ ಕರೆದಿರುವ ಬಗ್ಗೆ ಅಧಿಕೃತವಾಗಿ ಇನ್ನು ಕೂಡ ಯಾವುದೇ ಅಧಿಸೂಚನೆ ಬಂದಿಲ್ಲ. ಆದರೆ ಮೀಡಿಯಾ ಇಂದ ಅಗತ್ಯವಿರುವ ಮಾಹಿತಿಗಳು ಸಿಕ್ಕಿದೆ. ನೀವು ಎಟಿಎಂ ಶುರು ಮಾಡಲು, ನಿಮಗೆ ಹತ್ತಿರ ಇರುವ ಬ್ಯಾಂಕ್ ಬ್ರಾಂಚ್ ಗೆ ಹೋಗಿ ಶುರು ಮಾಡಬಹುದು. ಉತ್ತಮವಾದ ಸ್ವಉದ್ಯಮ ಮಾಡಿ, ಒಳ್ಳೆಯ ಆದಾಯ ಗಳಿಸಬೇಕು ಎಂದುಕೊಂಡಿದ್ದರೆ ಅಂಥವರಿಗೆ ಇದು ಒಳ್ಳೆಯ ಆಯ್ಕೆ ಆಗಿದೆ.

Start an ATM Franchise and earn 60,000 per month