ಬಡವರಿಗೆ ಮನೆ ಕಟ್ಟಿಸಿಕೊಡಲು ಮುಂದಾದ ಕೇಂದ್ರ ಸರ್ಕಾರ! ಯೋಜನೆಯ ಸೌಲಭ್ಯ ಪಡೆದುಕೊಳ್ಳಿ

ಪಿಎಮ್ ಆವಾಸ್ ಯೋಜನೆಯ ಮೂಲಕ ಮನೆ ಕಟ್ಟಿಸಿಕೊಡಲು ಮುಂದಾದ ಕೇಂದ್ರ ಸರ್ಕಾರ! ಇಂದೇ ಅಪ್ಲೈ ಮಾಡಿ

Loan Scheme : ಕೇಂದ್ರ ಸರ್ಕಾರವು ನಮ್ಮ ದೇಶದ ಜನರಿಗೆ, ಅದರಲ್ಲೂ ಕಷ್ಟದಲ್ಲಿ ಇರುವವರಿಗೆ ಸಹಾಯ ಆಗಲಿ ಎಂದು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ವಸತಿ ಇಲ್ಲದವರಿಗೆ ಸ್ವಂತ ಮನೆ (Own House) ಕಟ್ಟಿಸಿಕೊಳ್ಳಲು ಸಹಾಯ ಮಾಡುವಂತ ಪಿಎಮ್ ಆವಾಸ್ ಯೋಜನೆಯ ಬಗ್ಗೆ ಸರ್ಕಾರದಿಂದ ಹೊಸ ಅಪ್ಡೇಟ್ ಸಿಕ್ಕಿದ್ದು, ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಯಾರೆಲ್ಲಾ ಅಂದುಕೊಂಡಿದ್ದೀರೋ ಅವರೆಲ್ಲರೂ ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ, ಪಿಎಮ್ ಮೋದಿ ಅವರು 3ನೇ ಬಾರಿ ಪ್ರಧಾನಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಿಎಮ್ ಆವಾಸ್ ಯೋಜನೆಯನ್ನು ಮತ್ತೊಮ್ಮೆ ಜಾರಿಗೆ ತಂದಿದ್ದಾರೆ.

ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಈ ನಿಯಮ ಕಡ್ಡಾಯ! ಸಬ್ಸಿಡಿ ದುರ್ಬಳಕೆ ಮಾಡೋರಿಗೆ ಹೊಸ ಕ್ರಮ ಜಾರಿ

ಈ ಯೋಜನೆಯ ಮೂಲಕ ಸ್ವಂತ ಮನೆ ಮಾಡಿಕೊಳ್ಳಲು ಆರ್ಥಿಕವಾಗಿ ಸಂಕಷ್ಟ ಪಡುತ್ತಿರುವ ಅಭ್ಯರ್ಥಿಗಳಿಗೆ 6 ಲಕ್ಷದವರೆಗೂ ಈ ಯೋಜನೆಯಲ್ಲಿ ಅತೀ ಕಡಿಮೆ ಬಡ್ಡಿಗೆ ಸಾಲ (Loan) ಸೌಲಭ್ಯ ಸಿಗಲಿದೆ. ಹಾಗಿದ್ದಲ್ಲಿ ಈ ಯೋಜನೆಗೆ ಅಪ್ಲೈ ಮಾಡೋದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ..

ಪಿಎಮ್ ಆವಾಸ್ ಯೋಜನೆಯ ಲಾಭಗಳು:

*ಹಳ್ಳಿಯಲ್ಲಿ ಇರುವ ಜನರು ಪಿಎಮ್ ಆವಾಸ್ ಯೋಜನೆಗೆ ಅಪ್ಲೈ ಮಾಡಿದರೆ, ಮನೆ ಕಟ್ಟಿಕೊಳ್ಳಲು 1.50 ಲಕ್ಷದವರೆಗು ಸಹಾಯಧನ ಪಡೆಯಬಹುದು.

*ಸಿಟಿಗಳಲ್ಲಿ ವಾಸ ಮಾಡುವವರು ಈ ಯೋಜನೆಯ ಮೂಲಕ 1.70 ಲಕ್ಷದವರೆಗೂ ಸಹಾಯಧನ ಪಡೆಯಬಹುದು.

*ಇನ್ನು ಸಾಲಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಅತೀ ಕಡಿಮೆ ಬೆಲೆಗೆ ₹6 ಲಕ್ಷ ರೂಪಾಯಿಗಳವರೆಗು Loan ಸೌಲಭ್ಯ ಸಿಗುತ್ತದೆ.

ಮಾರುಕಟ್ಟೆಗೆ ಬಂತು ಕೇವಲ ₹2500 ರೂಪಾಯಿ EMI ಕಟ್ಟುವ ಪವರ್ ಫುಲ್ ಎಲೆಕ್ಟ್ರಿಕ್ ಸ್ಕೂಟರ್

Free Housing Schemeಅಗತ್ಯವಿರುವ ದಾಖಲೆಗಳು:

ಪಿಎಮ್ ಆವಾಸ್ ಯೋಜನೆಯ ಮೂಲಕ ಸಹಾಯಧನ ಪಡೆಯಲು ಅಥವಾ ಸಾಲ ಸೌಲಭ್ಯವನ್ನು ಪಡೆಯಲು ನಿಮ್ಮ ಬಳಿ ಈ ಕೆಲವು ದಾಖಲೆಗಳು ಇರಬೇಕು. ಆ ದಾಖಲೆಗಳು ಯಾವುವು ಎಂದು ತಿಳಿಯೋಣ..

*ಕ್ಯಾಸ್ಟ್ ಸರ್ಟಿಫಿಕೇಟ್
*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಫೋನ್ ನಂಬರ್
*ಪಾಸ್ ಪೋರ್ಟ್ ಸೈಜ್ ಫೋಟೋ
ಈ ಎಲ್ಲಾ ದಾಖಲೆಗಳ ಅಗತ್ಯವಿದೆ.

ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್ ಹಣಕ್ಕೆ ಆಕರ್ಷಕ ಬಡ್ಡಿ ನೀಡುತ್ತಿವೆ ಈ 4 ಬ್ಯಾಂಕುಗಳು

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಒಂದು ವೇಳೆ ನೀವು ಕೂಡ ಸ್ವಂತ ಮನೆ ಕಟ್ಟಿಸುವ ಪ್ಲಾನ್ ಹೊಂದಿದ್ದು, ಪಿಎಮ್ ಆವಾಸ್ ಯೋಜನೆಯ ಮೂಲಕ ಸರ್ಕಾರದ ಸಹಾಯ ಪಡೆಯಬೇಕು ಎಂದು ಬಯಸಿದರೆ, ನಿಮ್ಮ ಹತ್ತಿರ ಇರುವ ಬೆಂಗಳೂರು ಒನ್, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅಥವಾ ಆವಾಸ್ ಯೋಜನೆಗೆ ಸಂಬಂಧಿಸಿದ ವೆಬ್ಸೈಟ್ ಗೆ ಭೇಟಿ ನೀಡಿ, ನೀವೇ ಅರ್ಜಿ ಸಲ್ಲಿಸಬಹುದು. https://pmaymis.gov.in/ ಇದು ಸರ್ಕಾರ ಅಧಿಕೃತ ವೆಬ್ಸೈಟ್ ಆಗಿದೆ.

The central government is to build houses for the poor by this Scheme