1 ಎಕರೆ ಕೃಷಿ ಭೂಮಿ ಇರೋ ರೈತರಿಗೆ ಸಿಗಲಿದೆ ಈ ಯೋಜನೆಯ ಬೆನಿಫಿಟ್! ಬಂಪರ್ ಕೊಡುಗೆ
ಒಂದು ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಕೃಷಿ ಪಾತ್ರ ಬಹಳ ದೊಡ್ಡದು. ಅದರಲ್ಲೂ ಭಾರತ ದೇಶದ ಶೇಕಡ 70ರಷ್ಟು ಜನ ಕೃಷಿಯನ್ನು ನಂಬಿಕೊಂಡೆ ಜೀವನ ನಡೆಸುತ್ತಾರೆ. ಹೀಗಿರುವಾಗ ಕೃಷಿಯನ್ನು (Agriculture) ಮಾಡುವ ರೈತರ ಅಭಿವೃದ್ಧಿ ಕೂಡ ಬಹಳ ಮುಖ್ಯವಾಗಿರುತ್ತದೆ.
ಇದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಬೇರೆ ಬೇರೆ ರಾಜ್ಯ ಸರ್ಕಾರಗಳು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನ ಜಾರಿಗೆ ತರುತ್ತವೆ. ಅವುಗಳಲ್ಲಿ ಸದ್ಯ ಹೆಚ್ಚು ಪ್ರಚಲಿತದಲ್ಲಿ ಇರುವುದು ಫಸಲ್ ಬಿಮಾ ಯೋಜನೆ.
ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗಲಿದೆ ₹50,000 ರೂಪಾಯಿ; ಇಂದೇ ಅಪ್ಲೈ ಮಾಡಿ
ಏನಿದು ಫಸಲ್ ಬಿಮಾ ಯೋಜನೆ?
ಇದು ರೈತರಿಗೆ (Farmers) ವಿಮಾ ರಕ್ಷಣೆ ಜೊತೆಗೆ ಸಹಾಯಧನ ನೀಡುವ ಯೋಜನೆ ಆಗಿದ್ದು ಈ ಹಿಂದೆಯೇ ಜಾರಿಯಲ್ಲಿ ಇರುವ ಈ ಯೋಜನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಮಾಡಿದೆ. ರೈತರಿಗೆ ಸಹಾಯಧನ ನೀಡುವ ಮೂಲಕ ರೈತರ ಕೃಷಿ ಚಟುವಟಿಕೆಗಳನ್ನ ಉತ್ತೇಜಿಸಲಾಗುತ್ತದೆ.
ರೈತರು ಕೃಷಿ ಚಟುವಟಿಕೆಗಳನ್ನು ಮಾಡುವಾಗ ಎಲ್ಲಾ ಸಮಯದಲ್ಲಿ ಉತ್ತಮ ಫಸಲು ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಕಷ್ಟು ಬಾರಿ ಬಂಡವಾಳ ಹಾಕಿದ್ದು ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗುತ್ತದೆ.
ಇದೇ ಕಾರಣಕ್ಕೆ ಫಸಲು ಬಿಮಾ ಯೋಜನೆಯ ಅಡಿಯಲ್ಲಿ ರೈತರಿಗೆ ವಿಮಾ ಸೌಲಭ್ಯ (Insurance) ಒದಗಿಸಲಾಗುತ್ತದೆ. ಇದನ್ನು ಪಡೆದುಕೊಳ್ಳಲು ಯಾರು ಅರ್ಹರು ಯಾವಲ್ಲ ದಾಖಲೆಗಳು ಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ಉಚಿತವಾಗಿ ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್!
ಈ ದಾಖಲೆಗಳು ಮುಖ್ಯ!
* ರೈತರ ಪಹಣಿ ಪತ್ರ
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಅಡ್ರೆಸ್ ಪ್ರೂಫ್
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
* ಪಾಸ್ಪೋರ್ಟ್ ಅಳತೆಯ ಫೋಟೋ
ಈ ಸೌಲಭ್ಯವನ್ನು ಪಡೆದುಕೊಳ್ಳಲು https://pmfby.gov.in/ ಸರ್ಕಾರದ ಈ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಸ್ವಂತ ಮನೆ ಕಟ್ಟೋರಿಗೆ ಸಿಗಲಿದೆ ಕಡಿಮೆ ಬಡ್ಡಿಗೆ ಹೋಂ ಲೋನ್
ಯಾವ ಸಂದರ್ಭದಲ್ಲಿ ಸಿಗುತ್ತೆ, ವಿಮಾ ಸೌಲಭ್ಯ? Insurance Policy
ಒಂದು ಎಕರೆ ಜಮೀನು ಇರುವವರು ಕೂಡ ಬಿಮಾ ಫಸಲ್ ಯೋಜನೆಯ ಅಡಿಯಲ್ಲಿ ವಿಮಾ ಸೌಲಭ್ಯ (Insurance) ಮತ್ತು ಸಹಾಯಧನ ಪಡೆದುಕೊಳ್ಳಬಹುದಾಗಿದೆ. ಪ್ರಕೃತಿ ವಿಕೋಪದಿಂದ ಬೆಳೆ ಹಾನಿ ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ಕೃಷಿಕರು ವಿಮೆ ಸೌಲಭ್ಯ ಪಡೆಯಬಹುದು.
ಈ ಯೋಜನೆಯ ಅಡಿಯಲ್ಲಿ ಇತ್ತೀಚೆಗೆ ಹದಿಮೂರು ಸಾವಿರ ರೂಪಾಯಿಗಳ ಸಹಾಯಧನವನ್ನು ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿ ಅನುಭವಿಸಿದ ರೈತರಿಗೆ ವಿತರಣೆ ಮಾಡಲಾಗಿದೆ. ರೈತರಿಗಾಗಿಯೇ ಜಾರಿಗೆ ಬಂದಿರುವ ಒಂದು ಅತ್ಯುತ್ತಮ ಯೋಜನೆ ಫಸಲ್ ಬಿಮಾ ಯೋಜನೆಯಾಗಿದ್ದು ಪ್ರತಿಯೊಬ್ಬ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ನಿಮ್ಮ ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? ಈ ರೀತಿ ಸುಲಭವಾಗಿ ಬದಲಾಯಿಸಿಕೊಳ್ಳಿ
Farmers with 1 acre of agricultural land will get the benefit of this scheme